ದೇಶದಲ್ಲಿ ಲಾಕ್ ಡೌನ್ ಹಿನ್ನಲೆ : ಮಧ್ಯಮ ವರ್ಗಕ್ಕೆ ಬಿಗ್ ರಿಲೀಫ್ ನೀಡಿದ ಆರ್ ಬಿ ಐ : ಇನ್ನು ಮೂರು ತಿಂಗಳು ಸಾಲದ EMI ಕಟ್ಟದಿದ್ರೂ ತೊಂದರೆ ಇಲ್ಲಾ..

ನವದೆಹಲಿ : ಕೊರೊನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ದೇಶದ ಜನತೆಗೆ ಆರ್ ಬಿ ಐ ಬಿಗ್ ರಿಲೀಫ್ ನೀಡಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಸಾಲದ  ಕಂತು ಪಾವತಿ ಅವಧಿಯ ವಿಸ್ತರಣೆ ಮುಂದೂಡುವುದು ಸೇರಿದಂತೆ ಹಲವು ಕ್ರಮಗಳನ್ನು ಘೋಷಿಸಿದರು.

ಸಾಲದ ಕಂತು ಪಾವತಿ ಅವಧಿ ವಿಸ್ತರಣೆಗೆ ಜನರು ಸರ್ಕಾರವನ್ನು ಆಗ್ರಹಿಸಿದ್ದರು. ಅದರಂತೆ ಇಂದು ಆರ್ ಬಿ ಐ ಗ್ರಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ ಸೇರಿದಂತೆ ಎಲ್ಲಾ ರೀತಿಯ ಸಾಲದ ಕಂತು ಪಾವತಿಗೆ ಮೂರು ತಿಂಗಳ ವಿನಾಯತಿ ನೀಡಲಾಗಿದೆ. ಇದು ದೇಶದ ಮಧ್ಯಮ ವರ್ಗದ ಜನರಿಗೆ ಬಿಗ್ ರಿಲೀಫ್ ನೀಡಿದ್ದು,  ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ಆರ್ಥಿಕ ಹೊರೆಯನ್ನು ತಗ್ಗಿಸಲಿದೆ. 

ಇನ್ನು ಚಿನ್ನದ ಮೇಲಿನ ಸಾಲಕ್ಕೂ ಈ ನಿಯಮ ಅನ್ವಯಾವಾಗಲಿದ್ದೂ ಚಿನ್ನದ ಮೇಲೆ ಸಾಲ ಪಡೆದಿರುವವರಿಗೆ ಸಹ ಈ ವಿನಾಯತಿ ದೊರೆಯಲಿದೆ. ಆರ್ ಬಿ ಐ  ನ ಈ ಸೂಚನೆಗಳು ರಾಷ್ಟೀಕ್ರತ ಬ್ಯಾಂಕ್, ಸಹಕಾರಿ ಬ್ಯಾಂಕ್ , ಖಾಸಗಿ ಬ್ಯಾಂಕ್ , ಎನ್ ಬಿಎಫ್ ಸಿ ಸೇರಿದಂತೆ ಆರ್ ಬಿ ಐ ನಿಯಮಾವಳಿ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಅನ್ವಯಿಸಲಿವೆ.