ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಮೇಲೆ ಹಲ್ಲೆ
ಸಾಮಾಜಿಕ ಕಾರ್ಯಕರ್ತ ಹೀರೇಮಠ ಮೇಲೆ ಹಲ್ಲೆ
ಸಾಮಾಜಿಕ ಕಾರ್ಯಕರ್ತ ಎಸ್. ಆರ್. ಹೀರೇಮಠ ಅವರ ಮೇಲೆ ಕೆಲವು ಮಂದಿ ದುಷ್ಕರ್ಮಿಗಳು ಹಲ್ಲೆ ಮಾಡಿರುವ ಘಟನೆಯು ನಡೆದಿದೆ.
ರಾಮನಗರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಭೂ ಕಬಳಿಕೆ ಮಾಡಿದ್ದಾರೆ ಎನ್ನುವ ಆರೋಪ ಮಾಡಿರುವ ಹೀರೇಮಠ ಅವರು ಹಲವಾರು ಹಗರಣಗಳನ್ನು ಬಯಲಿಗೆ ಎಳೆದಿದ್ದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದರಲ್ಲಿ ಭಾಗಿಯಾಗಿದ್ದರು ಎಂದು ಅವರು ಆರೋಪ ಮಾಡಿದ್ದರು.
ರಾಮನಗರದ ಕೇತಗನಹಳ್ಳಿಯಲ್ಲಿ ತನ್ನ ಮತ್ತು ಇತರ ಕೆಲವು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೀರೇಮಠ ಅವರು ದೂರು ನೀಡಿದ್ದಾರೆ. ಈ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಮಂತ್ರಿ ಎಚ್ ಡಿಕೆ ಅವರು ಕಬಳಿಸಿರುವ ಭೂಮಿಯ ಬಗ್ಗೆ ದಾಖಲೆ ಸಂಗ್ರಹಿಸಲು ಹೀರೇಮಠ ಮತ್ತು ರಾಮಕೃಷ್ಣ ರೆಡ್ಡಿ ಎಂಬವರು ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಈ ಗ್ರಾಮದಲ್ಲಿ 200 ಕೋಟಿ ರೂ. ಭೂ ಕಬಳಿಕೆ ಮಾಡಿದ್ದಾರೆ ಎಂದು ಹೀರೇಮಠ ಆರೋಪಿಸಿದ್ದಾರೆ.