ಕುಷ್ಟಗಿ ಪಟ್ಟಣದಲ್ಲಿ ಬಡವರಿಗೆ ನಂದಿನಿ ಹಾಲು ಉಚಿತವಾಗಿ ವಿತರಣೆ....

ಕೊರೋನ ವೈರಸ್ ಹಿನ್ನೆಲೆಯಲ್ಲಿ 10ನೇ ಲಾಕ್ ಡೌನ್ ಆಗಿದ್ಧು ಕುಷ್ಟಗಿ ಪಟ್ಟಣದಲ್ಲಿ ಕಡುಬಡವರಿಗೆ ನಂದಿನಿ ಹಾಲು ಉಚಿತವಾಗಿ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಒಟ್ಟು 520 ಪ್ಯಾಕೆಟ್ ಗಳಲ್ಲಿ ಸ್ಥಳೀಯ ಕಡುಬಡವರ ವಸತಿ ನಿಲಯಕ್ಕೆ 490 ಹಾಗೂ ವಸತಿ ನಿಲಯಗಳಲ್ಲಿ ಆಶ್ರಯ ಪಡೆದಿರುವ ಹೊರ ರಾಜ್ಯದ ಕಡುಬಡವ ಕುಟುಂಬಗಳಿಗೆ 30 ಹಾಲು ಪ್ಯಾಕೆಟ್ಗಳನ್ನು ವಿತರಿಸಲಾಯಿತು ಹಾಗೂ ಕೊರೋನ ವೈರಸ್ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿ ಕುಳಿತುಕೊಂಡು ಸಂಪೂರ್ಣ ಮಹಾಮಾರಿ ಸೋಂಕಿನ ವಿರುದ್ಧ ಹೋರಾಡಬೇಕಾಗಿದೆ ಹಾಗೂ ಸರ್ಕಾರದ ಆಜ್ಞೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲವಾದಲ್ಲಿ ಸ್ವಯಂಕೃತವಾಗಿ ಅಪರಾಧವಾಗುತ್ತದೆ ಕರೋನವೈರಸ್ ಸೋಂಕಿನ ಕಡಿಮೆಯಾದರೆ ಲಾಕ್ ಡೌನ್ ಕೊನೆಗೊಳ್ಳುತ್ತದೆ ಇಲ್ಲವಾದರೆ ಸೋಂಕು ಹೆಚ್ಚಳವಾದರೆ ಮುಂದುವರೆಯುತ್ತದೆ ಆದ್ದರಿಂದ ಎಲ್ಲರೂ ಮನೆಯಲ್ಲಿ ಇದ್ದುಕೊಂಡು ಕರೋನವೈರಸ್ ವಿರುದ್ಧ ಹೋರಾಡಬೇಕಾಗಿದೆ ಎಂದು ಅಮರೇಗೌಡ ಬಯ್ಯಾಪುರ ಪಾಟೀಲ ಹೇಳಿದರು ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ,ಬಸವರಾಜ ಯರದೊಡ್ಡಿ ಕೆಎಂಎಫ್ ಸಿಬ್ಬಂದಿ ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ವರದಿ ಶರಣಪ್ಪ ಕುಂಬಾರ ತಾವರಗೇರಾ