ಕರ್ನಾಟಕಲ್ಲಿ ದಿನೇ ದಿನೇ ಮುಚ್ಚುತ್ತಿರುವ ಚಿತ್ರ ಮಂದಿರಗಳು: ಗಾಂಧಿ ನಗರದಲ್ಲಿ ಇಂದು ಚಿತ್ರ ಪ್ರದರ್ಶಕರ ಸಂಘದಿಂದ ಮಹತ್ವದ ಸಭೆ.
ಕರ್ನಾಟಕ ಚಿತ್ರ ಪ್ರದಶರ್ಕರ ಸಂಘದ ಸಭೆ ಇಂದು ಗಾಂಧಿನಗರದ ಚೇತನ್ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ನಡೆಯಿತು.ಕರ್ನಾಟಕ ರಾಜ್ಯದಲ್ಲಿ ಚಿತ್ರಮಂದಿರಗಳು ಕಡಿಮೆಯಾಗುತ್ತಿರುವ ಬಗ್ಗೆ ಹಾಗೂ ಚಿತ್ರಮಂದಿರಗಳನ್ನು ಮುಚ್ಚುವ ಬದಲು ವ್ಯಾಪಾರ ಪದ್ಧತಿಯನ್ನು ಬದಲಾಯಿಸಿ ಮುಂದುವರೆಯುವುದು ಸಾಧ್ಯವೇ ಎಂಬುದರ ಬಗ್ಗೆ ಚರ್ಚಿಸಲು ಈ ಸಭೆಯನ್ನು ಅಯೋಜಿಸಲಾಗಿತ್ತು.
ಕರ್ನಾಟಕದಲ್ಲಿ ಮೊದಲು ಚಿತ್ರ ಮಂದಿರಗಳ 1200ಕ್ಕು ಹೆಚ್ಚು ಚಿತ್ರ ಮಂದಿರಗಳು ಇದ್ದವು ,ಆದರೆ ಈಗ ಆ ಸಂಖ್ಯೆ 575 ಕ್ಕೆ ಇಳಿಕೆಯಾಗಿದೆ.ಬದಲಾದ ಕಾಲಘಟ್ಟದಲ್ಲಿ ಚಿತ್ರರಂಗದ ವ್ಯವಹಾರದ ರೀತಿ ನೀತಿಗಳು ಬದಲಾಗುತ್ತಿವೆ. ಇನ್ನು ಸರ್ಕಾರದ ಹೊಸ ಯೋಜನೆಗಳು ಸಹ ಚಿತ್ರ ಪ್ರದರ್ಶಕರಿಗೆ ಭಾರಿ ಹೊಡೆತ ನೀಡಿದ್ದು ,ಚಿತ್ರ ಪ್ರದರ್ಶಕರ ಆದಾಯ ಗಣನೀಯವಾಗಿ ಕಡಿಮೆಯಾಗಿದೆ.
ಇನ್ನು ಎಲ್ಲಾ ಸಮಸ್ಯೆಗಳ ಕುರಿತು ಇಂದು ಕರೆದಿದ್ದ ಸಭೆಯಲ್ಲಿ ಚರ್ಚೆ ನಡೆಸಲಾಯಿತು.ಸಭೆ ಬಳಿಕ ನಂತರ ಅಲ್ಮಾ ನ್ಯೂಸ್ನೋದಿಗೆ ಮಾತನಾಡಿದ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷರಾದ 'ಕೆ.ವಿ . ಚಂದ್ರಶೇಖರ'ರವರು ಮಾತನಾಡಿ ಇಂದು ವ್ಯವಹಾರದ ಮಾದರಿ ಬದಲಾಗಿದೆ. ಹಾಗೂ ಸರ್ಕಾರದ ಹೊಸ ಯೋಜನೆಗಳು ಸಹ ಚಿತ್ರ ಮಂದಿರದ ಮಾಲೀಕರಿಗೆ ಸಾಕಷ್ಟು ಸಮಸ್ಯೆ ಉಂಟುಮಾಡಿವೆ.ನಮ್ಮ ಆಧಾಯ ಬೇರೆಯವರ ಪಾಲಾಗುತ್ತಿದೆ .ಈ ಎಲ್ಲ ಅಂಶಗಳಿಂದಾಗಿ ಚಿತ್ರ ಪ್ರದರ್ಶಕರು ತಮ್ಮ ಅಸ್ತಿತ್ವಕಾಗಿ ಪರದಾಡುವಂತಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಸಂಘದ ಮೂಲಕ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಇನ್ನು ಇವತ್ತಿನ ಸಭೆಯಲ್ಲಿ ಪ್ರದರ್ಷಕರ ಸಂಘದ ಕಾರ್ಯದರ್ಶಿಗಳಾದ ಆರ್.ಸುಂದರ್ ರಾಜು ಮತ್ತು ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಿ.ಆರ್ .ಜೈ ರಾಜು ಮತ್ತು ಟಿ .ವಸಂತ್ ಕುಮಾರ್ , ಅಣ್ಣಯ್ಯ ರೆಡ್ಡಿ ,
ಕೆ ವೆಂಕಟರಮಣ ಬಾಬ್ಜಿ ಹಾಗೂ ಕೆ ಜೆ ರುದ್ರಪ್ಪ ಉಪಸ್ಥಿತರಿದ್ದರು.