ಅನಾವಾಶ್ಯಕವಾಗಿ ಸಾಹಸ ಸಿಂಹನನ್ನು ಕೆಣಕಿ ವಿವಾದ ಮಾಡಿಕೊಂಡ ತೆಲುಗು ಚಿತ್ರ ನಟ
ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ಅವಹೇಳನಕಾರಿಯಾಗಿ ಮಾತಾನಾಡಿದ್ದು,ಭಾರಿ ವಿವಾದಕ್ಕೆ ಎಡೆಮಾಡಿತ್ತು. ರಂಗರಾಜು ದಾದಾ ಅಭಿಮಾನಿಗಳನ್ನು ಅನಾವಶ್ಯಕವಾಗಿ ಕೆಣಕಿದ್ದಾರೆ ಎಂದು ವಿಷ್ಣು ಅಭಿಮಾನಿಗಳು ಕೆಂಡಮಂಡಲವಾಗಿದ್ದಾರೆ.
ಇತ್ತೀಚಿಗಷ್ಟೇ ಯಟ್ಯೂಬ್ ಚಾನೆಲ್ ನ ಸಂದರ್ಶನವೊಂದರಲ್ಲಿ, ತೆಲುಗು ಚಿತ್ರನಟ ರಂಗರಾಜು ಸಾಹಸ ಸಿಂಹ ವಿಷ್ಣು ಅವರ ವಿರುದ್ಧ ಕೀಳು ಮಾತುಗಳನ್ನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಚಿತ್ರ ಪ್ರೇಮಿಗಳ ಆಕ್ರೋಶಕ್ಕೆ ಇದು ಕಾರಣವಾಗಿದ್ದು ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಕನ್ನಡ ಚಿತ್ರರಂಗದ ನಟರಾದ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ಯಶ್, ಉಪೇಂದ್ರ, ಗಣೇಶ್ ಸೇರಿದಂತೆ ಇನ್ನೂ ಅನೇಕ ನಟರು ರಂಗರಾಜು ಆಡಿದ ಮಾತುಗಳನ್ನು ಖಂಡಿಸಿದ್ದು, ವಿಡಿಯೋ ಸಂದೇಶದ ಮೂಲಕ ಇವರಿಗೆ ಖಡಕ್ ಎಚ್ಚರಿಗೆ ನೀಡಿದ್ದರು .
ನಾನು ವಿಷ್ಣು ಬಗ್ಗೆ ಹೇಳಿರುವುದೆಲ್ಲಾ ಸುಳ್ಳು. ಸಾಹಸ ಸಿಂಹ ನಿಧನರಾಗುವ ಕೆಲ ತಿಂಗಳ ಹಿಂದೆ ನನಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಆದರೆ ಈ ಪಾತ್ರವನ್ನು ವಿಷ್ಣುವರ್ಧನ್ ಅವರು ಬೇರೆಯವರಿಗೆ ನೀಡಿದ್ದರು. ಆದ್ದರಿಂದ, ಅದೇ ಸಿಟ್ಟಿನಲ್ಲಿ ನಾನು ದಾದಾ ಕುರಿತು ಹುಚ್ಚನಂತೆ ಮಾತನಾಡಿಬಿಟ್ಟೆ. ಸಂದರ್ಶನದಲ್ಲಿ ಹೇಳಿರುವಂತೆಯೇ ನಾನು ಅಭಿನಯ ಭಾರ್ಗವನ ಜೊತೆಗೆ ನಡೆದುಕೊಂಡಿದ್ದರೆ, ಸ್ವತಃ ಯುಟ್ಯೂಬ್ ಚಾನೆಲ್ ನವರೇ ನನ್ನನ್ನು ಕೊಂದು ಬಿಡುತ್ತಿದ್ದರು ಎಂದು ತೆಲುಗು ನಟ ರಂಗರಾಜು ಹೇಳಿದ್ದಾರೆ. ಇವರ ಕುರಿತು ನಾನು ಹೀಗೆ ಮಾತನಾಡಬಾರದಿತ್ತು. ಎಂದು ಮಂಡಿಯೂರಿ, ಕಂಬನಿ ಹಾಕುವ ಮೂಲಕ ವಿಜಯ್ ಕ್ಷಮೆಯಾಚಿಸಿದ್ದರು.
ನಟರಾದ ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ದಾದ ಅಭಿಮಾನಿಗಳ ಹತ್ತಿರ ಕ್ಷಮೆ ಕೇಳುತ್ತೇನೆ. ಭಾರತಿ ವಿಷ್ಣುವರ್ಧನ್ ಅವರ ಕಾಲು ಹಿಡಿದುಕೊಳ್ಳುತೇನೆ ಎಂದು ವಿಜಯ್ ಅಳುತ್ತ ಕ್ಷಮೆಯಾಚಿಸಿದ್ದಾರೆ. ನಾನೇನು ಖ್ಯಾತ ನಟನಲ್ಲ, ಅಲ್ಪ-ಸ್ವಲ್ಪ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ ಅಷ್ಟೇ. ನಾನು ಚಿತ್ರರಂಗಕ್ಕೆ ಫೈಟರ್ ಆಗಿ ಪಾದಾರ್ಪಣೆ ಮಾಡಿದ್ದು, ಕೊಂಚ ವ್ಯಾಪಾರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ಕೆಲ ವರ್ಷಗಳ ಕಾಲ ನಾನು ಲಂಡನ್ ಅಲ್ಲಿ ನೆಲೆಸಿದ್ದು, ಶೌಚಾಲಯಗಳು, ರಸ್ತೆಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಿದ್ದೆ. ಮೇರು ನಟ, ವ್ಯಕ್ತಿಯಾದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಕುರಿತು ಮಾತನಾಡುವ ಅರ್ಹತೆ ನನಗಿಲ್ಲ. ನನ್ನ ಅಹಂಕಾರದ ಮಾತುಗಳಿಗೆ ನಾನೆ ಹೊಣೆ ಎಂದು ಹೇಳಿದ ರಂಗರಾಜು ಕಣ್ಣೀರು ಹರಿಸಿ ಕೋಟಿ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ.
ವರದಿ: ಹೆಚ್ ಶ್ರೀ ಹರ್ಷ