ಕೊನೆಗೂ ಟಾಯ್ಲೆಟ್‌ ವಾಸಿಗಳಿಗೆ ಮನೆ ಸಿಕ್ತು...

 

ಮೈಸೂರು:ಏಳು ವರ್ಷಗಳಿಂದ ಶೌಚಾಲಯದಲ್ಲಿ ವಾಸವಿದ್ದ ಕೃಷ್ಣಮ್ಮ ಅವರ ಕುಟಂಬದ ಅಜ್ಞಾತ ವಾಸಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಲಾಗಿದ್ದ ಮನೆಯೊಂದನ್ನು ಶುಕ್ರವಾರ ಹಸ್ತಾಂತರಿಸುವ ಜಿಲ್ಲಾಡಳಿತ ನೆಲೆ ಕಲ್ಪಿಸಿದೆ.

ಕಳೆದ ಐದು ದಿನಗಳಿಂದ ವಿಜಯ ಕರ್ನಾಟಕ ಪತ್ರಿಕೆ, ಕೃಷ್ಣಮ್ಮ ಕುಟುಂಬದ ಬಗ್ಗೆ ನೀಡಿದ ಸರಣಿ ಮಾಡಿತ್ತು. ಬನ್ನಿಮಂಟಪದ ಎಲ್ಲಮ್ಮ ತಾಯಿ ಕಾಲನಿಯಲ್ಲಿ ನಿರ್ಮಿಸಲಾಗಿದ್ದ ಗುಂಪು ಮನೆಗಳಲ್ಲಿ ಒಂದು ಮನೆಯನ್ನು ನೀಡುವ ಮೂಲಕ ಕೃಷ್ಣಮ್ಮ ಕುಟುಂಬಕ್ಕೆ ತಾತ್ಕಾಲಿಕ ಸೂರು ಒದಗಿಸಿದೆ.

ಶುಕ್ರವಾರ ಸಂಜೆ ನಗರ ಪಾಲಿಕೆ ಮತ್ತು ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು, ರಾಜೇಂದ್ರ ನಗರದ ಕುರಿಮಂಡಿಯ ಎ ಬ್ಲಾಕ್‌ನಲ್ಲಿನ ಶೌಚಾಲಯಕ್ಕೆ ಭೇಟಿ ನೀಡಿ, ಕೃಷ್ಣಮ್ಮ ಅವರನ್ನು ಮಂಡಳಿಯ ಹೊಸ ಮನೆಗೆ ಕರೆದುಕೊಂಡು ಹೋಗಿ, ಮನೆಯ ಕೀಯನ್ನು ಹಸ್ತಾಂತರಿಸಿದರು.

ಅಲ್ಲದೆ ಪಾಲಿಕೆ ಸಿಬ್ಬಂದಿಯೇ ಕೃಷ್ಣಮ್ಮ ಮನೆಯ ಸಾಮಾನುಗಳನ್ನು ಸಾಗಿಸುವಲ್ಲಿ ನೆರವಾಗಿ ಇಡೀ ಕುಟುಂಬದವರನ್ನು ತಮ್ಮ ವಾಹನದಲ್ಲಿಯೇ ಕರೆದುಕೊಂಡು ಹೊಸ ಮನೆಗೆ ಸೇರಿಸಿದರು.

ಸಂಜೆ ಪಾಲಿಕೆ ಸದಸ್ಯ ಪ್ರದೀಪ್‌ಚಂದ್ರಘಿ, ಜೆಇ ಪುರುಷೋತ್ತಮ್, ಹೆಲ್ತ್ ಇನ್ಸ್‌ಪೆಕ್ಟರ್ ಶ್ರೀನಿವಾಸ್, ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಎಇಇ ತೇಜಸ್ವಿನಿ, ಅಧಿಕಾರಿ ಶ್ಯಾಂ ಸುಂದರ್, ಕೃಷ್ಣಮ್ಮ ಅವರು ವಾಸವಿದ್ದ ಶೌಚಾಲಯಕ್ಕೆ ತೆರಳಿ, ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ನಿಮಗೆ ಸೂರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದರೆ.