'ಮಗ ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾನೆ ಮೊಮ್ಮಕ್ಕಳನ್ನು ಸಹ ಕಳಿಸುತ್ತೇನೆ': ಸಿಪಾಯಿ ಕುಂದನ್ ಕುಮಾರ್ ಅವರ ತಂದೆ..
ಚೀನಾದ ಸೈನಿಕರೊಂದಿಗೆ ಮುಖಾಮುಖಿಯಾಗಿ ಹುತಾತ್ಮರಾದವರಲ್ಲಿ ಒಬ್ಬರಾದ ಜಾರ್ಖಂಡ್ ನ, ಸಾಹೇಬ್ ಗಂಜ್ ಜಿಲ್ಲೆಯ ಸಿಪಾಯಿ ಕುಂದನ್ ಕುಮಾರ್ ಅವರ ತಂದೆ ನಮೇಂದ್ರ ಯಾದವ್ ಅವರು ತಮ್ಮ ಮಗನ ತ್ಯಾಗದ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.
"ನನ್ನ ಮಗ ರಾಷ್ಟ್ರಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದಾನೆ, ನನಗೆ ಇಬ್ಬರು ಮೊಮ್ಮಕ್ಕಳಿದ್ದಾರೆ, ನಾನು ಅವರನ್ನು ಸಹ ದೇಶ ಸೇವೆಗಾಗಿ ಭಾರತೀಯ ಸೇನೆಗೆ ಕಳುಹಿಸುತ್ತೇನೆ" ಎಂದು ಕುಂದನ್ ಅವರ ತಂದೆ ಹೇಳಿದರು.
ಇನ್ನು ಹುತಾತ್ಮ ಕುಂದನ್ ಕುಮಾರ್ ಅವರ ಪತ್ನಿ, "ನಾನು ಕೊನೆಯದಾಗಿ ಜೂನ್ 9ರಂದು ಅವರೊಂದಿಗೆ ಮಾತನಾಡಿದ್ದೆ. ಅವರ ಸಾವಿಗೆ ನಾನು ಪ್ರತೀಕಾರ ಬಯಸುತ್ತೇನೆ" ಎಂದು ಹೇಳಿದ್ದಾರೆ.