ಈ ಸಮಯ ಕೊರೋನಾ'ಮಯ ಎಲ್ಲರ ಬಾಳಲ್ಲಿ ಕೋಲಾಹಲದ ವಿಷಯ...!!!
ಈ ಸಮಯ ಕೊರೋನಾ'ಮಯ
ಎಲ್ಲರ ಬಾಳಲ್ಲಿ ಕೋಲಾಹಲದ ವಿಷಯ...!!!
ಪ್ರಪಂಚದ ಎಲ್ಲೆಡೆ ತನ್ನ ಕದಂಬಬಾಹು ಚಾಚಿರುವ "ಚೈನಾ ವೈರಸ್ ಅಲಿಯಾಸ್ ಕೊರೋನಾ" ಅದರಂತೆ ಮಾತು. ಅದರದೇ ಚಿಂತೆ ಅದರದೇ ವ್ಯವಹಾರ ಸರ್ವವೂ ಚೈನಾ ವೈರಸ್ ವ್ಯಾಪಿಸಿಕೊಂಡು ಜನರನ್ನು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಕಿತ್ತು ತಿನ್ನುತ್ತಿದೆ.
ಭಾರತದಲ್ಲಿ ಕೊಂಚ ಶಕ್ತಿಹೀನವಾಗಿ ಕಂಡರೂ 'ಭಾರತಕ್ಕೆ ಈ ವೈರಸ್ ನ ಶುರುವಾತಿನ ಸಮಯ'.
ಜಗತ್ತಿನೆಲ್ಲೆಡೆ ಹಲವು ಪ್ರಾಣಹಾನಿಗೆ ಕಾರಣನಾದ ಚೀನಾ ವೈರಸ್ . ಭಾರತದಲ್ಲಿ ಯಾವುದರ ಪರಿಣಾಮವು ಗೊತ್ತಿಲ್ಲ "ಅದೃಶ್ಯ ಶಕ್ತಿಯ” ಕಾರಣದಿಂದಲೇ ಇರಬಹುದು ಭಾರತದಲ್ಲಿನ ಈ ವೈರಾಣುವಿನ ಶಕ್ತಿ ಕುಂದಿದೆ. ಅಂದಮಾತ್ರಕ್ಕೆ ಇದರ ತೀವ್ರತೆ ಇಲ್ಲ ಎಂದು ತೆಗೆದು ಹಾಕುವಂತಿಲ್ಲ ಸ್ವಲ್ಪ ಎಚ್ಚರ ತಪ್ಪಿದ್ದರೂ ಬೇರೆ ದೇಶದ ಗತಿ ನಮ್ಮ ದೇಶಕ್ಕೂ ಬರಲಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಈ ವೈರಸ್ ವಿರುದ್ಧ ಭಾರತ ದೇಶವನ್ನು ಕಾಪಾಡಲು ಲಾಕ್ಡೌನ್ ನಂತಹ "ಬ್ರಹ್ಮಾಸ್ತ್ರವನ್ನು" ಪ್ರಯೋಗಿಸಿದ್ದಾರೆ. ಜನರು ಮನೆಯಲ್ಲೇ ಇದ್ದು ಈ ವೈರಾಣು ಸಮಾಜದ ಮಟ್ಟದಲ್ಲಿ ಹರಡದಂತೆ ಕಾಪಾಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಈ ನಿಯಮಾವಳಿ ಜಾರಿಗೆ ಬಂದು ಬರೋಬ್ಬರಿ 25 ದಿನ ಕಳೆದಿದ್ದರೂ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಇದ್ದ ಜನರಿಂದ ಸ್ವಲ್ಪಮಟ್ಟಿಗೆ ಹರಡುತ್ತಿದೆ. ಹಾನಿ ಸ್ವಲ್ಪ ಆದ್ರು ಒಪ್ಪಲೇಬೇಕು ಈ ಹಾನಿ ಹೆಮ್ಮರವಾಗಲು ಬಹುದಿತ್ತು ಅಲ್ಲವೇ.
ಈ ಸಮಯ ಬಹಳ ಕ್ಲಿಷ್ಟಕರ ಪ್ರತಿಯೊಬ್ಬರ ಜೀವನದಲ್ಲು ನಾನಾ ರೀತಿಯ ಸಂಘರ್ಷಗಳು ದಿನೇ-ದಿನೇ ಈ ಚೈನಾ ವೈರಸ್ ನಿಂದ ಎದುರಾಗುತ್ತಿದೆ. ಒಬ್ಬೊಬ್ಬರದು ಒಂದೊಂದು ರೀತಿಯ ಸಮಸ್ಯೆ ಕೆಲವರಿಗೆ ಮನೆಯಲ್ಲಿ ಇರಲಾಗದ ಸಮಸ್ಯೆ ಕೆಲವರಿಗೆ ಮನೆಯಿಂದ ಹೊರ ಬಂದು ತಮ್ಮ ಇಷ್ಟದ ಖಾದ್ಯ ಮನಸ್ಸಿಗೆ ಹತ್ತಿರವಾದ ವ್ಯಕ್ತಿ ಗಳ್ಲನು ಭೇಟಿ ಮಾಡಲು ಆಗುತ್ತಿಲ್ಲ ಏನ್ನುವ ಚಡಪಡಿಕೆ.
ಸಮಸ್ಯೆ ಹಲವು ಆದರೆ ಕಾರಣ ಮಾತ್ರ ಒಂದೇ ಚೈನಾ ವೈರಸ್.? ಇದರ ಪರಿಣಾಮ ಬಹಳ ಕೆಟ್ಟದ್ದನ್ನು ಅಲ್ಲ ??? ಆದರೂ ಮನುಷ್ಯನನ್ನು ಬಿಟ್ಟರೆ!! ಪ್ರಪಂಚದ ಎಲ್ಲಾ ಜೀವಿಗಳು ಸಂತೋಷದಿಂದ ಸ್ವಚ್ಛಂದವಾಗಿ ಪರಿಸರದಲ್ಲಿ ತಮ್ಮ ಖುಷಿಗೆ ಲಗಾಮು ಹಾಕುವವರು ಯಾರು ಇಲ್ಲವೆಂದು ಆಹ್ಲಾದಕರವಾಗಿ ಸಂಚರಿಸಿ ಆನಂದ ಪಡೆಯುತ್ತಿಲ್ಲವೆ.
ಕೊರೋನಾ ವೈರಸ್ ಬಂದಿದ್ದು ಸಹಕಾರಿಯೇ ಒಂದು ಮಟ್ಟಿನಲ್ಲಿ..!!!
ಈ ವೈರಸ್ ಬರುವ ಮುಂಚೆ ಮನುಷ್ಯ ಸಾಕಷ್ಟು ಮರೆಯುತ್ತಿದ್ದ. ತನ್ನ ಶಕ್ತಿಯಿಂದ ದುಡ್ಡಿನ ಅಹಮ್ಮಿನಿಂದ ಸಾಕಷ್ಟು ಮೆರೆದಾಡಿದ ಮನುಷ್ಯನಿಗೆ ಮನುಷ್ಯನ ಬೆಲೆ ಗೊತ್ತಿಲ್ಲದಷ್ಟು ಕುರುಡನಾಗಿದ್ದ ಎಲ್ಲೆಡೆ ನೋಡಿದರು ದರ್ಪ ಜಾತಿ ಪಾತಿ ಅಧರ್ಮದಿಂದ ನಡೆಯುತ್ತಿದ್ದರು. ಒಬ್ಬರನ್ನೊಬ್ಬರು ನೋಡಿದರೆ ಆಗುತ್ತಿರಲಿಲ್ಲ ಎನ್ನುವಷ್ಟು ಮಾನಸಿಕ ಆಗಿದ್ದರು. ಈಗ ಎಲ್ಲರ ಮೇಲೂ ಕಾಣದಂತಹ ಪ್ರೀತಿ ಮಮಕಾರ ತ್ಯಾಗ ಎಲ್ಲವೂ ಉಕ್ಕಿ ಬರುತ್ತಿದೆ
ಮನುಷ್ಯ ಮಾಡಿದ ನೈಸರ್ಗಿಕ ಹಾನಿ ಎಂತಹದ್ದು ಎಂದು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಈಗ ಸ್ವಚ್ಛಂದ ಪರಿಸರ ಮಾಲಿನ್ಯ ರಹಿತ ಸಮಾಜ ಕಾಣುತ್ತಿದ್ದೇವೆ ಅಲ್ಲವೇ.
ಸ್ವಚ್ಛಂದವಾಗಿ ಪಕ್ಷಿಗಳು ಹಾರಾಟ ನಡೆಸುತ್ತಿವೆ ಇದಕ್ಕೆಲ್ಲ ಕಾರಣ ಕೊರೋನಾ ವೈರಸ್ ಅಲ್ಲವೇ??
ಈ ಸಮಯ ನಮಗೆ ಮಾರಕವಾಗಿದೆ ಎಂದುಕೊಳ್ಳುವ ಬದಲು ಪೂರಕವಾಗಿದೆ ಎಂದುಕೊಂಡರೆ ನಮ್ಮನ್ನು ನಾವು ಗೆದ್ದಷ್ಟೇ ಖುಷಿ. ಈ ಸಮಯ ನಮ್ಮ ಆತ್ಮ ಪರಾಮರ್ಶಿಸಿ ಕೊಳ್ಳುವ ಸಮಯ ನಮ್ಮ ಸರಿ-ತಪ್ಪುಗಳು ನಮ್ಮ ಕುಂದುಕೊರತೆಗಳು ನಾವು ನಮ್ಮ ಮುಂದಿನ ಜೀವನ ನಮ್ಮ ಗುರಿ ಸಫಲತೆಯ ದಾರಿ ಕಂಡುಕೊಳ್ಳುವ ಉತ್ತಮ ಸಮಯವಾಗಿದೆ.
ನಮ್ಮ ಜ್ಞಾನ ಭಂಡಾರ ನಮ್ಮ ಬೌದ್ಧಿಕ ವಿಚಾರಗಳು ಹೆಚ್ಚಿಸಿಕೊಳ್ಳುವ ಸುಸಂದರ್ಭ. ದುಗುಡಗಿಂತ ಹರುಷವ ಹೆಚ್ಚು ಎಂದುಕೊಂಡರೆ ಖುಷಿ ಅಲ್ಲವೇ ಜೀವಮಾನದಲ್ಲಿ ನಮಗೆ ಇಂತಹ ಒಂದು ಸಮಯ ಮನೆಯವರೊಂದಿಗೆ ಕಳೆಯಲು ಸಿಗುತ್ತಿತ್ತಾ ಒಮ್ಮೆ ಪರಾಮರ್ಶಿಸಿ ಕೊಳ್ಳಿ .ಈ ರೋಗ ಒಳ್ಳೆಯದೆ ಅಥವಾ ನಮ್ಮ ದೈನಿಕ ಶಿಸ್ತನ್ನು ಸುಧಾರಿಸಿಕೊಳ್ಳಲು ಪ್ರಕೃತಿಯ ಕೊಟ್ಟಿರುವ ಉತ್ತಮ ವರದಾನ ಅಲ್ಲವೇ.
ನಮ್ಮ ಪರಿಮಿತಿಗೇ ಅಲ್ಲ ಎಂದುಕೊಂಡ ಹಲವಷ್ಟು ವಿಷಯಗಳು ನಾವೆಲ್ಲರೂ ಕಲಿತಿಲ್ಲವೇ.?
ಸಂಜೆಯಾದರೆ ಸಾಕು ಹೊರಗಡೆ ಹೋಗಿ ಶುಚಿತ್ವ ಇಲ್ಲದ ಆಹಾರ ಸೇವಿಸುತ್ತಿದ್ದೆವು ಅಲ್ವಾ . ಈಗ ನಾವೇ ಮನೆಯಲ್ಲಿ ತರಹೇವಾರಿ ತಿಂಡಿ-ತಿನಿಸು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸ್ನೇಹಿತರ ಹಾಗೂ ಬಂಧು-ಬಳಗದವರ ಹೊಟ್ಟೆ ಉರಿಸುತ್ತಿಲ್ಲವೇ.!ಎಲ್ಲದಕ್ಕೂ ಸಹಕಾರಿ ಹಾಗೂ ಪ್ರೇರಣೆ ಈ ರೋಗ ವಲ್ಲವೇ.
ಎಷ್ಟೆಲ್ಲ ಹಿಡಿಶಾಪ ಹಾಕಿದರು ವಾಸ್ತವ ಸಂಗತಿ ನಾವು ಅರಿಯಲೇ ಬೇಕಲ್ಲವೇ. ಒಟ್ಟಿನಲ್ಲಿ ಈ ರೋಗ ಮನುಕುಲಕ್ಕೆ ಮಾರಕ ಎಂದು ಪರಿಗಣಿಸಿದರು ರೋಗದಿಂದ ಹಲವಾರು ವಿಷಯವನ್ನು ನಾವು ಕಲಿತು ಕೊಂಡಿರುವುದು ಸುಳ್ಳಲ್ಲ. ಸುಚಿತ್ವ ಬೆಲೆ ಹಾಗೂ ಆಹಾರ ಸೇವನೆಯ ಕುರಿತಾಗಿ ನಮ್ಮ ಶಿಸ್ತು ಸಂಯಮ ಕಲಿಸಿಕೊಟ್ಟಿದ್ದು ಈ ಚೈನಾ ವೈರಸ್ ತಾನೇ.
ಒಟ್ಟಾರೆ ಈ ವಿಷಯದಲ್ಲಿ ನಾವು ಚಿಂತೆ ಬಿಟ್ಟು ಪ್ರಕೃತಿಯೇ ನಮ್ಮನ್ನು ನಾವು ಪರಾಮರ್ಶಿಸಿ ಕೊಳ್ಳಲು ನೀಡಿದೆ ಸುಸಂದರ್ಭ ಎಂದು ಭಾವಿಸಿ ಮನೆಯಲ್ಲಿ ಇದು ಸಾಮಾಜಿಕ ಅಂತರ ಕಾಯ್ದುಕೊಂಡು ಈ ವೈರಾಣು ವಿರುದ್ಧ ಪ್ರಬಲವಾಗಿ ಮರ್ಯಾದ ಪುರುಷೋತ್ತಮ ರಾಮನಂತೆ ಹೋರಾಡೋಣ.