ಐಡಿ ನಕಲು ಮಾಡುತ್ತಿದ್ದ ಖದೀಮರ ಬಂಧನ..!
ನಕಲಿ ಐಡಿಗಳನ್ನು ಸೃಷ್ಟಿಸುತ್ತಿದ್ದ ಖದೀಮರ ಜಾಲವನ್ನು ಬೆಂಗಳೂರು ಪೋಲಿಸರು ಭೇದಿಸಿದ್ದಾರೆ. ಹೆಸರು ವಿಳಾಸ ಇಲ್ಲದ ಸುಮಾರು 9.000 ನಕಲಿ ಪಾನ್ ಕಾರ್ಡ, 28,000 ನಕಲಿ ವೋಟರ ಐಡಿ ಹಾಗೂ ವಿಳಾಸ ಮತ್ತು ಹೆಸರಿರುವ 6,240 ನಕಲಿ ವೋಟರ್ ಐಡಿಗಳನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಖದೀಮರು ಸರಕಾರಾದ ಚಿಹ್ನೆಗಳನ್ನು ಬಳಸಿ ಐಡಿಗಳನ್ನು ಮುದ್ರಣ ಮಾಡುತ್ತಿದ್ದರು. ಇದರಿಂದ ಸರಕಾರದ ಬೊಕ್ಕಸಕ್ಕೆ ನೂರಾರು ಕೋಟಿ ವಂಚನೆಯಾಗಿದೆ..
ಸಿಸಿಬಿಯಿಂದ ನಡೆಸಿದ ಅತಿ ದೊಡ್ಡ ಕರ್ಯಾಚರಣೆ ಇದಾಗಿದ್ದು ರಾಜಸ್ಥಾನ ಮೂಲದ ಕಮಲೇಶ್ ಮತ್ತು ತಂಡವನ್ನು ಬಂಧಿಸಿದ್ದೇವೆ ಎಂದು ಪೋಲಿಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ವರದಿ: ಮಂಜುನಾಥ ನಾಯಕ