ಥೈರಾಯ್ಡ ಸಮಸ್ಯೆಗೆ ಇಲ್ಲಿದೆ ಮದ್ದು........

ಥೈರಾಯ್ಡ, ಅನೇಕ ಜನರನ್ನು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ. ಈ ರೋಗ ನಿಯಂತ್ರಣಕ್ಕೆ ಔಷದೋಪಚಾರಕ್ಕಿಂತ ಮುಂಜಾಗ್ರತೆಯೇ ಮನೆ ಮದ್ದು. ಅಲ್ಲದೇ ನಿಮ್ಮ ಜೀವನ ಕ್ರಮವೇ, ಥೈರಾಯ್ಡ್ ಸಮಸ್ಯೆ ನಿಯಂತ್ರಣಕ್ಕೆ ಸಿದ್ಧ ಔಷಧ. ಕಬ್ಬಿಣದ ಅಂಶವಿರುವ ಆಹಾರ, ಸಲೆನಿಯೋಮ್, ಆಯೋಡಿನ್ ನಿಂದಾಗುವ ಕೊರತೆಯಿಂದಾಗಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆ ನಿಯಂತ್ರಣಕ್ಕೆ ಈ ಕೆಳಗಿನ ಸೂತ್ರಗಳನ್ನು ಅನುಸರಿಸಿ ಥೈರಾಯ್ಡ್ ಸಮಸ್ಯೆಗೆ ಗುಡ್ ಬೈ ಹೇಳಬಹುದಾಗಿದೆ.


ಕೆಲ ಸೂತ್ರಗಳನ್ನು ಚಾಚು ತಪ್ಪದೇ ಅನುಸರಿಸುವುದ್ರಿಂದ.. ಥೈರಾಯ್ಡ್ ಸಮಸ್ಯೆಯನ್ನು ಹತೋಟಿಗೆ ತರುವ ಮೂಲಕ, ಸಮಸ್ಯೆಗೆ ಗುಡ್ ಬೈ ಹೇಳಬಹುದಾಗಿದೆ. ಅದರಲ್ಲೂ ಥೈರಾಯ್ಡ್ ಸಮಸ್ಯೆಗೆ ಅತ್ಯುತ್ತಮ ಆಹಾರ ಎನ್ನುವಂತೆ ಬ್ರೆಜಿಲ್ ನಟ್ಸ್, ಹೇಝಲ್ ನಟ್ಸ್, ಮೊಸರು, ಮೊಟ್ಟೆ, ಮೀನು ಹಾಗೂ ಲಿವರ್ ನಿಯಮಿತ ಸೇವನೆಯ ಮೂಲಕ ಹತೋಟಿಗೆ ತರಬಹುದು.


ಇನ್ನೂ ಥೈರಾಯ್ಡ್ ಸಮಸ್ಯೆಗೆ ಪೈನ್ ನಟ್ಸ್, ಕಡಲೆ, ಸ್ಟ್ರಾಬೆರಿ, ಕ್ಯಾಬೇಜ್, ಬ್ರೊಕೋಲಿ, ಹೂ ಕೋಸು, ಸೋಯಾ ಒಳ್ಳೆಯ ಆಹಾರಗಳಲ್ಲ. ಹೀಗಾಗಿ ಇವುಗಳ ನಿಯಂತ್ರಣ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಥೈರಾಯ್ಡ್ ಸಮಸ್ಯೆ ನಿಯಂತ್ರಣಕ್ಕೆ ಸಾಧ್ಯವಾಗುವುದಿಲ್ಲ.


ಮಾನಸಿಕ ಒತ್ತಡವೇ ಥೈರಾಯ್ಡ್ ಸಮಸ್ಯೆಗೆ ಮುಖ್ಯ ಕಾರಣವೆಂಬುದಾಗಿ ಅನೇಕ ವೈದ್ಯರು ಹೇಳುತ್ತಿರೋದ್ರಿಂದ ಯೋಗ, ವ್ಯಾಯಾಮ, ಧ್ಯಾನ, ಈಜು, ಸೈಕ್ಲಿಂಗ್ ನಂತ ಅಭ್ಯಾಸಗಳನ್ನು ವೃಡಿಸಿಕೊಳ್ಳುವ ಮೂಲಕ, ಮಾನಸಿಕ ಒತ್ತಯವನ್ನು ನಿಯಂತ್ರಿಸಿಕೊಳ್ಳಬಹುದು. ಈ ಮೂಲಕ ಥೈರಾಯ್ಡ್ ಸಮಸ್ಯೆಯನ್ನು ನೀವೇ ಸ್ವ ನಿಯಂತ್ರಣದ ಮೂಲಕ ಹತೋಟಿಗೆ ತರಬಹುದು.