ನಿರ್ಭಯಾ ಅತ್ಯಾಚಾರಿಗಳಿಗೆ ನಾಳೆಯೇ ಗಲ್ಲು : ಅಪರಾಧಿಗಳ ಕುಣಿಕೆಗೆ ಕ್ಷಣಎಣಿಕೆ

ನವದೆಹಲಿ : ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳು ನಾಳೆ ಗಲ್ಲಿಗೇರುವುದು ಖಚಿತವಾಗಿದೆ. ನಿರ್ಭಯಾ ಹಂತಕರು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ನಿಗದಿಯಂತೆ ನಾಳೆ ಬೆಳಿಗ್ಗೆ 5 : 30 ಕ್ಕೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡಲು ಆದೇಶಿಸಿದೆ.

ನಿರ್ಭಯಾ ಹಂತಕರಾದ ಪವನ್ ,ಮುಕೇಶ್ , ಅಕ್ಷಯ ಹಾಗೂ ವಿನಯ್  ಗೆ ನಾಳೆ ಬೆಳಿಗ್ಗೆ 5 :30 ಕ್ಕೆ ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಗೋಳಿಸಲಾಗುತ್ತದೆ. 

ಈ ಮೊದಲು ಅಪರಾಧಿಗಳಿಗೆ ನಾಲ್ಕು ಬಾರಿ ಡೆತ್ ವಾರೆಂಟ್ ಜಾರಿಗೋಳಿಸಲಾಗಿತ್ತು. ಆದರೆ ಒಬ್ಬರಾದ ಮೇಲೆ ಒಬ್ಬರು ಕ್ಷಮಾದಾನ ಅರ್ಜಿ ಸಲ್ಲಿಸುವ ಮೂಲಕ ಗಲ್ಲು ಜಾರಿಯನ್ನು ಮುಂದುಡೂತ್ತ ಬಂದಿದ್ದರು. ಇನ್ನು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಳಂಬ ಆಗುತ್ತಿರುವುದರ ವಿರುದ್ಧ ದೇಶದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ಅಪರಾಧಿಗಳಿಗೆ ಇದ್ದ ಎಲ್ಲಾ ಕಾನೂನು ಅವಕಾಶಗಳು ಮುಗಿದಿದ್ದು, ನಾಳೆ ನೇಣುಗಂಬಕ್ಕೇರುವುದು ಖಚಿತವಾಗಿದೆ.