ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆ : ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ಪತನ.....

ಭೋಪಾಲ್ : ಮಧ್ಯಪ್ರದೇಶ ರಾಜಕೀಯ ಪ್ರಹಸನಕ್ಕೆ ಇಂದು  ಮಹತ್ವದ ಟ್ವಿಸ್ಟ್ ಸಿಕ್ಕಿದ್ದು ಮುಖ್ಯಮಂತ್ರಿ ಕಮಲನಾಥ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡಿದೆ.

ಸುಪ್ರೀಂ ಕೋರ್ಟ್ ಕಮಲನಾಥ್ ಸರ್ಕಾರಕ್ಕೆ ಇಂದು ವಿಶ್ವಾಸಮತ ಸಾಬೀತು ಪಡಿಸುವಂತೆ ಸೂಚನೆ ನೀಡಿತ್ತು. ಆದ್ದರಿಂದ ಇಂದು ಸ್ಪೀಕರ್ ಎನ್.ಪಿ.ಪ್ರಜಾಪತಿ ಅಧಿವೇಶನ ಕರೆದಿದ್ದರು.ಜೊತೆಗೆ ಕಾಂಗ್ರೆಸ್ ನ 16 ಜನ ಬಂಡಾಯ ಶಾಸಕರ ರಾಜಿನಾಮೆ ಆಂಗಿಕರಿಸಿರುವುದಾಗಿ ಘೋಷಿಸಿದರು.ಪರಿಣಾಮ ಕಮಲನಾಥ್ ಸರ್ಕಾರ ಅಲ್ಪ ಮತಕ್ಕೆ ಕುಸಿಯುತು.
ಇದರಿಂದ ಸರ್ಕಾರ ಉಳಿಸಿಕೊಳ್ಳುವ ಎಲ್ಲಾ ಅವಕಾಶಗಳು ಕೊನೆಯಾಗಿ ಬೇರೆ ದಾರಿ ಕಾಣದೇ ಅನಿವಾರ್ಯವಾಗಿ ಕಮಲನಾಥ್ ರಾಜಿನಾಮೆ ನೀಡಲೇಬೇಕಾಯಿತು.

ಮಧ್ಯಪ್ರದೇಶ ಸರ್ಕಾರದ ಈಗಿನ ಬಲಾಬಲ ಈ ಕೆಳಗಿನಂತಿದೆ.

ಒಟ್ಟು ಸ್ಥಾನಗಳು - 206
ಕಾಂಗ್ರೆಸ್ - 92 
ಬಿಜೆಪಿ    - 107
ಪಕ್ಷೇತರರು - 4
ಬಿಎಸ್ಪಿ    -   2
ಎಸ್ಪಿ       -    1