ಯುವರಾಜ ನಿಖಿಲ್ ಮದುವೆಗೆ ಭರ್ಜರಿ ಸಿದ್ಧತೆ....
ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡ ಮಾಜಿ ಸಚಿವ ಎಂ. ಕೃಷ್ಣಪ್ಪ ಅಣ್ಣನ ಮೊಮ್ಮಗಳು ರೇವತಿಯ ವಿವಾಹ ಇದೇ ಏಪ್ರಿಲ್ 17ರಂದು ನಡೆಯಲಿದೆ. ಅದ್ದೂರಿ ಮದುವೆಗೆ ವಿವಿಧ ಬಗೆಯ ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗಿದೆ. ವಿವಿಐಪಿ, ವಿಐಪಿ, ರಾಜಕಾರಣಿಗಳು,ಸಿನಿಮಾ ನಟ-ನಟಿಯರು ಸೇರಿದಂತೆ ಕಾರ್ಯಕರ್ತರಿಗೆ ಕೊಡಲು ಬಗೆ ಬಗೆಯ ಆಹ್ವಾನ ಪತ್ರಿಕೆಗಳು ತಯಾರು ಮಾಡಲಾಗಿದೆ. ಅಂದಾಜು 8 ಲಕ್ಷ ಆಹ್ವಾನ ಪತ್ರಿಕೆ ಮುದ್ರಿಸಲಾಗಿದ್ದು. ಅದನ್ನು ಹಂಚುವ ಪ್ರಕ್ರಿಯೆ ಕೂಡ ಆರಂಭವಾಗಿದೆ. ರಾಮನಗರದಲ್ಲಿ 70,000 ಕಾರ್ಯಕರ್ತರ ಮನೆಗಳು,68000 ಕಾರ್ಯಕರ್ತರ ಮನೆಗಳಿಗೆ ಮದುವೆ ಆಮಂತ್ರಣ ಪತ್ರಿಕೆ ತಲುಪಿಸುವ ಕೆಲಸವನ್ನು ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ತಂಡ ಆರಂಭಿಸಿದೆ. ಪತ್ರಿಕೆ ಜೊತೆಗೆ ಉಡುಗೊರೆಯಾಗಿ ಗಂಡಸರಿಗೆ ಪಂಚೆ, ಬಿಳಿ ಶರ್ಟ್, ಅರಿಶಿನ ಕುಂಕುಮ ಜೊತೆಗೆ ಸೀರೆಯನ್ನು ಮಹಿಳೆಯರಿಗೆ ನೀಡಲಾಗುತ್ತಿದೆ.