ವಿಧಾನ ಪರಿಷತ್‌ ಬೀದಿ ಗದ್ದಲ : ರಣರಂಗವಾದ ಮೇಲ್ಮನೆ

ಬೆಂಗಳೂರು : ವಿಧಾನ ಪರಿಷತ್‌ ರಣರಂಗಕ್ಕೆ ಸಾಕ್ಷಿಯಾಗಿದ್ದು, ನಾಟಕೀಯ ಬೆಳವಣಿಗೆ ನಡೆದಿದೆ, ಕಲಾಪದಲ್ಲಿ ತಳ್ಳಾಟ, ನುಕಾಟ ನಡೆದಿದ್ದು ಬೀದಿ ನಾಯಿಗಳು ಕಿತ್ತಾಡುವ ಹಾಗೆ ಕಲಾಪದಲ್ಲಿ ಆಡಳಿತ ಮತ್ತು ವಿರೊಧ ಪಕ್ಷದವರು ಕೈ-ಕೈ ಮಿಲಾಯಿಸುವ ಹಂತಕ್ಕೆ  ಹೋಗಿದ್ದು ಮೇಲ್ಮನೆ ಅಕ್ಷರ:ಸಹ ರಣರಂಗವಾಯಿತು.


ಸಭಾಪತಿ ಪೀಠದಲ್ಲಿ ಸಭಾಪತಿ ಆಸೀನರಾಗುವುದಕ್ಕಿಂತ ಮೊದಲೇ ಉಪ ಸಭಾಪತಿ ಧರ್ಮೇಗೌಡ ಅವರನ್ನು ಕುಳ್ಳಿರಿಸಿ,ಕಲಾಪ ನಡೆಸಲು ಆಡಳಿತ ರೂಢ ಬಿಜೆಪಿ ಮುಂದಾಗಿತ್ತು. ಈ ಸಮಯದಲ್ಲಿ ಕಲಾಪದ ಕಾರ್ಯಸೂಚಿ ಕಿತ್ತೆಸೆದು ಘೋಷಣೆ, ನೂಕಾಟ, ತಳ್ಳಾಟ,ಕೈ ಕೈ ಮಿಲಾವಣೆ, ಅವಾಚ್ಯ ಶಬ್ದಗಳಿಂದ ನಿಂದನೆ, 
ಹಲವು ಅತಿರೇಕಗಳಿಗೆ ಸಾಕ್ಷಿಯಾಯಿತು. 
 

ಪರಿಷತ್ ಸಭಾಪತಿ ಸ್ಥಾನದಲ್ಲಿ ಸಭಾಪತಿ ಆಸೀನರಾಗುವುದಕ್ಕಿಂತ ಮುಂಚೆಯೇ ಬಿಜೆಪಿ ಸದಸ್ಯರು ಉಪಸಭಾಪತಿಗಳನ್ನು ಕೂರಿಸಿದ್ದು ಗದ್ದಲಕ್ಕೆ ಕಾರಣವಾಗಿದೆ. ನಡಾವಳಿಗಳಿಗೆ ವಿರುದ್ಧವಾಗಿ ಬೆಲ್‌ ಮುಗಿಯುವ ಮುನ್ನವೇ ಉಪಸಭಾಪತಿ ಧರ್ಮೇಗೌಡರನ್ನು ಪೀಠದಲ್ಲಿ ಕೂರಿಸಲಾಯ್ತು. ಕಾಂಗ್ರೆಸ್‌ ಸದಸ್ಯರು ಉಪಸಭಾಪತಿಗಳನ್ನು ಪೀಠದಿಂದ ಎಳೆದು ಹಾಕಿದರು. ಈ ವೇಳೆ, ಉಪಸಭಾಪತಿ ಧರ್ಮೇಗೌಡ ಅವರನ್ನು ರಕ್ಷಿಸಲು ಡಿಸಿಎಂ ಅಶ್ವತ್ಥ ನಾರಾಯಣ ಸೇರಿ ಮತ್ತಿತರ ಬಿಜೆಪಿ ಸದಸ್ಯರು ಪ್ರಯತ್ನಿಸಿದರು.

ರಾಜ್ಯಪಾಲರಿಗೆ ಜೆಡಿಎಸ್‌,ಬಿಜೆಪಿ ದೂರು


ವಿಧಾನಪರಿಷತ್‌ನಲ್ಲಿ ಅವಿಶ್ವಾಸ ನಿರ್ಣಯ ಸಂದರ್ಭದಲ್ಲಿ ನಡೆದ ಕೋಲಾಹಲ, ಈಗ ರಾಜ್ಯಪಾಲರ ಅಂಗಳ ತಲುಪಿದೆ. ಘಟನೆ ಕುರಿತು ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ದೂರು ಸಲ್ಲಿಸಿದರು. ಸಚಿವ ಮಾಧುಸ್ವಾಮಿ, ಲಕ್ಷಣ ಸವದಿ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಕಾಂಗ್ರೆಸ್‌ ವಿರುದ್ಧ ದೂರು ಸಲ್ಲಿಸಿತು.

ಪರಿಷತ್‌ನಲ್ಲಿ ನಡೆದ ಘಟನೆಗಳ ಕುರಿತಾಗಿ ರಾಜ್ಯಪಾಲರಿಗೆ ಮಾಹಿತಿ ನೀಡಿದ ಎರಡೂ ಪಕ್ಷಗಳ ಮುಖಂಡರು, ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಾರೆ ಎಂಬ ಕಾರಣಕ್ಕಾಗಿ ಪರಿಷತ್ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಲಾಗಿದೆ, ಕ್ರಮಬದ್ಧವಾಗಿ ನೋಟಿಸ್ ನೀಡಲಾಗಿದೆ. ಸಭಾಪತಿ ಮೇಲೆ ವಿಶ್ವಾಸ ಇಲ್ಲದ ಕಾರಣಕ್ಕಾಗಿ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ, ಜೆಡಿಎಸ್ ಆಗ್ರಹಿಸಿವೆ.

ಸಂಬಂಧವೇ ಇಲ್ಲದ ವ್ಯಕ್ತಿಯನ್ನು ಪೀಠದಲ್ಲಿ ಕೂರಿಸಿದರು. ಸಭಾಪತಿಗಳ ವಿರುದ್ಧ ಅವಿಶ್ವಾಸ ಇದ್ದ ಕಾರಣ ಪತ್ರ ನೀಡಿ ಅಧ್ಯಕ್ಷತೆ ವಹಿಸಬಾರದು ಎಂದು ಮನವಿ ಮಾಡಿದ್ದೆವು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಇದು ಶಿಷ್ಟಾಚಾರ ಅಲ್ಲ ಎಂದು ಮನವಿ ಮಾಡಿದ್ದೆವು. ಉಪಸಭಾಪತಿಗೆ ಅಧ್ಯಕ್ಷತೆ ವಹಿಸುವಂತೆ ಮನವಿ ಮಾಡಿದ್ದೆವು. ಸಭಾಪತಿ ಬರುವುದಿಲ್ಲ ಎಂದು ತಿಳಿದು ಬೆಲ್ ಆದ ಬಳಿಕ ಉಪಸಭಾಪತಿಯನ್ನು ಪೀಠದಲ್ಲಿ ಕೂರಿಸಿದೆವು. ಆದರೆ ಕಾಂಗ್ರೆಸ್ ಸದಸ್ಯರು ಏಕಾಏಕಿ ಉಪಸಭಾಪತಿಯನ್ನು ಎಳೆದಾಡಿದರು ಎಂದು ಅವರು ಕಿಡಿಕಾರಿದ್ದಾರೆ.

ಸಂಬಂಧವೇ ಇಲ್ಲದ ವ್ಯಕ್ತಿಯನ್ನು(ಸಭಾಪತಿಯನ್ನು) ಪೀಠದಲ್ಲಿ ಕೂರಿಸಿದ್ದಾರೆ ಎಂದು ಮಾಧುಸ್ವಾಮಿ ಕಿಡಿಕಾರಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಸೇರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ಮತ್ತೊಮ್ಮೆ ಸಭಾಪತಿಗೆ ರಾಜೀನಾಮೆ ನೀಡುವಂತೆ ಮನವಿ ಮಾಡುತ್ತೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ವರದಿ: ನಾಗರಾಜ ನಂದಿಹಳ್ಳಿ