ಬಂಗಾಳದ ಜನತೆ ಬದಲಾವಣೆ ಬಯಸುತ್ತಿದ್ದಾರೆ: ಅಮಿತ ಶಾ
ಬೊಲಪುರ್: ಪಶ್ಚಿಮ ಬಂಗಾಳದ ಜನರು ಬದಲಾವಣೆ ಬಯಸುತ್ತಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಹೊಡೆದಾಟ, ಭ್ರಷ್ಟಚಾರ, ಕೊಲೆ, ಸುಲಿಗೆ ಹಾಗು ಬಾಂಗ್ಲಾದೇಶಿಯರ ಒಳ ನುಸುಳುವಿಕೆಯಂತಹ ತೊಂದರೆಗಳಿಂದ ಮುಕ್ತರಾಗಲು ಬಯಸುತ್ತಿದ್ದಾರೆ ಎಂದು ಗೃಹ ಮಂತ್ರಿ ಅಮಿತ್ ಶಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬೊಲಪುರನಲ್ಲಿ ನಡೆದ ರೋಡ ಶೋನಲ್ಲಿ ಮಾತನಾಡಿದ ಅಮಿತ ಶಾ, ಮಮತಾ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.. ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದ ಅತ್ಯಂತ ಶ್ರೇಷ್ಠ ವ್ಯಕ್ತಿ ರಬೀಂದ್ರನಾಥ ಠಾಗೋರರನ್ನು ಕಂಡಂತಹ ರಾಜ್ಯ ಪಶ್ಚಿಮ ಬಂಗಾಳ. ಬಿಜೆಪಿ ಅಧಿಕಾರಕ್ಕೆ ಬಂದರೆ ʼಸೊನಾರ್ ಬಂಗಾಳ ʼ(ಬೆಂಗಾಲ್ ಆಪ್ ಗೋಲ್ಡ) ಎಂದು ಕರೆಸಿಕೊಳ್ಳುತ್ತಿದ್ದ ಬಂಗಾಳದ ವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡುತ್ತೇವೆ ಎಂದು ಶಾ ಹೇಳಿದ್ದಾರೆ.
ನಾನು ಜೀವನದಲ್ಲಿ ಹಲವಾರು ರೋಡ್ ಶೋಗಳನ್ನು ಅಯೋಜಿಸಿ ಭಾಗವಹಿಸಿದ್ದೇನೆ. ಆದರೆ ಈ ತರಹದ ರೋಡ್ ಶೋ ಎಲ್ಲೂ ನೋಡಿಲ್ಲ. ಇಲ್ಲಿ ನೆರೆದಿರುವ ಜನಸಮೂಹ ನರೇಂದ್ರ ಮೋದಿಯವರ ಅಭಿವೃದ್ಧಿ ಪರ ಕಾರ್ಯಕ್ರಮಗಳ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂದು ಶಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವರದಿ: ಮಂಜುನಾಥ್ ನಾಯಕ್