ಕರ್ನಾಟಕ ರಾಜ್ಯ ಬಜೆಟ್ 2020:ಮೀನುಗಾರರಿಗೆ ಬಜೆಟ್ ನಲ್ಲಿ ಭರ್ಜರಿ ಗಿಫ್ಟ್
ಕರ್ನಾಟಕ ರಾಜ್ಯ ಬಜೆಟ್ 2020:ಮೀನುಗಾರರಿಗೆ ಬಜೆಟ್ ನಲ್ಲಿ ಭರ್ಜರಿ ಗಿಫ್ಟ್
2020 -21 ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಡಿಸಿದರು .
ಒಟ್ಟು 2.37 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಅನ್ನು ಮಂಡಿಸಿದ ಸಿಎಂ ಯಡಿಯೂರಪ್ಪ, ಮುಖ್ಯವಾಗಿ ಮೀನುಗಾರಿಕೆ ಹಾಗೂ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ .
ಮಹಿಳಾ ಮೀನುಗಾರರ ಸಬಲೀಕರಣಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ಮೀಸಲಿದೆ .
ಕರಾವಳಿ ಜಲಕೃಷಿ ಎಂದು ಕರೆಯುವ ಹಿನ್ನೀರು ಜಲ ಕೃಷಿಯ ಮೀನುಗಾರಿಕೆಗಾಗಿ ಮೂಲ್ಕಿಯಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ ಬಗ್ಗೆ ಘೋಷಣೆ ಮಾಡಲಾಗಿದೆ .ಹಾಗೂ ಮಂಗಳೂರು ಜಿಲ್ಲೆಯ ಕುಳಾಯಿಯಲ್ಲಿ 2 ಕೋಟಿ ರೂಪಾಯಿ ವೆಚ್ಚದ ಹೊಸ ಮೀನು ಬಂದರು ಸ್ಥಾಪನೆ ನಿರ್ಧರಿಸಲಾಗಿದೆ .ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಕೊಡುವುದಾಗಿ ರಾಜ್ಯ ಸರ್ಕಾರ ನಿರ್ಧರಿಸಿದೆ .