ಚೀನಾದ ವಿರುಧ್ಧದ ಜಾಗತಿಕ ಹೋರಾಟಕ್ಕೆ ಭಾರತ ನಾಯಕತ್ವ ವಹಿಸಬೇಕಿದೆ.....

ಇಡಿ ವಿಶ್ವವನ್ನೇ ಬಾಧಿಸುತ್ತಿರುವ,ಮನುಕುಲವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ನ್ನು ಜಗತ್ತಿಗೆ ರಫ್ತು ಮಾಡಿರುವ ಚೀನಿ ಕಮ್ಯುನಿಸ್ಟ್ ಸರ್ಕಾರ ಕ್ಕೆ ಪಾಠ ಕಲಿಸಲು ಜಗತ್ತಿನ ಹಲವು ಬಲಾಢ್ಯ ರಾಷ್ಟ್ರಗಳು ಒಂದಾಗುತ್ತಿವೆ. ವೈರಸ್ ಹುಟ್ಟಿನ ಕುರಿತು ಸ್ವತಂತ್ರ ತನಿಖೆಗೆ ಆಗ್ರಹಿಸುತ್ತೀವೆ. ಕೊರೊನಾ ವೈರಸ್ ನಿಂದ ಉಂಟಾಗಿರುವ ನಷ್ಟವನ್ನು ತುಂಬಿಕೊಡುವಂತೆಯು ಡ್ರ್ಯಾಗನ್ ರಾಷ್ಟ್ರವನ್ನು ಒತ್ತಾಯಿಸಲಾಗುತ್ತಿದೆ. ತನ್ನ ವಿರುದ್ಧ ಜಗತ್ತಿನ ರಾಷ್ಟ್ರಗಳು ಒಂದಾಗುತ್ತಿರುವುದನ್ನು ಕಂಡು ಚೀನಾ ಸರ್ಕಾರ ಕಂಗೆಟ್ಟು ಹೋಗಿದೆ. ಈಗ ಚೀನಾ ತನ್ನ ಒಂದೊಂದೇ ಭಯಾನಕ ಮುಖವನ್ನು ಜಗತ್ತಿಗೆ ಪರಿಚಯಿಸುತ್ತಿದೆ.

ಕೊರೊನಾ ಹೊಡೆತಕ್ಕೆ ಅತಿ ಹೆಚ್ಚು ಬಾಧಿತ ದೇಶ ಅಂದ್ರೆ ಅದು ಅಮೆರಿಕಾ. ಯಾವಾಗ ಅಮೆರಿಕದಲ್ಲಿ ಕೊರೊನಾ ಆರ್ಭಟ ಹೆಚ್ಚಾಯಿತೊ, ಚೀನಾ ಮೇಲೆ  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಗಿಬಿದ್ದರು.ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದೇ ಡೊನಾಲ್ಡ್ ಟ್ರಂಪ್ ಸಂಬೋಧಿಸಿದರು. ಕೊರೊನ ವೈರಸ್ ಹುಟ್ಟಿಕೊಂಡಿದ್ದು ವುಹಾನ್ ಆಹಾರ ಮಾರುಕಟ್ಟೆಯಲ್ಲಿ ಅಲ್ಲಾ ಬದಲಿಗೆ ವುಹಾನ್ ನ ಪ್ರಯೋಗಾಲಯದಲ್ಲಿ ಎಂದು ಜಗತ್ತಿಗೆ ಸಾರಿದರು. ಡೊನಾಲ್ಡ್ ಟ್ರಂಪ್ ಗೆ ಸದ್ಯಕ್ಕೆ ಚೀನಾ ಮೇಲೆ ಅದ್ಯಾವ ಮಟ್ಟಿನ ಸಿಟ್ಟಿದೆ ಎಂದರೆ ಇತ್ತೀಚಿಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಬಹಿರಂಗವಾಗಿಯೇ ಚೀನಾ ಮೂಲದ ಪತ್ರಕರ್ತೇ  ಮೇಲೆ ಹರಿಹಾಯ್ದರು. ಅಷ್ಟೇ ಅಲ್ಲದೇ ಚೀನಾ ತನ್ನ ಈ ಕೃತ್ಯಕ್ಕೆ ತಕ್ಕ ಬೆಲೆ ತೆರಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಚೀನಾ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಕಾರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ವಾರ್ಷಿಕ ಅನುದಾನವನ್ನು ಡೊನಾಲ್ಡ್ ಟ್ರಂಪ್ ತಡೆಹಿಡಿದಿದ್ದಾರೆ.

ಬಹುಶ ಡೊನಾಲ್ಡ್ ಟ್ರಂಪ್ ಒಬ್ಬರೇ ತನ್ನ ವಿರುದ್ಧ ಮಾತನಾಡಿದ್ದರೆ ಚೀನಾ ಹೆಚ್ಚು ತಲೆ ಕೆಡಿಸಿಕೋಳ್ಳುತ್ತೀರಲಿಲ್ಲ..ಆದರೆ ಅಮೆರಿಕಾದ ದನಿಗೆ  ಆಸ್ಟ್ರೇಲಿಯಾ ಜೊತೆಯಾಯಿತು. ಕೊರೊನಾ ವೈರಸ್ ನ ಹುಟ್ಟು ಹಾಗೂ ಅದು ಜಗತ್ತಿಗೆ ಹೇಗೆ ಹರಡಿತು ಎಂಬುದರ ಕುರಿತು ಸ್ವತಂತ್ರ ತನಿಖೆಗೆ  ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಆಗ್ರಹಿಸಿದರು...ಇದರಿಂದ ಆಕ್ರೋಶಗೊಂಡ ಕಮ್ಯುನಿಸ್ಟ್ ರಾಷ್ಟ್ರ ಆಸ್ಟ್ರೇಲಿಯಾ ಗೆ ಬೆದರಿಕೆ ಹಾಕಲು ಶುರುಮಾಡಿದೆ. ಒಂದು ವೇಳೆ ತನ್ನ ಹೇಳಿಕೆ ಹಿಂಪಡೆಯದಿದ್ದರೆ ಆಸ್ಟ್ರೇಲಿಯಾ ಜೊತೆಗಿನ ಎಲ್ಲಾ ವ್ಯಾಪಾರವನ್ನು ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದೆ.

ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ವಾಣಿಜ್ಯ ಸಮರವನ್ನು ಆರಂಭಿಸಿದೆ. ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಆಸ್ಟ್ರೇಲಿಯಾ ಮಾತ್ರ ಅಂತರಾಷ್ಟೀಯ ತನಿಖೆಗೆ ಬಿಗಿಪಟ್ಟು ಹಿಡಿದಿದೆ.

 ಇನ್ನುಜಗತ್ತಿನ ಹಲವು ರಾಷ್ಟ್ರಗಳಂತೆ ಭಾರತ ಕೂಡ ಕೊರೊನಾ ವೈರಸ್ ಸಂತ್ರಸ್ತ ರಾಷ್ಟ್ರ...ಒಂದು ಲಕ್ಷಕ್ಕೂ ಹೆಚ್ಚು ಜನ ಸೊಂಕಿತರಾಗಿದ್ದಾರೆ ಹಾಗೂ ಮೂರುವರೆ ಸಾವಿರಕ್ಕೂ ಹೆಚ್ಚಿನ ಜನ ಪ್ರಾಣಕಳೆದುಕೊಂಡಿದ್ದಾರೆ. ಆರ್ಥಿಕತೆ ನೆಲಕಚ್ಚಿದೆ.ಉದ್ಯೋಗ ನಷ್ಟವಾಗಿದೆ. ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿರುವ ಕೆಂಪು ರಾಷ್ಟ್ರದ ವಿರುದ್ಧ ಜಗತ್ತಿನ ರಾಷ್ಟ್ರಗಳು ಒಂದಾಗುತ್ತಿದ್ದು ಭಾರತ ಸಹ ಈ ಹೋರಾಟಕ್ಕೆ ಕೈಜೋಡಿಸಬೇಕು.

ಸಾಧ್ಯವಾದರೆ ಈ ಜಾಗತಿಕ ಹೋರಾಟದ ನಾಯಕತ್ವ ವಹಿಸಬೇಕು. ಚೀನಾ ವಿರುದ್ಧ ಭಾರತ ದನಿಯೆತ್ತಬೇಕು ಎಂದು ಹೇಳಲು ಕೊರೊನಾ ವೈರಸ್ ಒಂದೇ ಕಾರಣವಲ್ಲ. ಈ ಮೊದಲು ಚೀನಾ  ಭಾರತಕ್ಕೆ ಮಾಡಿದ ಅನ್ಯಾಯಗಳು ಒಂದೆರಡಲ್ಲ..ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿನ ಭಾರತದ ಖಾಯಂ ಸದಸ್ಯತ್ವದ ಬೇಡಿಕೆಯನ್ನು ತಡೆಹಿಡಿದಿರುವುದು ಇದೇ ಕ್ಸಿ ಜಿನ್ ಪಿಂಗ್ ಸರ್ಕಾರ.
ಜೊತೆಗೆ ಪರಮಾಣು ಪೂರೈಕೆ ರಾಷ್ಟ್ರಗಳ ಒಕ್ಕುಟಕ್ಕೆ ಸೇರುವ ಭಾರತದ ಕನಸನ್ನು ಇದೇ ಚೀನಾ ದೇಶ ನನಸಾಗದಂತೆ ನೋಡಿಕೊಂಡಿದೆ. ಜೊತೆಗೆ ಪಾಕಿಸ್ತಾನಕ್ಕೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ಸಹಾಯ ಒದಗಿಸುವ ಮೂಲಕ ಭಾರತದ ವಿರುದ್ಧ ಪಾಕಿಸ್ತಾನವನ್ನು ಎತ್ತುಕಟ್ಟುತ್ತಿದೆ.ಚೀನಾದ ಬೆಂಬಲ ಇರುವುದಕ್ಕೆ ಕೊರೊನಾ ಸಂಕಷ್ಟದ ಸಮಯದಲ್ಲೂ ಪಾಕಿಸ್ತಾನ ಗಡಿಯಲ್ಲಿ ತನ್ನ ಪುಂಡಾಟ ಮುಂದುವರಿಸಿದೆ.ಗಡಿ ವಿಚಾರದಲ್ಲಿ ನೇಪಾಳ ಕ್ಯಾತೆ ತೆಗೆದಿರುವುದರ ಹಿಂದೆಯೂ ಚೀನಾ ಕೈವಾಡವಿದೆ. ಭಾರತಕ್ಕೆ ಇಷ್ಟೇಲ್ಲಾ ಕಾಟ ಕೊಡುತ್ತಿರುವ ಕುಟಿಲಬುದ್ಧಿಯ ಚೀನಾಗೆ ಪಾಠ ಕಲಿಸಲು ಇದು ಸರಿಯಾದ ಸಮಯ.. ಭಾರತ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು.