ಖಾಸಗಿ ಶಾಲೆಗಳ ಆನ್‌ ಲೈನ್‌ ಕ್ಲಾಸ್ ಬಂದ್

ರಾಜ್ಯದ ಖಾಸಗಿ ಶಾಲೆಗಳ ಒಕ್ಕೂಟ ರೂಪ್ಸಾ ತನ್ನ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಿದೆ.‌  ಸರ್ಕಾರ ನಮಗೆ ಸರಿಯಾಗಿ ಸ್ಪಂದಿಸುತಿಲ್ಲ ಎಂದು ರೂಪ್ಸಾ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕೋಟಿ ಹೇಳಿದ್ದಾರೆ.

 

ಸರ್ಕಾರ ಜನವರಿ 1ರಿಂದ ಎಸ್ಎಲ್ಸಿ ಮತ್ತು ಪಿಯುಸಿ ಶಾಲೆ ಗಳನ್ನು ಪ್ರಾರಂಭಿಸುವುದಕ್ಕೆ ಆದೇಶ ಹೊರಡಿಸಿದೆ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳ ಒಂದಿಷ್ಟು ಬೇಡಿಕೆಗಳನ್ನುಈಡೇರಿಸಿದರೆ ಮಾತ್ರ ಶಾಲೆಗಳನ್ನು ಪ್ರಾರಂಭಿಸುತ್ತೇವೆ ಸರ್ಕಾರ ಪೋಷಕರಿಗೂ ಮತ್ತು ನಮ್ಮ ನಡುವೆ ಗೊಂದಲ ಸೃಷ್ಠಿ ಮಾಡ್ತಾಯಿದೆ ಸರ್ಕಾರಕ್ಕೆ ಜನೇವರಿ 6 ವರೆಗೆ ಕಾಲಾವಕಾಶ ಕೊಡುತ್ತೇವೆ. ಇದರೊಳಗಾಗಿ ಈಡೇರಿಸಬೇಕು ಇಲ್ಲಾ ಅಂದ್ರೆ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.

  ವರದಿ :ಬಸವರಾಜ ಹುಗಾರ  ಗದಗ