ದೆಹಲಿ ಮಹಿಳೆಯರಿಗೆ ಎಷ್ಟು ಸೇಫ್ ....?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ರಕ್ಷಣೆಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಅಲ್ಲಿನ ಡಿಟಿಎಸ್ ಬಸ್ ಗಳಿಗೆ ಮಾರ್ಷಲ್ ಗಳ ನೇಮಕ ಮಾಡಲಾಗಿದೆ. ಮಹಿಳೆಯರ ರಕ್ಷಣೆ ಅವ್ರ ಹೊಣೆಯಾಗಿರುತ್ತದೆ. ಆದ್ರೆ ಮಾರ್ಷಲ್ ಎದುರಿನಲ್ಲಿಯೇ ಪತ್ರಕರ್ತೆಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.

ರಾತ್ರಿ 8 ಗಂಟೆ ವೇಳೆಗೆ ಬಸ್ ಹತ್ತಿದ್ದ ಪತ್ರಕರ್ತೆಯನ್ನು ಟಿಕೆಟ್ ಚೆಕ್ಕರ್ ತಪ್ಪಾಗಿ ಸ್ಪರ್ಶಿಸಿದ್ದಾನಂತೆ.

ಈ ಬಗ್ಗೆ ಕಂಡಕ್ಟರ್ ಗೆ ಹೇಳಿದ್ರೆ ನನಗೆ ಹೇಳಬೇಡ ಎಂದು ಆತ ಪ್ರತಿಕ್ರಿಯೆ ನೀಡಿದ್ದಾನಂತೆ. ಪತ್ರಕರ್ತೆ ಟಿಕೆಟ್ ಚಕ್ಕರ್ ಕೆಳಗೆ ಇಳಿಯದಂತೆ ನೋಡಿಕೊಳ್ಳಿ. ಬಾಗಿಲು ತೆರೆಯಬೇಡಿ ಎಂದು ಪತ್ರಕರ್ತೆ ಹೇಳಿದ್ರೂ ಚಾಲಕ ಆಕೆ ಮಾತು ಕೇಳಿಲ್ಲವಂತೆ. ಜಿದ್ದು ಬಿಡದ ಪತ್ರಕರ್ತೆ ಬಸ್ ನ್ನು ಪೊಲೀಸ್ ಠಾಣೆಗೆ ತಂದಿದ್ದಾಳೆ. ಆದ್ರೆ ಅಲ್ಲಿ ಅಧಿಕಾರಿಗಳಿರಲಿಲ್ಲ ಎನ್ನುವ ಕಾರಣಕ್ಕೆ ನೋಯ್ಡಾ ಪೊಲೀಸರಿಗೆ ಟ್ವಿಟ್ ಮಾಡಿದ್ದಾಳೆ.

ಇದಾದ ನಂತ್ರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ನನಗೆ ಈ ಬಗ್ಗೆ ಸರಿಯಾಗಿ ತಿಳಿದಿಲ್ಲ. ಹಿಂದಿನ ಬಾಗಿಲಿಗೆ ಬಟನ್ ಇರುತ್ತದೆ. ಅದನ್ನು ಒತ್ತಿ ಅವ್ರು ಕೆಳಗೆ ಇಳಿದಿದ್ದಾರೆ. ನನ್ನ ಬಳಿ ಯಾವುದೇ ಕೋಲು ಕೂಡ ಇಲ್ಲ. ಪ್ರತಿ ದಿನ ತನ್ನ ರೂಟ್ ಬದಲಾಗುವ ಕಾರಣ ನಾನು ಏನೂ ಮಾಡಲು ಸಾಧ್ಯವಿಲ್ಲವೆಂದು ಮಾರ್ಷಲ್ ಹೇಳಿದ್ದಾನೆ.