ಕೊರೊನಾ ಶಂಕೆಯಿಂದ ಸಹಾಯಕ್ಕೆ ಬಾರದ ಜನ : ತಾಯಿ ಕಣ್ಣೇದುರೇ ಪ್ರಾಣ ಬಿಟ್ಟ ಮಗ.....

ಕೊಡಗು : ಹೃದಯಾಘಾತ ಆಗಿದ್ದ ವ್ಯಕ್ತಿಯ ಸಹಾಯಕ್ಕೆ ಯಾರೂ ಬಾರದ ಕಾರಣ ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೂಕಿನ ಉಂಜಿಗನಹಳ್ಳಿಯಲ್ಲಿ ನಡೆದಿದೆ.

ರೋಷನ್ ( 41 ) ಮೃತಪಟ್ಟ ವ್ಯಕ್ತಿ. ಇವರು ಮಂಗಳೂರಿನಿಂದ ತಮ್ಮ ಮನೆಗೆ  ಬಂದಿದ್ದರು. ಶೌಚಗ್ರಹಕ್ಕೆ ಹೋಗಿದ್ದ ಸಂಧರ್ಭದಲ್ಲಿ ರೋಷನ್ ಗೆ ಹೃದಯಾಘಾತ ಸಂಭವಿಸಿದ್ದು ಅಲ್ಲೇ ಕುಸಿದು ಬಿದ್ದಿದ್ದಾರೆ. ಇನ್ನು ಮಗ ಕುಸಿದು ಬಿದ್ದಿದ್ದನ್ನು ಕಂಡು ರೋಷನ್ ತಾಯಿ ಸಹಾಯಾಕ್ಕಾಗಿ ಅಕ್ಕ ಪಕ್ಕದ ಜನರಲ್ಲಿ ಬೇಡಿಕೊಂಡಿದ್ದಾರೆ. ಆದರೆ ಕೊರೊನಾ ಸೋಂಕು ತಗುಲಿರಬಹುದು ಎಂದು ಶಂಕಿಸಿ ಜನರು ಸಹಾಯಕ್ಕೆ ಮುಂದಾಗಿಲ್ಲ.ಹೀಗಾಗಿ ರೋಷನ್ ತನ್ನ ತಾಯಿಯ ಕಣ್ಣೇದುರೇ ಪ್ರಾಣ ಬಿಟ್ಟಿದ್ದಾರೆ.

ಒಟ್ಟಾರೆ ದೇಶದ ಜನರಲ್ಲಿ ಕೊರೊನಾ ಅತಿಯಾದ ಭೀತಿ ಸೃಷ್ಟಿಸಿದ್ದು ಜನ ಎಲ್ಲರನ್ನೂ ಅನುಮಾನದಿಂದಲೇ ನೋಡುವಂತಾಗಿದೆ.