ಕೃಷಿ ಕ್ಷೇತ್ರಕ್ಕೆ ಬಜೆಟ್ ಕೊಡುಗೆಗಳು.....

ಸಿಎಂ ಯಡಿಯೂರಪ್ಪ ಅವರು 2020-21ರ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ನಿರೀಕ್ಷೆಯಂತೆ ಕೃಷಿಗೆ ಹೆಚ್ಚಿನ ಕೊಡುಗೆಗಳು ಘೋಷಿಸಿದ್ದಾರೆ.
ಇಂದು ಮಂಡಿಸಿದ ಬಜೆಟ್ ನಲ್ಲಿ ರೈತರಿಗೆ ದೊರಕಿದ ಸವಲತ್ತುಗಳೇನು ಎಂಬುದನ್ನು ನೋಡೋಣ ಬನ್ನಿ.

*ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು?

1)ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆಯಡಿ ಕೇಂದ್ರ ಸರಕಾರವು 6000 ಜೊತೆಗೆ ರಾಜ್ಯಸರ್ಕಾರವು 4000 ಸಾವಿರ ರೂಪಾಯಿ ನೀಡಿದೆ.

2)ಸಣ್ಣ ಅತಿಸಣ್ಣ ರೈತರಿಗೆ ವಾರ್ಷಿಕ 10,000 ರೂಪಾಯಿ ಜೊತೆಗೆ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುವುದು.

3)ಪ್ರಕೃತಿ ವಿಕೋಪ ಹವಾಮಾನ ವೈಪರೀತ್ಯದಿಂದ ರೈತರಿಗಾದ ನಷ್ಟ ಪರಿಹಾರಕ್ಕೆ 900 ಕೋಟಿ ರೂಪಾಯಿ ವಿಮೆಯನ್ನು ಘೋಷಿಸಿದ್ದಾರೆ.

4)ಬರ ನಿರೋಧಕ ಬೆಳೆ ಬೆಳೆಯಲು ರೈತಸಿರಿ ಯೋಜನೆಯಡಿ ಪ್ರತಿ ಹೆಕ್ಟ್ರೆರಿಗೆ 10,000 ದಿಂದ 20,000
ಸಾವಿರ ಪ್ರೋತ್ಸಾಹ ಧನ.

5)ಎತ್ತಿನಹೊಳೆ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಮೊದಲ ಹಂತದಲ್ಲಿ 1,500 ಕೋಟಿ ರೂಪಾಯಿ ಅನುದಾನ.

6)ರಾಜ್ಯದ ವಿವಿಧ ಭಾಗಗಳಲ್ಲಿ ಏತ ನೀರಾವರಿ ಯೋಜನೆ ಪ್ರಾರಂಭಿಸಲು 5,000 ಕೋಟಿ ರೂಪಾಯಿ ಮೀಸಲು.

7)ಹಂದಿ ಸಾಕಾಣಿಕೆ ಉತ್ತೇಜನಕ್ಕಾಗಿ ಸಮಗ್ರ ವ್ಯವಹಾರ ಅಭಿವೃದ್ಧಿ' ಯೋಜನೆಗೆ 5 ಕೋಟಿ ರೂಪಾಯಿ ಮೀಸಲು.

8) ಸಾರ್ವಜನಿಕ ಸಹಭಾಗಿತ್ವದಲ್ಲಿ ಕುಕ್ಕುಟ ತ್ಯಾಜ್ಯ ಸಂಸ್ಕರಣೆ ಮತ್ತು ಮೌಲ್ಯ ವರ್ಧನ ಕೇಂದ್ರ ಸ್ಥಾಪನೆ
 
9)ರಾಜ್ಯದಲ್ಲಿ ಹೈನುರಾಸುಗಳಲ್ಲಿ ಶೇ.90ರಷ್ಟು ಹೆಣ್ಣುಕರುಗಳನ್ನ ಪಡೆಯಲು ಕೃತಕ ಗರ್ಭಧಾರಣೆಗೆ 2 ಕೋಟಿ ಮೀಸಲು.

10)ಮಹಿಳಾ ಮೀನುಗಾರರ ಸಬಲೀಕರಣ' ಅಡಿಯಲ್ಲಿ 1000 ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ ನೀಡಲು 5 ಕೋಟಿ ಮೀಸಲು.

11) ಉಡುಪಿ ಜಿಲ್ಲೆ ಹೆಜಮಾಡಿ ಕೋಡಿ ಮೀನುಗಾರಿಕೆ ಬಂದರು ಸ್ಥಾಪನೆಗೆ 181 ಕೋಟಿ ಮೀಸಲು.

12)ಉಡುಪಿ ಜಿಲ್ಲೆ ಹಂಗಾರು ಕಟ್ಟೆಯಲ್ಲಿ 130 ಕೋಟಿ ರೂಪಾಯಿ ವೆಚ್ಚದಲ್ಲಿ ಬಂದರು ಅಭಿವೃದ್ಧಿ.

13)ಹನಿ ಮತ್ತು ತುಂತುರು ನೀರಾವರಿಗೆ 627 ಕೋಟಿರೂಪಾಯಿ ಮೀಸಲು.

14)ಕೃಷಿ ಅಭಿವೃದ್ಧಿಗಾಗಿ ಕೃಷಿ ಆಯೋಗ ರಚನೆ

15)ಕಿಸಾನ್ ಸಮ್ಮಾನ್ ಯೋಜನೆಗೆ 2600 ಕೋಟಿ ರೂಪಾಯಿ ಮೀಸಲು.

16)ರೈತರಿಗೆ, ಮೀನುಗಾರರಿಗೆ ಕ್ರೆಡಿಟ್ ಕಾರ್ಡ್ ವಿತರಣೆ

17)ರಾಜ್ಯಾದ್ಯಂತ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಗಳ ಸ್ಪಾಪನೆ.

18) ರೈತರ ಮನೆ ಬಾಗಲಿಗೆ ಕೀಟನಾಶಕ

19)ಮಹದಾಯಿ ಯೋಜನೆಗೆ 500 ಕೋಟಿ ರೂ ಘೋಷಣೆ.

20)ಕೃಷಿ ಉತ್ಪನ್ನ ಸಂಸ್ಕರಣಗೆ 10 ಶೀತಲ ಗೃಹ ನಿರ್ಮಾಣಕ್ಕೆ 75 ಕೋಟಿ ಮೀಸಲು
 
21)ಹನಿ ಮತ್ತು ತುಂತುರು ನೀರಾವರಿಗೆ 627 ಕೋಟಿ ರೂಪಾಯಿ ಮೀಸಲು.
 
22)ರಾಜ್ಯದ ಪ್ರತಿ ಗ್ರಾಮಗಳಲ್ಲೂ ಜಲಗ್ರಾಮ್ ಕ್ಯಾಲೆಂಡರ್ ಸ್ಪಾಪನೆ.