ನಾನು ಯಾರು?
ಏನಿದು ಯಾರನ್ನ ಕೇಳ್ತಿದಿನಿ ಅಂದುಕೊಂಡ್ರಾ?
ಹೌದು ನಾನು ಅಂದರೆ ಮತ್ತಿನ್ಯಾರು ಅಲ್ಲ 2020.
ಪ್ರತಿ ವರ್ಷದಂತೆ ಈಬಾರಿಯೂ ಸಹ ವರ್ಷ ಕಳೆದು ಹೊಸ ವರ್ಷ ಬರುತ್ತಿದೆ ಆದರೆ ನಿಮಗೆ ಪ್ರತಿ ವರ್ಷದಂತೆ ಈ ಬಾರಿ ನನ್ನಿಂದ ಸಿಹಿ ನೆನಪುಗಳಿಗಿಂತ ಸಿಕ್ಕಿರುವದು ಕಹಿ ನೆನಪುಗಳೇ..
ಪ್ರತಿಯೊಬ್ಬರೂ ಕನಸಲ್ಲೂ ಊಹಿಸಿರದ ಹಾಗೆ ತಮ್ಮ ಕಷ್ಟದ ಬದುಕನ್ನು ತುಂಬಾ ಹತ್ತಿರದಿಂದ ನೋಡಿ ಅಬ್ಭಾ ಇದೊಂದು ಬದುಕಾ ಸಾಕಾಗಿದೆ ನಮಗೆ ಎನ್ನುವಷ್ಟರ ಮಟ್ಟಗೆ ಸಮಸ್ಯೆಗಳನ್ನು ಎದುರಿಸಿದ್ದೀರಿ ನೀವುಗಳು ಹೇಳಬಹುದು ಇದಕ್ಕೇಲ್ಲಾ ಕಾರಣ ನಾನೇ ಎಂದು .
ಮನುಷ್ಯನ ಗುಣಗಳೇ ಹಾಗೆ ಸುಖವಿದ್ದಾಗ ನೆನಿಯದೆ ಕಷ್ಟ ಬಂದಾಗ ಅದನ್ನು ಮತ್ತೊಬ್ಬರ ಹೆಗಲಿಗೆ ಕಟ್ಟುವದು ಅವನ ಸ್ವಭಾವ.
ನಿಮ್ಮ ಪ್ರತೀ ನೋವಿಗೂ ಶಾಪ ಹಾಕುತ್ತಾ ಅಯ್ಯೋ ಈ 2020 ಯಾಕಾದರೂ ಬಂತೋ ಇದೊಂದು ಸಾವಿನ ವರ್ಷ ಅದೇಷ್ಟೋ ಜನರನ್ನು ನುಂಗಿಕೊಂಡು ನಮ್ಮನ್ನೆಲ್ಲಾ ಭೂತದಂತೆ ಬೆಂಬಿಡದೆ ಕಾಡಿದ ವರ್ಷವೆಂದು ಹಿಡಿ ಶಾಪ ಹಾಕಿದ್ದೀರಾ ಎನ್ನುವುದು ನನಗೆ ತಿಳಿದಿದೆ...
ಈ ಒಂದು ಮಹಾಮಾರಿಯಿಂದ ಮನು ಕುಲಕ್ಕೆ ಕೆಟ್ಟದ್ದೇ ಆಗಿರಬಹುದು ಆದರೆ ಅದರಿಂದ ಎಲ್ಲರೂ ಕಲಿತ ಪಾಠಗಳು ಅಷ್ಟಿಷ್ಟಲ್ಲ ಜೀವದ ಬೆಲೆ ತಿಳಿಯದವನಿಗೆ ಜೀವದ ಬೆಲೆ ಏನು ಸಂಬಂಧಗಳ ಅರ್ಥಗೋತ್ತಿಲ್ಲದವನಿಗೆ ತಮ್ಮವರು ಕಣ್ಣುಮುಂದೆಯೇ ತಮ್ಮನ್ನು ಅಗಲಿದಾಗ ಅದರ ಬೆಲೆ ಏನೆಂದು ತಿಳಿಯುವದಕ್ಕೆ ಕಾರಣವೇ ಈ ಕೋವಿಡ್ ಮಹಾಮಾರಿ ಎನ್ನುವುದು ನನ್ನ ಮಾತು .
ಇಲ್ಲದಿದ್ದರೆ ಮನುಷ್ಯ ಬದಲಾಗುತ್ತರಲಿಲ್ಲ ಅವನಲ್ಲಿ ಮಾನವೀಯತೆ ಸತ್ತೇ ಹೋಗುತ್ತಿತ್ತು ಬರೀ ಸ್ವಾರ್ಥಕ್ಕಾಗಿ ಮತ್ತೊಬ್ಬರ ಪ್ರಾಣವನ್ನೇ ತೆಗೆಯುತ್ತಿದ್ದ ಮನುಷ್ಯನಲ್ಲೂ ಮಾನವೀಯತೆ ಎಂಬುದು ಇನ್ನು ಜೀವಂತವಾಗಿದೆ ಎಂದು ತಿಳಿಸಿ ಕೊಟ್ಟಿದ್ದೇ ಈ ಕೋವಿಡ್ ಮಹಾಮಾರಿ.
ಇದಕ್ಕೆಲ್ಲ ಕಾರಣ ನಾನಲ್ಲ ನಿಮ್ಮಲ್ಲಿರುವ ಅಜಾಗರೂಕಥೆ, ಸಿರಿತನದ ಅಹಂಕಾರ ದುಡ್ಡೊಂದಿದ್ದರೆ ಜಗತ್ತನ್ನೆ ಗೆಲ್ಲಬಹುದು ಎಂಬ ಒಣ ಜಂಭವೇ ಕಾರಣ....
ನನ್ನ ಸಮಯದಲ್ಲಿ ಕೋಟ್ಯಾಂತರ ಜನರಿಗೆ ನೋವು ಸಾವುಗಳಾಗಿದೆ , ಸಾಮಾನ್ಯ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ ಎನ್ನುವುದು ಸತ್ಯ.
ಆದರೆ ಅದರಿಂದ ಎಂದಿಗೂ ಬದಲಾಗದ ಮನುಕಲದಲ್ಲಿ ಬದಲಾವಣೆ ಕಾಣುತ್ತಿದೆ ನಾನು ಎನ್ನುತ್ತಿದ್ದವರು ನಾವು ಎನ್ನುವಂತಾಗಿದೆ ವೃಧ್ಧಾಪ್ಯದಲ್ಲಿ ಮಕ್ಕಳಿಂದ ದೂರವಾದ ಎಷ್ಟೋ ತಂದೆ ತಾಯಿಗಳು ಮತ್ತೆ ಮಕ್ಕಳ ವಾತ್ಸಲ್ಯ ಕಾಣುವಂತಾಗಿದೆ ತಂದೆ ತಾಯಿಗಳ ಬೆಲೆ ಮಕ್ಕಳಿಗೆ ಅರ್ಥವಾಗಿದೆ.
ತಾವು ಮಾಡಿದ ತಪ್ಪುಗಳನ್ನು ಮರೆತು ಮತ್ತೊಬ್ಬರ ತಪ್ಪುಗಳನ್ನೇ ಹುಡುಕುವ ಪ್ರತಿಭಾಂತರು ನೀವುಗಳು ಎಂದು ತುಂಬಾ ಚೆನ್ನಾಗಿ ತಿಳಿದೆ ಇದು ಕಹಿಯಾದರೂ ಸತ್ಯವೇ ನಾವೆಲ್ಲರೂ ಈ ಕಟು ಸತ್ಯವನ್ನು ಒಪ್ಪಿಕೊಳ್ಳಲೇಬೇಕು ಹಣೆ ಬರಹವನ್ನು ಬದಲಿಸಲೂ ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಈಗಲಾದರೂ ಎಲ್ಲರಿಗೂ ಚೆನ್ನಾಗಿ ಅರ್ಥವಾಗಿದೆ ಎಂದು ಭಾವಿಸುತ್ತೇನೆ.
ಪ್ರಕೃತಿ ಮುನಿದರೆ ಸರ್ವನಾಶವೇ ಆಗುವುದು ಎಂಬುದು ಎಲ್ಲರಿಗೂ ನೆನಪಿರಲಿ.
ಇದು ವರ್ಷದ ಅಂತ್ಯವಲ್ಲ ನಮ್ಮಲ್ಲಿರುವ ಕೆಟ್ಟ ಚಟಗಳ ,ದುರಹಂಕಾರದ ಅಂತ್ಯವೆಂದು ಭಾವಿಸೋಣ
ಕಿವಿ ಮಾತು :
ನಾಲ್ಕು ಜನರಿಗೆ ನಾವು ಸಹಾಯಮಾಡಿದರೆ ನಮಗೆ ಯಾರಾದರೂ ಒಬ್ಬರೂ ಸಹಾಯ ಮಾಡಲು ಮುಂದೆ ಬರುತ್ತಾರೆ .
ವರದಿ :ಸಂಜಯ್.ಕೊಳ್ಳಿ
ಆಲ್ಮಾನ್ಯೂಸ್24 ಬೆಂಗಳೂರು