ಕೊರೋನಾ ಅಟ್ಟಹಾಸಕ್ಕೆ ಇಟಲಿಯ ಒಂದೇ ದಿನ 475 ಜನ ಬಲಿ
ಇಟಲಿಯಲ್ಲಿ ಬುಧವಾರ ಒಂದೇ ದಿನ ಕೊರೋನಾ ಸೋಂಕಿಗೆ 475 ಜನ ಬಲಿಯಾಗಿದ್ದಾರೆ. ಇದು ಈವರೆಗೆ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಸಾವಿನ ಸಂಖ್ಯೆಯಾಗಿದೆ.
ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 2978ಕ್ಕೆ ಏರಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಕೂಡ 35,713ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆಯು ಚೀನಾಗಿಂತ ಇಲ್ಲಿ 259ರಷ್ಟುಕಡಿಮೆ ಇದೆ. ಇಟಲಿಯಲ್ಲಿನ ಸಾವಿನ ಸಂಖ್ಯೆ ಏರಿಕೆ ಗಮನಿಸಿದಾಗ ಚೀನಾವನ್ನು ಇಟಲಿ ಮೀರಿಸಬಹುದಾ ಎಂಬ ಆತಂಕ ಸೃಷ್ಟಿಯಾಗಿದೆ.
ಇಟಲಿಯಲ್ಲಿ ಭಾನುವಾರ ಒಂದೇ ದಿನ 468 ಜನ ಸಾವನ್ನಪ್ಪಿದ್ದರು. ಈ ದಾಖಲೆಯನ್ನು ಬುಧವಾರದ ಸಾವಿನ ಸಂಖ್ಯೆ ಮುರಿದಿದೆ.
ಈ ನಡುವೆ, ಕೊರೋನಾದ ಮೂಲ ಕೇಂದ್ರವಾದ ಚೀನಾದಲ್ಲಿ ಬುಧವಾರ 11 ಜನ ಸಾವನ್ನಪ್ಪಿದ್ದರೆ. ಇದರಿಂದ ಸಾವಿನ ಸಂಖ್ಯೆ 3,237ಕ್ಕೇರಿದೆ. ಸಮಾಧಾನದ ವಿಷಯವೆಂದರೆ 13 ಜನರಿಗೆ ಮಾತ್ರ ಈ ದಿನ ಸೋಂಕು ತಗುಲಿದೆ. ಕೊರೋನಾ ಮೊದಲು ಕಾಣಿಸಿದ್ದ ವುಹಾನ್‌ನಲ್ಲಿ ಒಬ್ಬರಿಗೆ ಮಾತ್ರ ಹೊಸದಾಗಿ ಕೊರೋನಾ ಅಂಟಿದೆ.