ಅತಿಯಾದ ಟೊಮೆಟೊ ಸೇವನೆಯು ಆರೋಗ್ಯಕ್ಕೆ ಹಾನಿಕರ....

ಟೊಮೆಟೊವನ್ನು ನಾವು ನಮ್ಮ ದೈನಂದಿನ ಅಡುಗೆಯಲ್ಲಿ ತರಕಾರಿಯಂತೆ ಬಳಸುತ್ತೇವೆ. 
ಆದರೆ ಇದು ಈಗ ಕೇವಲ ತರಕಾರಿಯಾಗಿ ಉಳಿದಿಲ್ಲ. ಸೊಲ್ಯಾನಮ್ ಲೈಕೋಪರ್ಸಿಕಮ್ ಎಂಬ ವೈಜ್ಞಾನಿಕ ಹೆಸರಿನಲ್ಲಿ ಕರೆಯಲಾದ ಈ ಟೊಮೆಟೊ, ಶ್ರೇಷ್ಠ ಮಟ್ಟದ ಔಷಧಿಯಾಗಿ ತನ್ನ ಗುಣವನ್ನು ತೋರಿಸಿ ಕೊಟ್ಟಿದೆ. ಅದ್ದರಿಂದ ಇದನ್ನು ತರಕಾರಿಯಂತೆ ಅಷ್ಟೇ ಅಲ್ಲದೆ ತಿನ್ನುವ ಹಣ್ಣುಗಳ ಗುಂಪಿನಲ್ಲಿ ಸೇರಿಸಲಾಗಿದೆ.

ಈ ಟೊಮೆಟೊ ಹಣ್ಣು ಮೂಲತಹ ಪಾಶ್ಚಿಮಾತ್ಯ ದೇಶ ಅಮೇರಿಕಾಕ್ಕೆ ಸೇರಿದ್ದು. ಈ ಹಣ್ಣು ವಿಶಿಷ್ಟ ರೀತಿಯ ಬಳ್ಳಿಯ ಸಸ್ಯಯಲ್ಲಿ ಬೆಳೆಯುತ್ತದೆ. ಟೊಮೆಟೊನಲ್ಲಿ ಔಷಧಿಯ ಗುಣಗಳು ಇರುವುದೇನೋ ಸತ್ಯ ಆದರೆ ಇವನ್ನು ಅತಿಯಾಗಿ ಸೇವಿಸಿದಾಗ ನಮ್ಮ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತವೆ.

ಟೊಮೆಟೊವನ್ನು ಅತಿಯಾಗಿ ಸೇವಿಸಿದರೆ, ದೇಹಕ್ಕೆ ಅದರಿಂದಾಗುವ ಹಲವಾರು ರೀತಿಯ ಅಡ್ಡ ಪರಿಣಾಮಗಳು ಈ ಕೆಳಗಿನಂತಿವೆ :

1 ಹೆಚ್ಚು ಟೊಮೆಟೊ ತಿನ್ನುವುದರಿಂದ ಹೊಟ್ಟೆಯಲ್ಲಿ ಹೆಚ್ಚುವರಿ ಗ್ಯಾಸ್ಟ್ರಿಕ್ ಆಮ್ಲದ ಉತ್ಪಾದನೆಯಿಂದಾಗಿ ಹೃದಯ ಸುಡುವಿಕೆ ಅಥವಾ ಆಸಿಡ್ ರಿಫ್ಲಕ್ಸ್ ಉಂಟಾಗುತ್ತದೆ.

2 ಅಲರ್ಜಿಯನ್ನು ಹೊಂದಿರುವ ಜನರಿಗೆ ಟೊಮೆಟೋದ ಅತಿಯಾದ ಸೇವನೆಯಿಂದ ಬಾಯಿ, ನಾಲಿಗೆ ಮತ್ತು ಮುಖದ ಊತ, ಸೀನುವಿಕೆ, ಗಂಟಲು ಕೆರಳಿಕೆ ಮುಂತಾದ ತೀವ್ರ ರೋಗಲಕ್ಷಣಗಳಿಗೆ ಕಾರಣವಾಗಬಹುದು.

3 ರಕ್ತದೊತ್ತಡ ಸಮಸ್ಯೆ ಇರುವಂತಹವರು ಟೊಮೆಟೋವನ್ನು ಅತಿಯಾಗಿ ಸೇವಿಸಲೇಬಾರದು.

4 ಟೊಮೆಟೊ ಹಣ್ಣಿನಿಂದ ನೂರಾರು ರೀತಿಯಲ್ಲಿ ಅಡುಗೆ ತಯಾರಿಸಲಾಗುತ್ತಿದ್ದರೂ ಸಹ ಜಾಸ್ತಿ ಸೇವಿಸಬಾರದು.

5 ಮಹಿಳೆಯರು ಟೊಮೆಟೋವನ್ನು ಅತಿಯಾಗಿ ಸೇವನೆ ಮಾಡಿದರೆ ಗರ್ಭಧಾರಣೆ ಮತ್ತು ಪ್ರಸವದ ಬಳಿಕ ಸಮಸ್ಯೆಯಾಗಬಹುದು ಎಂದು ಅಧ್ಯಯನದ ವರದಿಯೊಂದು ಹೇಳಿದೆ.