ಕೊರೊನಾ ವಿರುದ್ಧ ಹೋರಾಟಕ್ಕೆ: ಕೇಂದ್ರದಿಂದ 1.70 ಲಕ್ಷ ಕೋಟಿ ರೂ. ಘೋಷಣೆ
ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಕೊರೊನ್ ಪರಿಹಾರದ ಭಾಗವಾಗಿ ಸೋಂಕಿನ ವಿರುದ್ಧ ಹೋರಾಡುತ್ತಿರುವವರಿಗೆ, ಬಡವರಿಗೆ ನೆರವಾಗುವ ನಿಟ್ಟಿನಲ್ಲಿ 1.70 ಲಕ್ಷ ಕೋಟಿ ರೂ. ಪರಿಹಾರ ನಿಧಿ ಘೋಷಣೆ ಮಾಡಿದರು.
ಸುದ್ದಿಗೋಷ್ಠಿಯ ಹೈಲೈಟ್ಸ್..
1) ಕೇಂದ್ರಸರ್ಕಾರ ಗರೀಬಿ ಕಲ್ಯಾಣ ಯೋಜನೆಯ ರೂ 1.76 ಲಕ್ಷ ಕೋಟಿ ರೂ ಕೋರೋನಾ ರಿಲೀಪ್ ಪಂಢ್, ದೇಶದ ಯಾವ ಬಡವರು ಹಸಿವಿನಿಂದ ಇರಬಾರದು
2) ಡಾಕ್ಟರ್, ನರ್ಸ್, ಆಶಾ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿ, ಪೌರಕಾರ್ಮಿಕರಿಗೆ 3 ತಿಂಗಳವರೆಗೆ 50 ಲಕ್ಷ ಆರೋಗ್ಯ ಜೀವಮಿಮೆ..
3) ಪಿ ಎಂ ಗರೀಬಿ ಕಲ್ಯಾಣ ಅನ್ನ ಯೋಜನೆ, 80 ಕೋಟಿ ಕುಟುಂಬಕ್ಕೆ ಈ ಮೊದಲು ನೀಡುವ ಧಾನ್ಯದ ಜೊತೆಗೆ ಹೆಚ್ಚುವರಿಯಾಗಿ 5 ಅಕ್ಕಿ ಅಥವಾ 5 ಗೋಧಿ 3 ತಿಂಗಳಿಗೆ, 1 ದ್ವಿದಳಧಾನ್ಯ ಮೊದಲೇ ಉಚಿತವಾಗಿ ನೀಡಲಾಗುವುದು..
4) 8 ಯೋಜನೆಗಳು ನೇರ ಹಣ ವರ್ಗಾವಣೆ,
a) ಸಣ್ಣ ರೈತರು,6000 ಜೊತೆಗೆ 2000 ರೂ..
b) ಹೆಣ್ಣುಮಕ್ಕಳ ಜನಧನ್ ಯೋಜನೆ 3 ತಿಂಗಳಿಗೆ 500 ರೂ ಒಟ್ಟು 1500ರೂ..
c) 3 ಕೋಟಿ ವಿಧವೆಯರು, ವೃದ್ಧರು, ಅಂಗವಿಕಲರಿಗೆ ಈಗಿನ ಸಂಬಳದ ಜೊತೆಗೆ 1000 ರೂ ಹೆಚ್ಚು.
d) ಉಜ್ವಲಾ ಯೋಜನೆ ಪಲಾನುಭವಿಗಳಿಗೆ 3 ತಿಂಗಳು ಉಚಿತ ಗ್ಯಾಸ್ ಸಿಲಿಂಡರ್
e) ಮನರೇಗಾ 5 ಕೋಟಿ ಕೂಲಿ ಕಾರ್ಮಿಕರು 2000 ರೂ..
f) ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯುರಿಗೆ 20 ಲಕ್ಷ ಸಂಘದ ಬಡ್ಡಿರಹಿತ ಸಾಲ..
g) ಸಂಘಟಿತ ಕಾರ್ಮಿಕ ವಲಯಕ್ಕೆ ಇಪಿಎಪ್ 100 ಜನರಿರುವ 15000 ಕ್ಕಿಂತ ಕಡಿಮೆ ಸಂಬಳದ ನೌಕರರಿಗೆ 3 ತಿಂಗಳ 24% ಕಂತು ಕೇಂದ್ರಸರ್ಕಾರ ಪಾವತಿ..
h) ನೊಂದಾಯಿತ ಕಟ್ಟಡಕಾರ್ಮಿಕರಿಗೆ 31000 ಕೋಟಿ ಬಳಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸೂಚನೆ.