ಲಾಕ್ ಡೌನ್ ನಿಂದ ಹಸಿದವರ ಹೊಟ್ಟಿ ತುಂಬಿಸುತ್ತಿದೆ "ಸಿದ್ದರಾಮಯ್ಯ ಜನತಾ ದಾಸೋಹ"
ಹೂವಿನಹಡಗಲಿ :ಕೊರೊನಾ ವೈರಸ್ ಲಾಕ್ಡೌನ್ ಜಾರಿಯಾದ ಬಳಿಕ ಹೂವಿನ ಹಡಗಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ಪಿ ಟಿ ಪರಮೇಶ್ವರ್ ನಾಯ್ಕ್ ಸಹಯೋಗದಲ್ಲಿ 1 ಸಾವಿರ ಜನರಿಗೆ ಪ್ರತಿನಿತ್ಯ ಉಚಿತವಾಗಿ ಆಹಾರ ಮತ್ತು ಅಗತ್ಯ ದವಸ ಧಾನ್ಯಗಳು ವಿತರಣೆ ಮಾಡುತ್ತಾದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಹಡಗಲಿ ಕಾಂಗ್ರೆಸ್ ಪಕ್ಷದ ಟಾಸ್ಕಪೊರ್ಸ ಅಧ್ಯಕ್ಷರಾದ ವಾರದ ಗೌಸ್ ಮೋಹಿದ್ದಿನ್ ಬಡವರು, ನಿರ್ಗತಿಕರು ಹಾಗೂ ವಲಸೆ ಕಾರ್ಮಿಕರು ಸಮಸ್ಯೆಗೆ ತುತ್ತಾಗಿದ್ದು, ಅವರಿಗೆ ಆಹಾರ ನೀಡುವ ಕೆಲಸವನ್ನು ಮಾಡ್ತಾದ್ದು. ದೇಶದಲ್ಲಿ ಯಾರೊಬ್ಬರೂ ಹಸಿವೆಯಿಂದ ಮಲಗಬಾರದು. ಅದೇ ನಮ್ಮ ಗುರಿಯಾಗಬೇಕು ಎಂದು ಹೇಳಿದರು. ಕಾಂಗ್ರೆಸ್ ಮುಖಂಡರಾದ ಹೆಚ್ ಹಾಲೇಶ, ಗುರುವಿನ ರಾಜಣ್ಣ, ಮಲ್ಲಿಕಾರ್ಜುನ, ಗಡಿಗಿ ಕೃಷ್ಣ, ಮಹೇಶ್ , ಭರಲಿಂಗಪ್ಪ ,ಅಶೋಕ , ಇರ್ಪಾನ್ ,ಚಾಂದು ಹಾಗೂ ಚೆನ್ನಪ್ಪ ಇತರರು ಉಪಸ್ಥಿತರಿದ್ದರು.