ಯು.ಎನ್. ಸೆಕ್ಯುರಿಟಿ ಕೌನ್ಸಿಲ್'ನ ತಾತ್ಕಾಲಿಕ ಸದಸ್ಯರಾಗಿ 8ನೇ ಬಾರಿಗೆ ಆಯ್ಕೆಯಾದ ಭಾರತ...
ಭಾರತವು ಏಷ್ಯಾ-ಪೆಸಿಫಿಕ್ ಗ್ರೂಪ್ ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ಸ್ಥಾನಕ್ಕೆ, 8ನೇ ಬಾರಿ ಆಯ್ಕೆಯಾಗಿದೆ. ಜನರಲ್ ಅಸೆಂಬ್ಲಿಯ 193 ದೇಶಗಳು, ಬುಧವಾರ ನಡೆದ ಯು.ಎನ್ ಸೆಕ್ಯುರಿಟಿ ಕೌನ್ಸಿಲ್'ನ ತಾತ್ಕಾಲಿಕ ಸದಸ್ಯರನ್ನಾಗಿ ಆಯ್ಕೆ ಮಾಡುವ ಮತದಾನದಲ್ಲಿ ಭಾಗವಹಿಸಿದವು. ಅದರಲ್ಲಿ ಭಾರತಕ್ಕೆ 184 ದೇಶಗಳ ಬೆಂಬಲ ದೊರೆಯಿತು.
ಭದ್ರತಾ ಮಂಡಳಿಯ ಭಾರತದ ತಾತ್ಕಾಲಿಕ ಸದಸ್ಯತ್ವವನ್ನು ಯುಎಸ್ ಸ್ವಾಗತಿಸಿತು. "ಭಾರತ ಮತ್ತು ಅಮೆರಿಕ ಎರಡು ದೇಶಗಳು ವಿಶ್ವದ ಶಾಂತಿ ಮತ್ತು ಸುರಕ್ಷತೆಯಂತಹ ಪ್ರಮುಖ ವಿಷಯಗಳ ಬಗ್ಗೆ ಒಟ್ಟಾಗಿ ಕೆಲಸ ಮಾಡುತ್ತವೆ" ಎಂದು ಅಮೆರಿಕ ಹೇಳಿತು.
ಯುಎನ್ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯರನ್ನಾಗಿ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಹೊಸದಾಗಿ ಆಯ್ಕೆಯಾದ ಸದಸ್ಯರ ಅವಧಿಯು ಜನವರಿ 2021ರಲ್ಲಿ ಪ್ರಾರಂಭವಾಗಲಿದೆ. ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯರನ್ನು ಆಯ್ಕೆ ಮಾಡಲಾಗುವುದು.