ಕೊರೊನಾ ನಿಯಂತ್ರಣ ಹೋರಾಟಕ್ಕೆ ಅಕ್ಷಯ ಕುಮಾರ್ ನೀಡಿದ್ರು 25 ಕೋಟಿ ನೆರವು : ರತನ್ ಟಾಟಾ 500 ಕೋಟಿ ನೆರವು.
ಮುಂಬೈ : ಇಡಿ ದೇಶವೇ ಕೊರೊನಾ ಎಂಬ ಮಹಾಮಾರಿಯ ವಿರುದ್ಧ ಹೊರಡುತ್ತಿದೆ. ಇನ್ನು ದೇಶ ಕಷ್ಟದ ಸಮಯದಲ್ಲಿ ಸದಾ ಸ್ಪಂದಿಸುವ ಟಾಟಾ ಗ್ರೂಪ್ ಮುಖ್ಯಸ್ಥ ರತನ ಟಾಟಾ ಹಾಗೂ ಬಾಲಿವುಡ್ ಸ್ಟಾರ್ ಅಕ್ಷಯ ಕುಮಾರ್ ಕೊರೊನಾ ನಿಯಂತ್ರಣಕ್ಕಾಗಿ ದೊಡ್ಡ ಮೊತ್ತದ ನೆರವು ಘೋಷಿಸಿದ್ದಾರೆ.
ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 500 ಕೋಟಿ ನೆರವು ನೀಡಿರುವ ರತನ್ ಟಾಟಾ " ದೇಶಕ್ಕೆ ಅಗತ್ಯ ಬಿದ್ದಾಗಲೆಲ್ಲಾ ಟಾಟಾ ಗ್ರೂಪ್ ನೆರವಿಗೆ ಧಾವುಸಿದೆ.ಆದರೆ ಈಗ ಈ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದು ಟ್ವಿಟ್ ಮಾಡಿದ್ದಾರೆ.
ಬಾಲಿವುಡ್ ಸ್ಟಾರ್ ಅಕ್ಷಯ ಕುಮಾರ ಸಹ 25 ಕೋಟಿ ನೆರವನ್ನು ಕೊರೊನಾ ನಿಯಂತ್ರಣಕ್ಕಾಗಿ ನೀಡಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅಕ್ಷಯ್ ಕುಮಾರ್ " ನನ್ನ ಉಳಿತಾಯದಿಂದ 25 ಕೋಟಿ ರೂಪಾಯಿಯನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಈಗ ಎಲ್ಲಕ್ಕಿಂತ ಮುಖ್ಯ ಜನರ ಜೀವ ಉಳಿಸುವುದು." ಎಂದು ಹೇಳಿದ್ದಾರೆ.