ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಕುಂಬಾರ ಯುವ ಸೈನ್ಯ ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಕುಂಬಾರ ಯುವ ಸೈನ್ಯ ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಶಂಕರ ಶೆಟ್ಟಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ʼಬೆಂಗಳೂರ ಚಲೋʼ ಪ್ರತಿಭಟನೆ ಯಲಿ ರಾಜ್ಯದ ಎಲ್ಲಾ ಭಾಗದಿಂದ ಕುಂಬಾರ ಸಮದಾಯದ ಜನರು ಬಾಗವಹಿಸಿದ್ದರು. ಬೇಡಿಕೆ ಈಡೇರಿಸುವಂತೆ ತಲೆ ಮೇಲೆ ಮಡಿಕೆ ಹೊತ್ತು ಪ್ರತಿಭಟನೆ ಮಾಡುತ್ತಿರುವುದು ವಿಶೇಷವಾಗಿತ್ತು.
ಉತ್ತರ ಕರ್ನಾಟಕದ ಕುಂಬಾರ ಯುವ ಸೈನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕುಂಬಾರ (ಅರಷಣಗಿ) ಮಾತನಾಡಿ ಕುಂಬಾರ ಸಮಾಜವನ್ನು 2A ದರ್ಜೆಗೆ ಸೇರಿಸಬೇಕು ಜೊತೆಗೆ ಕುಂಬಾರರಿಗೆ ನಿಗಮ ಮಂಡಳಿ ಸಿಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮನವಿಗೆ ಸರ್ಕಾರ ಸ್ಪದಿಸದಿಂದರೆ ಮುಖ್ಯಮಂತ್ರಿ ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಲು ಯುವ ಸೈನ್ಯ ನಿರ್ಧರಿಸಿದೆ ಎಂದು ತಿಳಿಸಿದರು.
ವರದಿ:ಬಸವರಾಜ ಕುಂಬಾರ