ಲವ್ ಜಿಹಾದ್ ಹೆಸರಿನಲ್ಲಿ ಅಮಾಯಕ ಯುವತಿಯರ ಮಾರಾಟ:ಶೋಭಾ ಕರಂದ್ಲಾಜೆ

 “ಲವ್‌ ಜೆಹಾದ್‌’ ಹೆಸರಿನಲ್ಲಿ ವಿದೇಶಗಳಿಗೆ ಯುವತಿಯರ ಮಾರಾಟ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಕರ್ನಾಟಕ ಪತ್ರಕರ್ತೆಯರ ಸಂಘ ಆಯೋಜಿಸಿದ್ದ “ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ’ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಹೆಣ್ಣು ಮಕ್ಕಳನ್ನು ಹೈದರಾಬಾದ್‌, ಮುಂಬಯಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ. ಮೈಸೂರು ಭಾಗದ ಗುಂಡ್ಲುಪೇಟೆ, ಎಚ್‌.ಡಿ.ಕೋಟೆ ಭಾಗದ ಮಕ್ಕಳು ನಾಪತ್ತೆ ಆಗುತ್ತಲೇ ಇದ್ದು ಇದರ ಹಿಂದಿರುವ ಶಕ್ತಿಗಳನ್ನು ಮಟ್ಟಹಾಕಬೇಕಾಗಿದೆ ಎಂದು ಹೇಳಿದರು.

ದೇವದಾಸಿ ಪದ್ಧತಿ ಬಗೆಗಿನ ಕಾನೂನು ಮತ್ತಷ್ಟು ಗಟ್ಟಿಯಾಗಬೇಕಾಗಿದೆ.
ಹೋದ ತತ್‌ಕ್ಷಣ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ಆ ಹಿನ್ನೆಲೆಯಲ್ಲಿಯೇ ಹೈದರಾಬಾದ್‌ ಘಟನೆಯ ಅತ್ಯಾಚಾರಿಗಳನ್ನು ಎನ್‌ಕೌಂಟರ್‌ ಆದಾಗ ಹೆಣ್ಣು ಮಕ್ಕಳು ಸಂಭ್ರಮಿಸಿದ್ದರು ಎಂದು ತಿಳಿಸಿದರು.