ಎರಡನೇ ಏಕದಿನ ಪಂದ್ಯದಿಂದ ರಿಷಬ್ ಔಟ್; ಆತಂಕದಲ್ಲಿ ಟೀಮ್ ಇಂಡಿಯಾ
ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋತಿರುವ ಭಾರತ ತಂಡಕ್ಕೆ ಮತ್ತೊಂದು ಅಘಾತ ಉಂಟಾಗಿದೆ. ವಿಕೆಟ್ ಕೀಪರ್ ರಿಷಬ್ ಪಂತ್ ಗಾಯದ ಕಾರಣ 2 ನೇ ಪಂದ್ಯದಲ್ಲಿ ಆಡುವುದು ಅನುಮಾನವಾಗಿದ್ದು ಇದು ವಿರಾಟ್ ಪಡೆಗೆ ಸಂಕಷ್ಟ ಎರಡನೇ ಏಕದಿನ ಪಂದ್ಯವು ಭಾರತಕ್ಕೆ ಡು ಆರ್ ಡೈ ಪಂದ್ಯವಾಗಿದ್ದು, ರಿಷಬ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳವ ಸಾಧ್ಯತೆ ಇದೆ. ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 10 ವಿಕೆಟ್ ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಭಾರತಕ್ಕೆ ಎರಡು ಹೊಡೆತ ಬಿದ್ದಿದೆ, ಒಂದು ಪಂದ್ಯದಲ್ಲಿ ಸೋತಿರುವುದು ಇನ್ನೊಂದು ರಿಷಬ್ ಪಂತ್ ಗಾಯಗೊಂಡಿರುವುದು. ಈ ಕಾರಣದಿಂದಾಗಿ ಮೊದಲನೇ ಪಂದ್ಯದಲ್ಲಿ ಪಂತ್ ಬದಲಿಗೆ ಫೀಲ್ಡಿಂಗ್ ನಲ್ಲಿ ಭಾರತ ಬೇರೆ ಆಟಗಾರನನ್ನು ಸೇರಿಸಿಕೊಳ್ಳಬೇಕಾಯಿತು.