ಮನೆ ಮಾರಾಟಕ್ಕಿದೆ ಚಿತ್ರ 50ರ ಸಂಭ್ರಮ...

ಪ್ರತಿ  ಪ್ರೇಕ್ಷಕರೂ ಕೂಡಾ ಸಿನಿಮಾ ನೋಡೋ  ಉದ್ದೇಶ ಮನೋರಂಜನೆ. ಅದರಲ್ಲಿಯೂ ಕಾಮಿಡಿ ಸನ್ನಿವೇಶಗಳಿಗೆ ಮನಸೋಲದವರೇ ಇಲ್ಲ. ಹಾಗಿರುವಾಗ ಒಂದು ಚಿತ್ರವೇ ಕಾಮಿಡಿ ಮಯವಾಗಿದ್ದರೆ ಪ್ರೇಕ್ಷಕರು ಆಕರ್ಷಿತರಾಗದಿರಲು ಸಾಧ್ಯವೇ ಇಲ್ಲ. ಈ ಕಾರಣದಿಂದಲೇ  ನಿರೀಕ್ಷೆ ಮೂಡಿಸಿದ್ದ ‘ಮನೆ ಮಾರಾಟಕ್ಕಿದೆ’ ಚಿತ್ರವೀಗ 50 ದಿನ ಪೂರೈಸಿ ಹಿನ್ನೆಲೆಯಲ್ಲಿ ಇಂದು ಕಲಾವಿದರ ಸಂಘದಲ್ಲಿ  "ಮನೆ ಮಾರಾಟಕ್ಕಿದೆ" ಚಿತ್ರತಂಡ ಸಂಭ್ರಮಾಚರಣೆ ಮಾಡಿದೆ.  ಈ ಸಂಭ್ರಮಕ್ಕೆ  ನಾಯಕ ರಿಷಬ್ ಶೆಟ್ಟಿ , ಹಾಸ್ಯ ಕಲಾವಿದಾರದ ರವಿ ಶಂಕರ್ ಗೌಡ ,ನಟಿ  ಕಾರುಣ್ಯಾ ರಾಮ್, ಚಿಕ್ಕಣ್ಣ , ನಿರ್ದೇಶಕ ಮಂಜು ಸ್ವರಾಜ್  ಭಾಗವಹಿಸಿದ್ದರು , ಎಲ್ಲಾ ಕಲಾವಿದರಿಗೆ ಸನ್ಮಾನಿಸಲಾಯಿತು.  ನಿರ್ದೇಶಕ ಮಂಜು ಸ್ವರಾಜ್ ಮಾತಾಡಿ ಎಲ್ಲ ಕಲಾವಿದರಿಗೆ  ಶುಭಾ  ಹಾರೈಸಿದರು.

  ಈ ಚಿತ್ರದಲ್ಲಿ ಕಾಮಿಡಿ ಕಿಕ್ ಎಂಥಾದ್ದಿದೆಯೆಂದರೆ, ಅದು ಪ್ರೇಕ್ಷಿಕರಿಗೆ ಮಾತ್ರವಲ್ಲದೇ ಕಾಟ ಕೊಡಲು ಬಂದ ದೆವ್ವಗಳಿಗೂ ನಗೆಯ ಕಚಗುಳಿ ಇಡುವಂತಿದೆ ಇದೆ ಎಂದು ಹೇಳಿದರು.


ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಒಂದೆಡೆ ಸೇರಿದ್ದಾರೆಂದರೆ ಅಲ್ಲಿ ನಗುವಿನ ಒರತೆ ಹುಟ್ಟಿಕೊಳ್ಳೋದು ಗ್ಯಾರೆಂಟಿ ಎಂಬ ನಂಬಿಕೆ ಎಲ್ಲರಲ್ಲಿಯೂ ಇತ್ತು. ಅದನ್ನು ನಿಜವಾಗಿಸುವಂತೆಯೇ ನಿರ್ದೇಶಕರು ಪಾತ್ರಗಳನ್ನು ರೂಪಿಸಿದ್ದಾರೆ. ಮನೋರಂಜನೆಯೇ ಪ್ರಧಾನವಾಗಿರುವ ಕಥೆ, ಅದಕ್ಕೆ ಪೂಕವಾದ ಪಾತ್ರಗಳು ಮತ್ತು ಕ್ಷಣ ಕ್ಷಣವೂ ನಗೆಯುಕ್ಕಿಸುವಂತೆ ಪೋಣಿಸಿರುವ ಹಾಸ್ಯ ಸನ್ನಿವೇಶಗಳೊಂದಿಗೆ ಮಾರಾಟಕ್ಕಿರೋ ಮನೆ ತುಂಬಾ ನಗು ಹರಿಡಿಕೊಂಡಿದೆ.