ಸಿ .ಎಂ .ಬಿ ಸ್ ಯಡಿಯೂರಪ್ಪ ಬಜೆಟ್ ನಲ್ಲಿ ಕೃಷಿಗೆ ಸಿಂಹಪಾಲು.....
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು 20-20 ರಾಜ್ಯದ ಬಜೆಟ್ ಮಂಡನೆ.
ಎಂದಿನಂತೆ ಪ್ರಮಾಣವಚನ ಸಮಯದಲ್ಲಿ ಧರಿಸಿದಂತಹ ''ಹಸಿರು ಶಾಲು ರೈತರ ಪರ ಸರ್ಕಾರ ಎಂಬ ಸಾಂಕೇತಿಕ ಸಂದೇಶ''
ಹಾಗಾದರೆ ಈ ಬಾರಿಯ ಬಜೆಟ್ನಲ್ಲಿ ರೈತರಿಗೆ ಎಷ್ಟು ಹಾಗೂ ರೈತ ಯೋಜನೆಗಳಿಗೆ ಎಷ್ಟೆಷ್ಟು??
ಈ ಕುರಿತಾಗಿ ಕೆಲ ಸಂಕ್ಷಿಪ್ತ ವಿವರಣೆಗಳು ಇಲ್ಲಿವೆ.
'ಹಸಿರು ರೈತರ ಉಸಿರು' ಎಂಬ ಸಾಂಕೇತಿಕವಾಗಿ ಶಾಲು ಧರಿಸುವ ಮೂಲಕ,ಈ ಸರ್ಕಾರ ರೈತರ ಪರ ಸದಾ ಇರುತ್ತದೆ . ಬಜೆಟ್ ಮಂಡಿಸಿದ ಯಡಿಯೂರಪ್ಪನವರು ರೈತರಿಗೆ ಹಲವು ಯೋಜನೆಗಳನ್ನು ನೀಡಿದ್ದಾರೆ.
* ಕಿಸಾನ್ ಸಮ್ಮಾನ್ ಯೋಜನೆಗೆ 2.600 ಕೋಟಿ ಹಣ ಮೀಸಲು.
* ರೈತ ಸಿರಿ ಯೋಜನೆ ಮೂಲಕ ಪ್ರತಿ ಹೆಕ್ಟೇರಿಗೆ 10ಸಾವಿರ ದಿಂದ 20ಸಾವಿರ ಪ್ರೋತ್ಸಾಹಧನ ನೀಡಲು ಚಿಂತನೆ.
* ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಅಡಿ 6000 ರಾಜ್ಯಸರ್ಕಾರದ 4000 ಹಣ ರೈತರ ಖಾತೆಗೆ.
* ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ವಾರ್ಷಿಕ 10000 ಜೊತೆಗೆ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್.
* ಪ್ರಕೃತಿ ವಿಕೋಪ ಹಾಗೂ ಹವಾಮಾನ ವೈಪರೀತ್ಯದಿಂದ ರೈತರಿಗಾಗುವ ನಷ್ಟ ಪರಿಹಾರಕ್ಕೆ 900 ಕೋಟಿ ವಿಮೆ.
* ಸಾವಯವ ಕೃಷಿ ಪ್ರೋತ್ಸಾಹ 200 ಕೋಟಿ ಅನುದಾನ.
* ರಾಜ್ಯದ್ಯಂತ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಗಳ ಸ್ಥಾಪನೆ
* ರೈತರ ಮನೆ ಬಾಗಿಲಿಗೆ ಕೀಟನಾಶಕ
* ಖಾಸಗಿಯವರೊಂದಿಗೆ ಸೇರಿ ಹತ್ತು ಸಾವಿರ ಮೆಟ್ರಿಕ್ ಟನ್ ಕೋಲ್ಡ್ ಸ್ಟೋರೇಜ್ ಸ್ಥಾಪನೆ .
* 'ಮಹಿಳಾ ಮೀನುಗಾರ ಸಮೀಕರಣ' ಅಡಿಯಲ್ಲಿ 1000 ಮಹಿಳಾ ಮೀನುಗಾರರು ದ್ವಿಚಕ್ರವಾಹನ ನೀಡಲು 5 ಕೋಟಿ ಮೀಸಲು
* ರಾಜ್ಯದ ಪ್ರತಿ ಗ್ರಾಮಗಳಲ್ಲೂ ಜಲಗ್ರಾಮ್ ಕ್ಯಾಲೆಂಡರ್ ಸ್ಪಾಪನೆ
* ರಾಜ್ಯದಲ್ಲಿ ಹೈನುರಾಸುಗಳಲ್ಲಿ ಶೇ.90ರಷ್ಟು ಹೆಣ್ಣುಕರುಗಳನ್ನ ಪಡೆಯಲು ಕೃತಕ ಗರ್ಭಧಾರಣೆಗೆ 2 ಕೋಟಿ ಮೀಸಲು