ಸಾಯಿ ಪ್ರಕಾಶ್‌ ನಿರ್ದೇಶನದ ಸೆಪ್ಟೆಂಬರ್-10‌ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ

ಸಾಯಿ ಪ್ರಕಾಶ್ ನಿರ್ಮಾಣ ಮತ್ತುನಿರ್ದೇಶನದ ಚಿತ್ರ ಸೆಪ್ಟೆಂಬರ್ 10 ಬಿಡುಗಡೆಗೆ ತಯಾರಾಗಿದ್ದು ,ಈ ಚಿತ್ರವು ಜಗತ್ತಿನಲ್ಲಿ ನಡೆಯುತ್ತಿರುವ ಆತ್ಮಹತ್ಯೆಅನ್ನೋ ಸಮಸ್ಯೆ ಕುರಿತಾಗಿದೆ. ದೇಶದಲ್ಲಿ ಎಷ್ಟೋ ಜನ ಒಂದಲ್ಲ ಒಂದು ಸಮಸ್ಯೆಗಳಿಂದ ಖಿನ್ನತೆಗೊಳಗಾಗಿ ಜಿಗುಪ್ಸೆಗೊಂಡು ಈ ಆತ್ಮಹತ್ಯೆ ಅನ್ನೋ ರೋಗಕ್ಕೆ ತುತ್ತಾಗ್ತಾ ಇದ್ದಾರೆ. ಅದು ಮಹಾ ಪಾಪ ಎಂಬ ಭಾವನೆ ಜನರಲ್ಲಿ ಮೂಢಿಸುವ ಸಲುವಾಗಿ ಈ ಚಿತ್ರ ಮಾಡಲಾಗಿದೆ ಎಂದು ನಿರ್ದೇಶಕ ಸಾಯಿ ಪ್ರಕಾಶ್ ಹೇಳಿದ್ದಾರೆ. ಈ ಚಿತ್ರದಲ್ಲಿ 7ಕುಟುಂಬಗಳ ಕಥೆಯನ್ನು ತೆಗೆದುಕೊಂಡು ಅದರಿಂದ ಜನರಿಗೆ ಒಂದು ಉಪಯುಕ್ತ ಮಾಹಿತಿಯನ್ನು ನೀಡಲು ಯತ್ನಿಸಿದ್ದಾರೆ ಎನ್ನಲಾಗಿದೆ. 
ಪ್ರೇಮಿಗಳು ತಮ್ಮ ಪ್ರೀತಿ ಯಶಸ್ವಿ ಆಗಲಿಲ್ಲ ಎಂದು ಆತ್ಮಹತ್ಯೆ ಮಾಡ್ಕೋತಾ ಇದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ಆಗಲಿಲ್ಲವೆಂದು ಅಥವಾ ಉತ್ತಮ ಅಂಕಗಳು ಬರಲಿಲ್ಲವೆಂದು ಆತ್ಮಹತ್ಯೆಗೆ ಶರಣಾಗ್ತಿದ್ದಾರೆ.
ಇನ್ನು ರೈತರು ಮಳೆ ಇಲ್ಲದೆ, ಬೆಳೆ ಇಲ್ಲದೆ, ಸಾಲದ ಶೂಲಕ್ಕೆ ತುತ್ತಾಗಿ ಇಡೀ ಕುಟುಂಬವೇ ಆತ್ಮಹತ್ಯೆಗೆ ಬಲಿಯಾಗ್ತಿದ್ದಾರೆ. ಇನ್ನೊಂದು ಕಡೆ ವ್ಯವಹಾರದಲ್ಲಿ ಅಪಾರ ನಷ್ಟ ಉಂಟಾದಾಗ ಧೈರ್ಯದಿಂದ ಎದರಿಸಲಾಗದೆ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಬಲಿ ಆಗ್ತಾರೆ.
ಮತ್ತೊಂದು ಕಡೆ ಮಕ್ಕಳು ತಮ್ಮ ಕನಸು ನನಸಾಗಲಿಲ್ಲವೆಂದು, ಅದಕ್ಕೆ ಹೆತ್ತವರು ಸ್ಪಂದಿಸಲಿಲ್ಲವೆಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗ್ತಾರೆ.
ಇನ್ನು ಗಂಡ ಹೆಂಡ್ತಿ ಮಧ್ಯೆ ಸಂಸಾರದಲ್ಲಿ ಚಿಕ್ಕ-ಚಿಕ್ಕ ಸಮಸ್ಯೆಗಳಿಗೆ ವೈಮನಸ್ಸು ಬಂದು ಪ್ರಾಣ ಕಳ್ಕೊಂತಾರೆ. ಹೀಗೆ ವಿಶ್ವದಾದ್ಯಾಂತ ಒಂದಲ್ಲ ಒಂದು ಸಮಸ್ಯೆಗಳು ಅವರನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ತಂದು ಬಿಡುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರ ಅಲ್ಲ. ಎಂತಹ ಸಮಸ್ಯೆಗಳಿಗಾದರೂ ಒಂದಲ್ಲ ಒಂದು ಪರಿಹಾರ ಇದ್ದೇ ಇದೆ. ಎಲ್ಲವನ್ನು ಧೈರ್ಯದಿಂದ ಹೆದರಿಸಿ ಮುನ್ನುಗ್ಗಿದರೆ ಖಂಡಿತ ಗೆಲುವು ನಿಮ್ಮಾದಾಗುತ್ತದೆ ಕನಸು ನನಸಾಗುತ್ತದೆ. ಈ ಅಪರೂಪದ ಸಂದೇಶ ನೀಡುವುದೇ ಈ ಸೆಪ್ಟೆಂಬರ್-10 ಚಲನಚಿತ್ರದ ಪ್ರಮುಖ ಉದ್ದೇಶವಾಗಿದೆ ಎಂದು ನಿರ್ದೇಶಕ ಸಾಯಿ ಪ್ರಕಾಶ್ ಅವರು ಹೇಳಿದ್ದಾರೆ. 
ಈ ಚಿತ್ರದಲ್ಲಿ ಶಶಿಕುಮಾರ್, ಶ್ರೀನಿವಾಸಮೂರ್ತಿ, ಶಿವಕುಮಾರ್ , ರಮೇಶ್ ಭಟ್, ಸಿಹಿಕಹಿ ಚಂದ್ರು, ರವೀಂದ್ರನಾಥ್ , ಪದ್ಮಾವಾಸಂತಿ, ಆಕಾಶ್, ಮೀಸೆ ಆಂಜಿನಪ್ಪ, ಆರಾಧ್ಯ, ಗಣೇಶ್ ರಾವ್, ಮುರುಳೀಧರ್, ಶ್ರೀರಕ್ಷ ಇಂತಹ ಪ್ರಮುಖ ಕಲಾವಿದರ ತಾರಾಗಣವಿದೆ.