ದಕ್ಷಿಣ ಬ್ರಿಜೆಲ್ ತಲುಪಿದ ಆಸ್ಟ್ರೇಲಿಯಾ ಕಾಡ್ಗಿಚ್ಚು.....!

 

ಮಾಸ್ಕೊ, ಜನವರಿ 8: ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚು ಇದೀಗ ದಕ್ಷಿಣ ಬ್ರೆಜಿಲ್‌ನ್ನು ಆವರಿಸಿಕೊಳ್ಳುತ್ತಿದೆ.

 

ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿನ ಹೊಗೆಯು ಎರಡು ಡಜನ್‌ ಗೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಇದೀಗ ದಕ್ಷಿಣ ಬ್ರೆಜಿಲ್‌ಗೂ ಬೆಂಕಿ ಆವರಿಸಿಕೊಳ್ಳುತ್ತಿದೆ ಎಂದು ಮೆಟ್ಸುಲ್ ಹವಾಮಾನ ಸಂಸ್ಥೆ ವರದಿ ಮಾಡಿದೆ.

 

ಆಸ್ಟ್ರೇಲಿಯಾದ ಬೆಂಕಿಯಿಂದ ಹೊಗೆ ರಿಯೊ ಗ್ರಾಂಡೆ ಡೊ ಸುಲ್ ವಾಯುವ್ಯಕ್ಕೆ ಬರಲು ಆರಂಭಿಸಿದೆ ಎಂದು ಮೆಟ್ಸುಲ್ ಟ್ವೀಟ್ ಮಾಡಿದೆ.

 

ಸೋಮವಾರ ಆಸ್ಟ್ರೇಲಿಯಾದ ಏಜೆನ್ಸಿಯ ಮೂಲಕ ತನ್ನ ಬೆಂಕಿಯಿಂದ ಹಾನಿಗೊಳಗಾದ ದೇಶಕ್ಕೆ ಸಹಾಯ ಮಾಡಲು 2 ಬಿಲಿಯನ್ ಆಸ್ಟ್ರೇಲಿಯಾ ಡಾಲರ್‌ಗಳನ್ನು ವಿನಿಯೋಗಿಸುವುದಾಗಿ ಹೇಳಿದ್ದಾರೆ.

 

 

ಆಸ್ಟ್ರೇಲಿಯಾದಲ್ಲಿ ಈಗಾಗಲೇ ಅಪಾರ ಪ್ರಮಾಣದ ಕಾಡು ಬೆಂಕಿಗಾಹುತಿಯಾಗಿದೆ. 4.8 ಕೋಟಿ ಪ್ರಾಣಿಗಳು ಅಸುನೀಗಿವೆ. ಇದು ಹವಾಮಾನ ವೈಪರಿತ್ಯದ ಪರಿಣಾಮವಾಗಿದೆ. ಕೆಲವರು ಮೃತಪಟ್ಟಿದ್ದಾರೆ.

 

ಆಸ್ಟ್ರೇಲಿಯಾದ ನೆಲ ಈಗ ಅಕ್ಷರಶಃ ಕಾದ ಕಾವಲಿಯಂತಾಗಿದೆ. ಕಾಡಿಗೆ ಬಿದ್ದಿರುವ ಬೆಂಕಿ ಇನ್ನೂ ನಿಯಂತ್ರಣಕ್ಕೇ ಬರುತ್ತಿಲ್ಲ.

 

ನ್ಯೂ ಸೌತ್ ವೇಲ್ಸ್‌ ಸೇರಿದಂತೆ ಹಲವು ಭಾಗಗಳಲ್ಲಿ ಬೆಂಕಿ ತನ್ನ ರುದ್ರನರ್ತನಗೈಯುತ್ತಿದೆ. ಈಗಾಗಲೇ ಸಾವಿರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿವೆ. ಕೋಟಿಗಟ್ಟಲೆ ವನ್ಯಜೀವಿಗಳೂ ಪ್ರಾಣಬಿಟ್ಟಿವೆ.

 

ಅಗ್ನಿಶಾಮಕದಳದ ಸಿಬ್ಬಂದಿ ಸೇರಿದಂತೆ ಕಾಡಂಚಿನಲ್ಲಿ ವಾಸಿಸುವ ಸುಮಾರು 25 ಮಂದಿ ಈಗಾಗಲೇ ಈ ಬೆಂಕಿಯಿಂದ ಪ್ರಾಣ ಬಿಟ್ಟಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಮನೆ ನೆಲಸಮವಾಗಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.