ಭಾರತ ದೇಶ ಹಿಂದೂ ರಾಷ್ಟ್ರವೇ ಮಾಜಿ ಸಿಎಂ ಹಚ್ ಡಿ ಕುಮಾರಸ್ವಾಮಿ...!!!!!

ಸದಾ ಒಂದಲ್ಲಾ ಒಂದು ಹೇಳಿಕೆ ಇಂದ ಸುದ್ದಿಯಲ್ಲಿ ಇರುವ ಮಾಜಿ ಮುಖ್ಯಮಂತ್ರಿ ಹಚ್ ಡಿ. ಕುಮಾರಸ್ವಾಮಿ ಈಗ ಬಿಜೆಪಿ ಪಕ್ಷದ ನಿಲುವಿನ ವಿರುಧ್ಧ ಹೇಳಿಕೆ ನೀಡಿದ್ದಾರೆ.

ಫೆ.27 ರಂದು ಮಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ 
''ಭಾರತ ದೇಶ  ಹಿಂದೂ ರಾಷ್ಟ್ರವೇ'' ಹೊಸದಾಗಿ ಬಿಜೆಪಿಯವರೇನು ಮಾಡಬೇಕಿಲ್ಲ ಎಂದು ಹೇಳಿದ್ದಾರೆ.

ಈ ವೇಳೆ ದೆಹಲಿಯಲ್ಲಿ ನಡೆಯುತ್ತಿರುವ ಗಲಭೆ ಹಾಗೂ ಹಿಂಸಾಚಾರ ವಿಚಾರ ಪ್ರಸ್ತಾಪಿಸಿದ ಅವರು . ದೆಹಲಿ ಗಲಭೆ ಉಂಟುಮಾಡಲು ಮುಖ್ಯಕಾರಣ ದೆಹಲಿಯ ಬಿಜೆಪಿ ನಾಯಕರೆ.
ಒಂದೆಡೆ ಟೆಂಪ್ ಅವರನ್ನು ಕರೆಸಿ ಗುಜರಾತ್ ರಸ್ತೆಯಲ್ಲಿ ಮೆರವಣಿಗೆ ಮಾಡಿಸುತ್ತಾರೆ ಇನ್ನೊಂದೆಡೆ ಈ ರೀತಿ ಹಿಂಸಾಚಾರ ಮಾಡಿಸುತ್ತಾರೆ ಎಂದು ಗುಡುಗಿದರು .
ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಕಾಲಕ್ರಮೇಣ ದೇಶದ ಜನರು ಅರ್ಥಮಾಡಿಕೊಳ್ಳುತ್ತಾರೆ ಇವರ ನಿಲುವು ಹೇಗೆ ಎಂದು.