ಇಟಾಲಿಯನ್ ನಲ್ಲಿ CAA ಟ್ರಾನ್ಸ್ ಲೇಟ್ ಮಾಡಿಕೊಡ್ತೀನಿ ಓದ್ಕೊಳ್ಳಿ : ಗಾಂಧಿ ಪರಿವಾರಕ್ಕೆ ಅಮಿತ್ ಶಾ ಟಾಂಗ್.
ಜೋಧಪುರ : ಪೌರತ್ವ ಕಾಯ್ದೆ ವಿಚಾರದಲ್ಲಿ ಬಿಜೆಪಿ ಒಂದು ಹೆಜ್ಜೆ ಕೂಡ ಹೆಜ್ಜೆ ಕೂಡ ಹಿಂದಿಡುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅಮಿತ್ ಶಾ ಸಚಿವ ಅಮಿತ್ ಶಾ ಅಮಿತ್ ಶಾ ಹೇಳಿದ್ದಾರೆ. ಪೌರತ್ವ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಜನರು ಬೀದಿಗಿಳಿದು ಪ್ರತಿಭಟಿಸಿದ್ದರು. ಕಾಂಗ್ರೆಸ್ ಸೇರಿದಂತೆ ಬಹುತೇಕ ಎಲ್ಲ ವಿರೋಧಪಕ್ಷಗಳು ಸಹ ಸಹ ಈ ಕಾಯ್ದೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದವು.
ಇನ್ನು ಪಶ್ಚಿಮ ಬಂಗಾಳ ಕೇರಳ ಸೇರಿ ಹಲವು ರಾಜ್ಯಗಳು ಕಾಯ್ದೆ ಜಾರಿ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದವು. ಈ ಎಲ್ಲ ಬೆಳವಣಿಗೆ ನಂತರ ಕೇಂದ್ರ ಸರ್ಕಾರ ಸರ್ಕಾರ ಬೆಳವಣಿಗೆ ನಂತರ ಕೇಂದ್ರ ಸರ್ಕಾರ ಸರ್ಕಾರ ಕಾಯ್ದೆ ಹಿಂತೆಗೆದುಕೊಳ್ಳಬಹುದು ಅಥವಾ ಕಾಯ್ದೆಯ ನಿಯಮಗಳನ್ನು ನಿಯಮಗಳನ್ನು ಸಡಿಲಿಸಬಹುದು ಎಂದು ವಿಪಕ್ಷಗಳು ಆಲೋಚಿಸಿದ್ದವು.
ಆದರೆ ಜೋದ್ಪುರ್ ನಲ್ಲಿ ಆಯೋಜಿಸಲಾಗಿದ್ದ CAA
ಜಾಗೃತಿ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ ಯಾವುದೇ ಕಾರಣಕ್ಕೂ ಕಾಯ್ದೆ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ವಿಪಕ್ಷಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾ, ಕಾಂಗ್ರೆಸ್ ವೋಟ್ ಬ್ಯಾಂಕ್ ಗೋಸ್ಕರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದೆ. ಇನ್ನೂ ಮುಂದುವರಿದು ರಾಹುಲ್ ಗಾಂಧಿಗೆ ಧೈರ್ಯವಿದ್ದರೆ CAA ಕುರಿತು ಚರ್ಚೆಗೆ ಬರಲಿ ಎಂದು ಹೇಳಿದರು. ಇಲ್ಲದಿದ್ದರೆ ನಾನೇ ಇಟಾಲಿಯನ್ ಭಾಷೆಯಲ್ಲಿ ಪೌರತ್ವ ಕಾಯ್ದೆಯನ್ನು ಟ್ರಾನ್ಸ್ಲೇಟ್ ಮಾಡಿಕೊಡುತ್ತೇನೆ ನಿಮಗೆ ಓದಲು ಸುಲಭವಾಗಬಹುದು ಎಂದು ಗಾಂಧಿ ಪರಿವಾರವನ್ನು ವ್ಯಂಗ್ಯವಾಗಿ ಟೀಕಿಸಿದರು.