ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಸಾರಲು ತೆರೆಗೆ ಬರುತ್ತಿದೆ ನಾನು ಮತ್ತು ಗುಂಡ ಚಿತ್ರ....
ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥೆಯುಳ್ಳ ನಾನು ಮತ್ತು ಗುಂಡ ಚಿತ್ರ ಇದೇ ಜನೇವರಿ 24 ರಂದು ತೆರೆಗೆ ಬರಲು ಸಿದ್ಧವಾಗಿದ್ದು, ಈಗಾಗಲೇ ತನ್ನ ವಿಭಿನ್ನ ಶೀರ್ಷಿಕೆ ಹಾಗೂ ಹಾಡುಗಳಿಂದ ಸಾಕಷ್ಟು ನೀರಿಕ್ಷೇ ಹುಟ್ಟು ಹಾಕಿದೆ.
ಇನ್ನು ಈ ಚಿತ್ರ ನಾಯಿ ಮತ್ತು ಮನುಷ್ಯರ ನಡುವಿನ ಸಂಭಂಧ ಸಾರುವ ಕತೆಯಾಗಿದ್ದು, ಸಿಂಬಾ ಎನ್ನುವ ನಾಯಿ ಸಿನೆಮಾದಲ್ಲಿ ಗುಂಡನ ಪಾತ್ರದಲ್ಲಿ ಅಭಿನಯಿಸಿದೆ. ಸಿಂಬಾ ಶ್ವಾನವನ್ನು ಈ ಸಿನಿಮಾಗಾಗಿ ವಿಶೇಷವಾಗಿ ತರಬೇತುಗೋಳಿಸಲಾಗಿತ್ತು. ಇನ್ನು ಚಿತ್ರ ತಂಡವೇ ಹೇಳುವಂತೆ ಸಿನಿಮಾ ಮುಗಿಯುವ ಹೊತ್ತಿಗೆ ಸಿಂಬಾ ಶ್ವಾನದೊಂದಿಗೆ ಚಿತ್ರ ತಂಡಕ್ಕೆ ಭಾವನಾತ್ಮಕ ಸಂಭಂಧ ಬೆಳೆದಿದೆ.
ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ ಕಾಣಿಸಿಕೊಳ್ಳುತ್ತಿದ್ದು, ಇವರಿಗೆ ಸಂಯುಕ್ತಾ ಹೊರನಾಡು ಜೊತೆಯಾಗಿದ್ದಾರೆ. ಚಿತ್ರದಲ್ಲಿ ಶಿವರಾಜ್ ಕೆ.ಆರ್ ಪೇಟೆ ಆಟೋ ಡ್ರೈವರ್ ಆಗಿರಲಿದ್ದು, ಇವರ ಸ್ನೇಹಿತನ ಪಾತ್ರದಲ್ಲಿ ಹಾಸ್ಯ ನಟ ಗೋವಿಂದೆ ಗೌಡ ಕಾಣಿಸಿಕೊಂಡಿದ್ದಾರೆ.
ಸಾಕು ಪ್ರಾಣಿಯ ಜೊತೆಗಿನ ಸಂಭಂಧದ ಕುರಿತ ಕಥೆಗೆ ಶ್ರೀನಿವಾಸ್ ತಿಮ್ಮಯ್ಯ ಆಕ್ಷನ್ ಕಟ್ ಹೇಳಿದ್ದು, ಪೊಯೆಮ್ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ರಘು ಹಾಸನ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದು , ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇದೇ ಜನೆವರಿ 24 ರಂದು ನಾನು ಮತ್ತು ಗುಂಡ ಚಿತ್ರ ರಾಜ್ಯಾದ್ಯಂತ ತೆರೆಗೆ ಬರುತ್ತಿದ್ದು , ಪ್ರಾಣಿಗಳ ಜೊತೆಗಿನ ಮಾನವ ಸಂಬಂಧದವನ್ನು ಸಾರುವ ಈ ಚಿತ್ರ ಕನ್ನಡಿಗರ ಮನ ಗೆಲ್ಲುವ ನಿರೀಕ್ಷೆ ಚಿತ್ರ ತಂಡಕ್ಕಿದೆ.