ಚಿತ್ರಸಂತೆಯಲ್ಲಿ ಚಿತ್ರಾಕೃತಿಗಳ ಚಿತ್ತಾರ...!

ಬೆಂಗಳೂರು ನಗರದ ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ ಬಣ್ಣದ ಲೋಕವೇ ಮೈದಳೆದಿತ್ತು.  ಹೌದು ಎಲ್ಲಿ ನೋಡಿದರಲ್ಲಿ ಕಲಾವಿದರ ಕುಂಚದಿಂದ ಅರಳಿದ  ನಾನಾ ಬಗೆಯ ಕಲಾಕೃತಿಗಳು ಕಲಾರಾಧಕರ ಕಣ್ಮನ ಸೆಳೆದವು.  ನಗರದ ನಾನಾ ಕಡೆಯಿಂದ  ಚಿತ್ರಸಂತೆಗೆ  ಬಂದಿದ್ದ ಕಲಾಸಕ್ತರು ಅತ್ಯಂತ ಕುತೂಹಲದಿಂದ ವೀಕ್ಷಿಸಿದರು. ಇನ್ನೂ  ನೇಗಿಲ ಯೋಗಿಗೆ ಈ ಬಾರಿಯ ಚಿತ್ರಸಂತೆಯನ್ನು ಅರ್ಪಿಸಲಾಗಿತ್ತು. ರೈತಾಪಿ ಜೀವನ, ಗ್ರಾಮೀಣ ಸೊಗಡು ಬಿಂಬಿಸುವ ಪೇಂಟಿಂಗ್‌ಗಳು ಗಮನಸೆಳೆದವು.ಆಧ್ಯಾತ್ಮಿಕತೆಯನ್ನು ಬಿಂಬಿಸುವ ಮಂಡಲ ಆರ್ಟ್‌, ರಿವರ್‌ ಪೇಬಲ್‌ ಆರ್ಟ್‌, ಕಾಫಿ ಪೇಂಟಿಂಗ್ಸ್‌, ಸೆರಾಮಿಕ್ಸ್‌, ಸಾಂಪ್ರದಾಯಿಕ ಮೈಸೂರು ಶೈಲಿಯ ಚಿತ್ರಗಳು, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿರುವ ಚಿತ್ರಗಳು, ಆಕ್ರಿಲಿಕ್‌, ಗಾಜಿನ ಮೇಲೆ ಬಿಡಿಸಿಧಿರುವ ಚಿತ್ರಗಳು, ಕೊಲಾಜ್‌, ಲಿಥೋಗ್ರಾಫ್‌, ಡೂಡಲ್‌, ಎಂಬೋಸಿಂಗ್‌, ವಿಡಿಯೋ ಕಲೆ, ಗ್ರಾಫಿಕ್‌ ಕಲೆ, ಶಿಲ್ಪ ಕಲೆ, ಇನ್‌ಸ್ಟಾಲೇಷನ್‌ (ಪ್ರತಿಷ್ಠಾಪನಾ ಕಲೆ), ಪರ್ಫಾರ್ಮೆನ್ಸ್‌ ಕಲೆ, ಮಿಶ್ರ ಮಾಧ್ಯಮ, ಫೋಟೋಗ್ರಫಿ... ಹೀಗೆ ಹಲವು ಬಗೆಯ ಕಲಾ ಪ್ರಕಾರದ ಚಿತ್ರಗಳು ಒಂದೇ ಸೂರಿನಡಿ ನೋಡುಗರ ಗಮನ ಸೆಳೆದವು. ಬೆಳಗ್ಗೆ ನಸುಕಿನ ವೇಳೆಗೆ ಕಲಾವಿದರು ತಮಗೆ ಮಂಜೂರಾಗಿದ್ದ ಮಳಿಗೆಗಳಲ್ಲಿ ತಮ್ಮ ಕಲಾಕೃತಿಗಳನ್ನು ಜೋಡಿಸಲು ಆರಂಭಿಸಿದರು. ಬೆಳಗ್ಗೆ 8ರ ವೇಳೆಗೆ ಸಂತೆ ಕಳೆಗಟ್ಟಿತ್ತು. ವಿಂಡ್ಸರ್‌ ಮ್ಯಾನರ್‌ ವೃತ್ತದಿಂದ ಶಿವಾನಂದ ವೃತ್ತದವರೆಗೂ ಮುಖ್ಯ ರಸ್ತೆಯಲ್ಲಿ, ಮಧ್ಯೆ ಮಧ್ಯೆ ಇರುವ ಅಡ್ಡ ರಸ್ತೆಗಳಲ್ಲಿ ಪೇಂಟಿಂಗ್‌ ಮಾರಾಟ ಮಳಿಗೆಗಳು, ತಿನಿಸು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ತರಹೇವಾರಿ ಆಭರಣ ಮಳಿಗೆಗಳು ಇದ್ದವು. ಈ ರಸ್ತೆಯಲ್ಲಿ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿತ್ತು. ಹೀಗಾಗಿ, ಜನಜಾತ್ರೆಯೇ ನೆರೆದಿತ್ತು.ಭದ್ರತೆ ಮತ್ತು ನಿಗಾ ವಹಿಸುವುದಕ್ಕಾಗಿ ಪ್ರತಿ 50 ಅಡಿಗೆ ಒಂದರಂತೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. 200ಕ್ಕೂ ಹೆಚ್ಚು ಮಂದಿ ಪೊಲೀಸ್‌ ಸಿಬ್ಬಂದಿ ಹಾಗೂ 400ಕ್ಕೂ ಹೆಚ್ಚು ಮಂದಿ ಪರಿಷತ್‌ನ ವಿದ್ಯಾರ್ಥಿಗಳು, ಸಿಬ್ಬಂದಿ- ಕಾರ್ಯಕರ್ತರು ಅಲ್ಲಿನ ಆಗುಹೋಗುಗಳನ್ನು ಪರಿಶೀಲಿಸುತ್ತಿದ್ದರು. ಪರಿಷತ್‌ ಆವರಣಕ್ಕೆ ಆಗೊಮ್ಮೆ ಈಗೊಮ್ಮೆ ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು, ಐಎಎಸ್‌-ಕೆಎಎಸ್‌ ಅಧಿಕಾರಿಗಳು ಬಂದು ಹೋಗುತ್ತಿದ್ದರು. ಮೈಕ್‌ನಲ್ಲಿ ಆಗಾಗ್ಗೆ ಮಾಹಿತಿ ನೀಡಲಾಗುತ್ತಿತ್ತು.ವ್ಯಕ್ತಿಚಿತ್ರಕ್ಕೆ ಬೇಡಿಕೆ ಚಿತ್ರಸಂತೆಗೆ ಆಗಮಿಸಿದವರಲ್ಲಿ ಹಲವರು ಕಲಾವಿದರ ಮುಂದೆ ಕೂತು ತಮ್ಮದೇ ಚಿತ್ರವನ್ನು ಬಿಡಿಸಿಕೊಂಡು ಸಂಭ್ರಮ ಪಡುತ್ತಿದ್ದರು. ಕೆಲವರು 100 ರೂ.ನಿಂದ ಆರಂಭಿಸಿ 200 ರೂ.ವರೆಗಿನ ಪೇಂಟಿಂಗ್‌ನಲ್ಲಿ ನೈಜ ಚಿತ್ರ ಬಿಡಿಸುವುದು ಮತ್ತು ಗೆರೆಗಳ ಮೂಲಕ ಚಿತ್ರಗಳನ್ನು ಬಿಡಿಸಿಕೊಡುತ್ತಿದ್ದರು. ತೆಲಂಗಾಣದ ರಾಮಕೃಷ್ಣ ಎಂಬುವವರು ವಾಟರ್‌ ಕಲರ್‌ನಲ್ಲಿ ಎರಡು ಈರುಳ್ಳಿ ಮತ್ತು ಒಂದು ಕಡಾಯಿ ಚಿತ್ರ ಬಿಡಿಸಿದ್ದು, ನೋಡುಗರನ್ನು ಸೆಳೆಯುತ್ತಿತ್ತು. ಇದರ ದರ 5 ಸಾವಿರ ರೂ..ಗಣ್ಯರ ವ್ಯಕ್ತಿಚಿತ್ರಗಳುಪ್ರಧಾನಿ ಮೋದಿ, ಇತ್ತೀಚೆಗೆ ನಿಧನರಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಮಹಾತ್ಮ ಗಾಂಧೀಜಿ, ಬುದ್ಧ, ನಟ ಅಂಬರೀಷ್‌, ರಾಜ್‌ಕುಮಾರ್‌, ಹೀಗೆ ಹಲವರ ಚಿತ್ರಗಳು ಗಮನಸೆಳೆದವು.ನೆರೆ ಪೀಡಿತ ಪ್ರದೇಶದ ಚಿತ್ರಣರಾಜ್ಯ ಫೋಟೊ ಜರ್ನಲಿಸ್ಟ್‌ ಅಸೋಸಿಯೇಷನ್‌ ವತಿಯಿಂದ ನೆರೆಪೀಡಿತ ಪ್ರದೇಶಗಳಲ್ಲಿ ಸೆರೆಹಿಡಿದ ಛಾಯಾಚಿತ್ರಗಳನ್ನ ವಿಶೇಷವಾಗಿ  ಪ್ರದರ್ಶಿಸಲಾಯಿತು.