ನಿಮ್ಮ ಮನೆಯಲ್ಲಿ ಕನ್ನಡಿ ಈ ಸ್ಥಳದಲ್ಲಿ ಇರಲೇಬಾರದು..
ಇಂದಿನ ದಿನಗಳಲ್ಲಿ ವಾಸ್ತು ನಂಬದ ಜನರು ಸಿಗುವುದು ತುಂಬಾ ವಿರಳ. ಪ್ರತಿಯೊಬ್ಬರು ವೆಸ್ಟ್ರನ್ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದರೂ ಸಹ ವಾಸ್ತುವಿನೊಳಗೆ ಬಂಧಿಯಾಗಿರುವರು. ಇದು ಕಚೇರಿ ಅಥವಾ ಮನೆಯೇ ಆಗಿರಬಹುದು. ಕೆಲವರು ತಾವು ಧರಿಸುವ ಬಟ್ಟೆಯಲ್ಲೂ ಸಹ ಆಯಾ ದಿನದ ಗ್ರಹಗತಿಯ ಪ್ರಕಾರ ಆಯಾ ಬಣ್ಣದ ಬಟ್ಟೆಯನ್ನು ಧರಿಸುತ್ತಾರೆ . ವಾಸ್ತುವಿನಲ್ಲಿ ಕನ್ನಡಿ ಎನ್ನುವುದು ತುಂಬಾ ಪ್ರಮುಖ ಪಾತ್ರ ವಹಿಸುವುದು. ಕನ್ನಡಿಯು ನಿಮ್ಮ ಮನೆಯಲ್ಲಿ ಶಕ್ತಿಯನ್ನು ತರಬಹುದು ಅಥವಾ ನಾಶ ಮಾಡಬಹುದು ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ಮನೆಯಲ್ಲಿ ನೀವು ಕನ್ನಡಿ ಅಳವಡಿಸಿಕೊಳ್ಳುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶವೆಂದರೆ
ಮನೆಯ ಮುಖ್ಯದ್ವಾರವು ಕನ್ನಡಿಯಲ್ಲಿ ಕಾಣುತ್ತಾ ಇದ್ದರೆ ನೀವು ಆ ಕನ್ನಡಿಯನ್ನು ಸ್ಥಳಾಂತರಿಸಬೇಕು. ವಾಸ್ತುಶಾಸ್ತ್ರದ ಪ್ರಕಾರ ಇದು ಮನೆಯೊಳಗಿನ ಎಲ್ಲಾ ಧನಾತ್ಮಕ ಶಕ್ತಿಯನ್ನು ಹೊರಹಾಕುವುದು ಮತ್ತು ನಿಮಗೆ ಅವಕಾಶಗಳು ಕೈತಪ್ಪುವುದು.ಹಾಗೂ ಮಲಗುವ ಹಾಸಿಗೆಯನ್ನು ಸಹ ತೋರಿಸಬಾರದು. ಹೀಗೆ ಮಾಡಿದರೆ ಅದರಿಂದ ನಕಾರಾತ್ಮಕ ಶಕ್ತಿ ಬರುವುದು.ನಿಮಗೆ ಕಿಟಕಿ ಬಾಗಿಲಿನಲ್ಲಿ ಎಲ್ಲವೂ ಕಾಣುತ್ತಲಿದ್ದರೆ ಆಗ ನೀವು ಅದರ ವಿರುದ್ಧ ದಿಕ್ಕಿನಲ್ಲಿ ಕನ್ನಡಿ ಅಳವಡಿಸಿ. ನಕಾರಾತ್ಮಕ ಶಕ್ತಿ ಇರುವಂತಹ ಜಾಗದ ವಿರುದ್ಧ ದಿಕ್ಕಿನಲ್ಲಿ ಕನ್ನಡಿ ಅಳವಡಿಸಿಕೊಳ್ಳಿ. ಇದರಿಂದ ಮನೆಯಲ್ಲಿ ಇರುವಂತಹ ಎಲ್ಲಾ ನಕಾರಾತ್ಮಕ ಶಕ್ತಿಗಳು ಹೊರಹೋಗುವುದು.
ಇದಿಷ್ಟು ಮನೆಯಲ್ಲಿ ಕನ್ನಡಿಯನ್ನು ಅಳವಡಿಸುವ ಬಗ್ಗೆ ರೀತಿಯಾದರೆ ಇನ್ನು ಕಚೇರಿಗಳಲ್ಲಿ
ಸಮೃದ್ಧಿ ಕಚೇರಿಗೆ ಬರಲು ನೀವು ಲಾಕರ್ ಎದುರು ಕನ್ನಡಿ ಅಳವಡಿಸಿಕೊಳ್ಳಿ. ತುಂಬಾ ಇಕ್ಕಟ್ಟಾಗಿರುವ ಜಾಗದಲ್ಲಿ ಕನ್ನಡಿ ಅಳವಡಿಸಬೇಡಿ. ಯಾಕೆಂದರೆ ಇದರಿಂದ ನಕಾರಾತ್ಮಕ ಶಕ್ತಿ ಬರುವುದು. ಇಕ್ಕಟ್ಟಾಗಿರುವ ಜಾಗದಲ್ಲಿ ನಕಾರಾತ್ಮಕತೆ ಮತ್ತು ಕ್ಲಾಸ್ಟ್ರೋಫೋಬಿಕ್ ಸುತ್ತುವರಿದಿರುವುದು. ಇಂತಹ ಜಾಗದಲ್ಲಿ ಕನ್ನಡಿ ಅಳವಡಿಸಬೇಡಿ. ಕನ್ನಡಿಯಲ್ಲಿ ಒಳ್ಳೆಯ ದೃಶ್ಯಗಳು ಮತ್ತು ಧನಾತ್ಮಕ ಶಕ್ತಿಯು ಬರುವಂತಿರಲಿ. ಕಿಟಕಿಗೆ ವಿರುದ್ಧ ದಿಕ್ಕಿನಲ್ಲಿ ಕಿರುಕೋಣೆಯಲ್ಲಿ ಕನ್ನಡಿ ಅಳವಡಿಸಿಕೊಂಡರೆ ಒಳ್ಳೆಯ ಧನಾತ್ಮಕ ಶಕ್ತಿ ಬರುವುದು.
ವಾಸ್ತು ಪ್ರಕಾರ ಕನ್ನಡಿಗಳನ್ನು ಅಳವಡಿಸಿಕೊಂಡರೆ ಅದರಿಂದ ಖಂಡಿತವಾಗಿಯೂ ನಿಮ್ಮ ಮನೆಯೊಳಗೆ ಧನಾತ್ಮಕ ಶಕ್ತಿಯು ಹರಿದುಬರುವುದರಲ್ಲಿ ಸಂಶಯವೇ ಇಲ್ಲ.