ತಾವರಗೇರಾ ಪಟ್ಟಣದಲ್ಲಿ ಶ್ರೀಶಶಿಧರಸ್ವಾಮಿ ವಿದ್ಯಾನಿಕೇತನ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ.....

ತಾವರಗೇರಾ ಪಟ್ಟಣದಲ್ಲಿ ಶ್ರೀಶಶಿಧರಸ್ವಾಮಿ ವಿದ್ಯಾನಿಕೇತನ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 2019-20ನೇ ವಾರ್ಷಿಕೋತ್ಸವ ಹಾಗೂ 7ನೇ ತರಗತಿಯ ಬಿಳ್ಕೊಡುಗೆ ಹಾಗೂ ಮಹಾ ಸರಸ್ವತಿ ಪೂಜೆ ಕಾರ್ಯಕ್ರಮ ನಡೆಯಿತು.ಉದ್ಘಾಟಕರಾಗಿ ಶರಣಪ್ಪ ಐಲಿ ಉಪಾಧ್ಯಕ್ಷರು ಮಾತನಾಡುತ್ತಾ ಮಕ್ಕಳ ಭವಿಷ್ಯರೂಪಿಸುವ ನಿಟ್ಟಿನಲ್ಲಿ ಗುರುಗಳ ಪಾತ್ರವೂ ದೊಡ್ಡದು, ಇದರಲ್ಲಿ ಪೊಷಕರ ಪಾತ್ರವೂ ದೊಡ್ಡದು.ನಮ್ಮ ಸಂಸ್ಥೆಯು 7 ಅಂಗಸಂಸ್ಥೆ ಹೊಂದಿದ್ದು ಸ್ವಂತ ಕಟ್ಟಡವನ್ನು ಹೊಂದಿದೆ.ಈ ಸಂಸ್ಥೆಯಲ್ಲಿ ಶೇಕಡ 75 ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಯಲ್ಲಿ ಹೊಂದಿದ್ದು ಉಳಿದ ವಿದ್ಯಾರ್ಥಿಗಳು ಎಲ್ಲಾ ರಂಗದಲ್ಲಿ ಮುಂದುವರಿದಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳ ಕುರಿತು ಮಾಹಿತಿ ನೀಡುವ ಮೂಲಕ ಶಿಕ್ಷಕರು ಜ್ಞಾನ,ಸಂಸ್ಕೃತಿ  ನೀಡುವುದು ಮುಖ್ಯವಾಗಿದೆ.ಹಣ,ಆಸ್ತಿಕ್ಕಿಂತ ಜ್ಞಾನವು ಮುಖ್ಯವಾಗಿದೆ ಎಂದು ತಾವರಗೇರಾ  ಎಜ್ಯುಕೇಶನ್ ಅಸೋಸಿಯೇಷನ್ ಅಧ್ಯಕ್ಷ ಶೇಖರಗೌಡ ಪೋಲಿಸ್ ಪಾಟೀಲ ಹೇಳಿದರು.

ಹಿರಿಯ ಪತ್ರಕರ್ತರಾದ ವಿ.ಆರ್.ತಾಳಿಕೋಟಿ,ಎನ್.ಶ್ಯಾಮೀದ್ ಮಾತನಾಡಿದರು.ಪ್ರಾಥಮಿಕ ಶಾಲಾ ಮುಖ್ಯಗುರುಗಳು ಪಂಪಾಪತಿ ಕೊರಲಿ ಪ್ರಾಸ್ತಾವಿಕ ಮಾತನಾಡಿದರು.ಈ ಸಂದರ್ಭದಲ್ಲಿ ಪಂಪಣ್ಣ ಚಿಟ್ಟಿ,ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಕುಬೇರಪ್ಪ ಕ್ಯಾಡೆದ್ ,ಮಲ್ಲಿಕಾರ್ಜುನಗೌಡ ವಿಠಲಾಪುರ, ಲಕ್ಷ್ಮಣಪ್ಪ ಸಿರವಾರ್, ಚೆನ್ನಪ್ಪ ದಂಡಿನ್,ಎಸ್.ಎಸ್.ವಿ ಕಾಲೇಜಿನ ಪ್ರಾಚಾರ್ಯರು ವೆಂಕೋಬಣ್ಣ ಭಾವಿತಾಳ, ಪಾಲಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ ಶರಣಪ್ಪ ಕುಂಬಾರ ತಾವರಗೇರಾ...