ತಾವರಗೇರಾದಲ್ಲಿ ಸರ್ಕಾರಿ ಶಾಲೆಯ ನೂತನ ಕಟ್ಟಡಗಳ ಉದ್ಘಾಟನೆ.....
ತಾವರಗೇರಾ ಸಮೀಪದ ಹಿರೇತೆಮ್ಮಿನಾಳ ಗ್ರಾಮದ ಸರಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಯಿತು.ಮಕ್ಕಳ ಬೀಳ್ಕೊಡುಗೆ ರಚನೆ ಉತ್ತಮ ಚಟುವಟಿಕೆ ಮಕ್ಕಳಿಗೆ ಉತ್ತಮ ಮುಕ್ತವಾಗಿರಬೇಕು.ವೈಜ್ಞಾನಿಕ ವಿಸ್ಮಯ ಹಾಗೂ ರಹಸ್ಯ ಪ್ರಯೋಗಿಕವಾಗಿ ಉಪಯುಕ್ತವಾಗಿದೆ.ಮಕ್ಕಳಿಗೆ ಮುಂದಿನ ದಿನದಲ್ಲಿ ಕಲಿಕೆ ಜೀವನದಲ್ಲಿ ಮುಖ್ಯವಾಗಿದೆ ಹಾಗೂ ಕೃಷಿಮೇಳದಲ್ಲಿ ಪರಿಸರ ಸಮತೋಲನ ಮುಖ್ಯವಾಗಿ ಮಾನವನ ಪ್ರಮುಖವಾಗಿದೆ.ಒಳ್ಳೆಯ ಪರಿಸರ,ನೀರು,ಕಾಡು ಬೆಳೆಸುವುದು ಪ್ರಮುಖವಾಗಿದೆ ಹಾಗೂ ಅಂತರ್ಜಲ ಮಟ್ಟವನ್ನು ಕಾಪಾಡ ಮುಖ್ಯವಾಗಿದೆ ಸ್ವಲ್ಪ ನೀರಿನಲ್ಲಿ ತುಂತುರು ಹನಿ,ಹನಿ ನೀರಾವರಿ ಮುಖ್ಯವಾಗಿದೆ ಕೃಷಿ ಚಟುವಟಿಕೆಗೆ ಪ್ರಮುಖವಾಗಿದೆ ಈ ದಿನಮಾನದಲ್ಲಿ ಶಿಕ್ಷಣಕ್ಕೆ ಮುಖ್ಯವಾಗಿದೆ ಒಳ್ಳೆಯ ಶಿಕ್ಷಣಕ್ಕೆ ಗ್ರಾಮ ಹಾಗೂ ನಗರಕ್ಕೆ ಪ್ರಾಮುಖ್ಯತೆ ಕೊಡಬೇಕಾಗಿದೆ ಇದರಲ್ಲಿ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರ ಚಟುವಟಿಕೆ ಪ್ರಮುಖವಾಗಿದೆ.ಸ್ಮಾರ್ಟ್ ಕ್ಲಾಸ್ ಲಿಂಗದಳ್ಳಿ,ಸಿದ್ದಾಪುರ ಹಾಗೂ 28ನೇ ತಾರೀಖಿಗೆ ಸಂಗನಾಳದಲ್ಲಿ ಸಿದ್ದಗೊಂಡಿದೆ ಎಂದು ಸಿಆರ್ ಸಿ ಶರಣಪ್ಪ ತುಮರಿಕೊಪ್ಪ ಹೇಳಿದರು.ವಿಜ್ಞಾನವಸ್ತುಪ್ರದರ್ಶನದಲ್ಲಿ ಶಾಖದ ವರ್ಗಾವಣೆ,ಬಿಸಿನೀರಲ್ಲಿ ಕಣಗಳು,ಚಲನೆ,ಒತ್ತಡದಿಂದ ರಭಸದ ನೀರು,ಆಯಸ್ಕಾಂತ,ಮಾನವನ ಮೂತ್ರ ಜನಕಾಂಗ,ಮಾನವನ ಜೀವನ ಕ್ರಿಯೆ,ಹೃದಯ,ರಕ್ತ,ಪರಿಚಲನೆ,ಪ್ರಾಣಿ ಜೀವಕೋಶ,ಘನ ದ್ರವ,ಅನಿಲ ವಸ್ತುಗಳಲ್ಲಿ ಅಣುಗಳ ಜೋಡಣೆ,ಪ್ರತ್ಯಾಮ್ಲಗಳ ಆಮ್ಲದ ಗುಣ,ಸ್ಟೆತೋಸ್ಕೋಪ್,ಸಾಂದ್ರತೆಗಳ ಎಲ್ಲ ವಿದ್ಯಾರ್ಥಿಗಳು ಮಾಹಿತಿಯನ್ನು ನೀಡಿದರು ಹಾಗೂ ಪವಾಡಗಳ ಬಗ್ಗೆ ಕಟ್ಟಿಗೆಯ ಮೇಲೆ ನೀರು ಹಾಕುವ ಮೂಲಕ ಬೆಂಕಿಯನ್ನು ಹಚ್ಚಲಾಯಿತು ಹಾಗೂ ಇತರ ಪವಾಡ ಬಗ್ಗೆ ಸಂತೋಷಮ್ಮ,ಮಹಾಂತಮ್ಮ ವಿದ್ಯಾರ್ಥಿಗಳು ಪವಾಡಗಳನ್ನು ತೋರಿಸಲಾಯಿತು.ಈ ಸಂದರ್ಭದಲ್ಲಿ ಉರ್ದು ಸಿಆರ್ ಸಿ ಹೆಚ್ ಉಸ್ತಾದ್,ಎಸ್ ಡಿಎಮ್ ಸಿ ಅಧ್ಯಕ್ಷ ರಾಮಣ್ಣ ಗಾಣಧಾಳ,ಪ್ರಭಾಕರ ಅವರಡ್ಡಿ,ಗವಿಸಿದ್ದಪ್ಪ ನಾಗಲೀಕರ್,ವೆಂಕಣ್ಣ ಶಿಕ್ಷಕರು,ಯಮನೂರಪ್ಪ ನಾಯಕ,ಛತ್ರಪ್ಪ ಕಂಬಳಿ, ಗುರುಪಾದಮ್ಮ ಭಂಡಾರಿ,ಸಂಗಪ್ಪ ಮಾದನಶೆಟ್ಟಿ,ಬಸನಗೌಡ್ರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಪ್ರಾರ್ಥನಾ ಗೀತೆ ಅಂಬಿಕ ಸಂಗಡಿಗರು,ಸ್ವಾಗತ ಹಾಗೂ ಪುಷ್ಪಾರ್ಚನೆಯನ್ನೂ ಉಮೇಶ್ ಎಸ್ ಸಹ ಶಿಕ್ಷಕರು,ಪ್ರಾಸ್ತಾವಿಕ ನುಡಿಗಳು ಬಸವರಾಜ್ ಅಂಗಡಿ,ವಂದನಾರ್ಪಣೆಯನ್ನು ಶ್ಯಾಮಣ್ಣ ಕಿಲಾರಹಟ್ಟಿ ಸಹಶಿಕ್ಷಕರು,ಶ್ವೇತ,ಚೈತ್ರ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು,ಹಳೇ ವಿದ್ಯಾರ್ಥಿಗಳು ಸುತ್ತಮುತ್ತಲಿನ ಶಾಲೆಯ ಶಿಕ್ಷಕರು ಊರಿನ ಹಿರಿಯರು ಉಪಸ್ಥಿತರಿದ್ದರು.
ವರದಿ ಶರಣಪ್ಪ ಕುಂಬಾರ ತಾವರಗೇರಾ