ಕಾಂಗ್ರೆಸ್ ಒಂದು ಮುಳುಗುವ ದೋಣಿಯಿದ್ದಂತೆ: ಅಶ್ವತ್ ನಾರಾಯಣ
ಮಂಗಳವಾರ ವಿಧಾನಪರಿಷತ್ ಕಲಾಪದಲ್ಲಿ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ಮಂಡನೆಗೆ ಸಂಭಂದಿಸಿದ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಸಂಘರ್ಷ ಏರ್ಪಟಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲು ಎಲ್ಲಾ ರಂಗಗಳಲ್ಲೂ ಗೋಚರವಾಗಿದ್ದು. ಕಾಂಗ್ರೆಸ್ ಪಕ್ಷವು ಒಂದು ಮುಳುಗುವ ದೋಣಿಯಿದ್ದಂತೆ. ಎಂದು ಉಪಮುಖ್ಯ ಮಂತ್ರಿ ಅಶ್ವತ್ ನಾರಾಯಣ ಟ್ವೀಟ್ ಮಾಡಿದ್ದಾರೆ
ಚಿಂತಕರ ಚಾವಡಿ, ಬುದ್ದಿ ಜೀವಿಗಳ ಸ್ಥಳ, ಹಿರಿಯರ ಸದನ ಎಂದು ಗೌರವಿಸಲ್ಪಡುವ ವಿಧಾನಪರಿಷತ್‌ನ ಘನತೆಯ ಸದಸ್ಯರೆನ್ನಿಸಿಕೊಂಡವರು ಮೈ ಕೈ ಮುಟ್ಟಿ ಸದನಕ್ಕೆ ಅಗೌರವ ತಂದಿದ್ದಾರೆ. ಈ ವಿಷಯವನ್ನು ಮುಂದಿಟ್ಟುಕೊಂಡು ಈ ರಾಜ್ಯದ ಜನತೆ ಇಂತಹ ಅಸಂಬದ್ಧ ನಡುವಳಿಕೆಯನ್ನು ಗಮನಿಸಿ ವಿರೋಧಿಸಿದ್ದಾರೆ .ಅದನ್ನು ಅರಿಯಬೇಕಾಗಿದೆ ಎಂದು ಅಶ್ವತ್ ನಾರಾಯಣ ಕಾಂಗ್ರೇಸ್‌ಗೆ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಒಂದು ಮುಳುಗುವ ದೋಣಿಯಿದ್ದಂತೆ. ಅವರ ಸೋಲು ಎಲ್ಲಾ ರಂಗಗಳಲ್ಲೂ ಗೋಚರವಾಗುತ್ತಿದೆ.
— Dr. Ashwathnarayan C. N. (@drashwathcn) December 15, 2020
ಇಂದು ಸದನದಲ್ಲಿ ಅವರ ನಡವಳಿಕೆ ಈ ಸದನದ ಮೌಲ್ಯ ಹಾಗೂ ಗೌರವವನ್ನು ಕೆಡಿಸುವಂತದ್ದು. ಈ ಸದನದ ಶಿಷ್ಟಾಚಾರಕ್ಕೆ ತಕ್ಕಂತೆ ನಡೆದ ಅನೇಕ ಪುರುಷರು ಹಾಗೂ ಮಹಿಳಾ ಸದಸ್ಯರ ಉತ್ತಮ ನಡವಳಿಕೆಗೆ ಹಾಗೂ ನಮ್ಮ ಸಂವಿಧಾನಕ್ಕೆ ಮಾಡಿದ ಅಪಮಾನ ಇದು.
1/2
ಕಾಂಗ್ರೆಸ್ ಒಂದು ಮುಳುಗುವ ದೋಣಿಯಿದ್ದಂತೆ. ಅವರ ಸೋಲು ಎಲ್ಲಾ ರಂಗಗಳಲ್ಲೂ ಗೋಚರವಾಗುತ್ತಿದೆ.ಇಂದು ಸದನದಲ್ಲಿ ಅವರ ನಡವಳಿಕೆ ಈ ಸದನದ ಮೌಲ್ಯ ಹಾಗೂ ಗೌರವವನ್ನು ಕೆಡಿಸುವಂತದ್ದು. ಈ ಸದನದ ಶಿಷ್ಟಾಚಾರಕ್ಕೆ ತಕ್ಕಂತೆ ನಡೆದ ಅನೇಕ ಪುರುಷರು ಹಾಗೂ ಮಹಿಳಾ ಸದಸ್ಯರ ಉತ್ತಮ ನಡವಳಿಕೆಗೆ ಹಾಗೂ ನಮ್ಮ ಸಂವಿಧಾನಕ್ಕೆ ಮಾಡಿದ ಅಪಮಾನ ಇದು.
ಶೈಕ್ಷಣಿಕ, ಆರ್ಥಿಕ, ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡುವ ಬಗ್ಗೆ ಸರಕಾರಕ್ಕೆ ಮಹತ್ವದ ಶಿಫಾರಸುಗಳನ್ನು ಮಾಡಿರುವ ಸಮಿತಿಯು, ಸಂಸ್ಥೆಗೆ ಮೀಸಲಾದ ಪ್ರತ್ರ್ಯೇಕ ಹಾಗೂ ವಿಶೇಷ ಕಾಯ್ದೆ ಅಗತ್ಯ ಇರುವುದು ಒತ್ತಿ ಹೇಳಿದೆ. ಅದಕ್ಕೆ ಸರ್ಕಾರ ಅಗತ್ಯವಾದ ಕಾನೂನು,ಆಡಳಿತತ್ಮಾಕ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ
ವರದಿ:ಬಸವರಾಜ ಕುಂಬಾರ