ಚಲಿಸುತ್ತಿದ್ದ ರೆಲ್ವೇ ಅಡಿಯಲ್ಲಿ ಬೀಳುತ್ತಿದ್ದ ವ್ಯಕ್ತಿಯನ್ನು ಕಾಪಾಡಿದ ಆರ್ಪಿಎಫ್‌ನ ಮಹಿಳಾ ಕಾನ್ಸ್ಟೇಬಲ್…!
ಆರ್‌ಪಿಎಫ್ ನ ( ರೇಲ್ವೇ ಪ್ರೋಟೆಕ್ಶನ್ ಫೋರ್ಸ್) ಮಹಿಳಾ ಕಾನ್ಸ್ಟೇಬಲ್ ವಿಶಾಖಪಟ್ಟನಮ್ನ ರೆಲ್ವೇ ನಿಲ್ದಾಣದಲ್ಲಿ ಫೆಬ್ರವರಿ 8ನೇ ತಾರೀಖಿನಂದು ವ್ಯಕಿಯೊಬ್ಬನನ್ನು ಪ್ರಾಣಾಪಾಯದಿಂದ ಕಾಪಾಡಿರುವ ಘಟನೆ ನಡೆದಿದೆ. ರೆಲ್ವೇ ಮಂತ್ರಾಲಯವು ಈ ಘಟನೆಯ ವೀಡಿಯೋ ತುಣುಕನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Serving Humanity First:
— Ministry of Railways (@RailMinIndia) February 10, 2021
An alert RPF woman constable of "Meri Saheli" team at Visakhapatnam Railway station rescued a passenger falling under a moving train.
The episode was caught on the body-worn camera of RPF personnel. pic.twitter.com/05FJvP8Xju
ಚಲಿಸುತ್ತಿರುವ ರೆಲ್ವೇಯನ್ನು ಹತ್ತಲು ವ್ಯಕ್ತಿ ಪ್ರಯತ್ನಿಸುತ್ತಿದ್ದಾಗ ಜಾರಿ ಬಿದ್ದಿದ್ದಾನೆ. ಒಂದು ವೇಳೆ ಮಹಿಳಾ ಕಾನ್ಸ್ಟೇಬಲ್ ಬೇಗನೆ ಜಾಗರುಕಳಾಗದಿದ್ದಲ್ಲಿ ಪರಿಸ್ಥಿತಿ ಬೇರೆಯೆ ರೂಪ ಪಡೆದುಕೊಳ್ಳುತಿತ್ತು. ವ್ಯಕ್ತಿ ಜಾರಿದ ತಕ್ಷಣ ಸ್ಥಳಕ್ಕೇ ಹೋದ ಮಹಿಳಾ ಕಾನ್ಸ್ಟೇಬಲ್ ಇತರ ಪ್ರಯಾಣಿಕರ ಸಹಾಯದಿಂದ ವ್ಯಕ್ತಿಯನ್ನು ಮೆಲಕ್ಕೆಳೆದಿದ್ದಾರೆ. ಈಗ ಈ ಘಟನೆಯ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು ಜನರು ಮಹಿಳಾ ಕಾನ್ಸ್ಟೇಬಲ್ರ ಶ್ರಮವನ್ನು ಮೆಚ್ಚುತ್ತಿದ್ದಾರೆ.
ವರದಿ: ಮಂಜುನಾಥ್ ಅಜಿತ್