ಬಾವಿಯಲ್ಲಿ ಮುಳುಗಿ ಪತ್ರಕರ್ತ ಸಾವು

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ರೋಹಿತ್ ಬೇವಿನಹಳ್ಳಿ ರಾಜಣ್ಣ ಶನಿವಾರ ಮಧ್ಯಾನ್ಹ ಊರ್ಡಿಗೆರೆ ಸಮೀಪದ ಕಜುರನಹಳ್ಳಿಯಲ್ಲಿ ತಮ್ಮ ಸೋದರಮಾನವ ತೋಟದ ಬಾವಿಯಲ್ಲಿ ಮುಳುಗಿ ಅಸುನೀಗಿದ್ದಾರೆ. ಅವರು ತಮ್ಮ ಕಿರಿಯ ಸಹೋದರ ಕುಮಾರಸ್ವಾಮಿ ಮತ್ತು ಮಾವ ಬಸವರಾಜು ಅವರ ಪುತ್ರ ವಿನಯ್ ಜತೆ ಸೇರಿ ಈಜಾಡುತ್ತಿದ್ದರು. ರೋಹಿತ್ ಮೇಲಿನಿಂದ ೧೫ ಅಡಿ ಬಾವಿಗೆ ಧುಮಿಕಿದ್ದಾರೆ. ಆಯತಪ್ಪಿ ಮೆಟ್ಟಿಲಿಗೆ ತಲೆ ಹಣೆ ಹೊಡೆದುಕೊಂಡು ಪ್ರಜ್ಞೆ ತಪ್ಪಿ ಮುಳುಗಿದ್ದಾರೆ. ಕುಮಾರಸ್ವಾಮಿ ಮತ್ತು ವಿನಯ್ ಅಸಹಾಯಕರಾಗಿ ನೋಡಬೇಕಾಯಿತು. ದುರಂತ ಎಂದರೆ ರೋಹಿತ್ ತಂದೆ ರಾಜಣ್ಣ ಬಾವಿಯ ಮೇಲೆ ಕುಳಿತುಕೊಂಡು ದುರ್ಘಟನೆಗೆ ಸಾಕ್ಷಿಯಾಗಿದ್ದಾರೆ. ಕ್ಯಾತಸಂದ್ರ ಸಬ್ ಇನ್ಸ್ಪೆಕ್ಟರ್ ರಾಮ್ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.