ಮಸೀದಿಯಲ್ಲಿ ನಮಾಜ್ ಮಾಡಿದವರ ವಿರುದ್ಧ ಕ್ರಮ ಕೈಗೊಂಡ ಪೊಲೀಸರು ......
ಮಸೀದಿಯಲ್ಲಿ ನಮಾಜು ಮಾಡಿದವರ ವಿರುದ್ಧ ಕ್ರಮ ಕೈಗೊಂಡ ಪೊಲೀಸ್....
ಮುಂಬೈ ನ ಸುನ್ನಿ ಶಫಿ ಮಸೀದಿಯಲ್ಲಿ ನಮಾಜು ಮಾಡಲು ಅನುವು ಮಾಡಿಕೊಟ್ಟ ಟ್ರಸ್ಟಿಗಳ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ .ಕೊರೊನ ಸೋಂಕು ಜನರಿಂದ ಜನರಿಗೆ ತಗುಲುತ್ತಿದ್ದು , ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುವಂತೆ ಸರ್ಕಾರ ಜನರಲ್ಲಿ ಮನವಿ ಮಾಡುತ್ತಲೇ ಬಂದಿದೆ . ಈ ನಡುವೆ ಎಲ್ಲ ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು
ರದ್ದುಗೊಳಿಸಲಾಗಿದೆ .
ಆದರೆ ಸರ್ಕಾರದ ನಿಯಮ ಉಲ್ಲಂಘಿಸಿ ಪ್ರಾರ್ಥನೆಯಲ್ಲಿ ತೊಡಗಿದ್ದ 150 ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಜೇಜೆ ಪೊಲೀಸರು ಏಫ್ ಐ ಆರ್ ಹಾಕಿದ್ದಾರೆ .
ಸಿ ಆರ್ ಪಿ ಸಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು ಸಾರ್ವಜನಿಕರು ಗುಂಪಿನಲ್ಲಿರುವುದನ್ನು ನಿಷೇಧಿಸಲಾಗಿದೆ.ಆದರೆ, ಮಸೀದಿಯಲ್ಲಿ100 ರಿಂದ 150 ಮಂದಿ ನಮಾಜು ಮಾಡುತ್ತಿರುವ ಸುದ್ದಿ ತಿಳಿದು ಸೋಮವಾರ ಮಧ್ಯಾಹ್ನದ ವೇಳೆ ಎಸಿಪಿ ಅವಿನಾಶ್ ಧರ್ಮಾಧಿಕಾರಿ ಅವರ ತಂಡ ಮಸೀದಿಗೆ ತೆರಳಿ ಅಲ್ಲಿ ನೆರೆದಿದ್ದವರನ್ನು ತೆರವುಗೊಳಿಸಿದ್ದಾರೆ.
ಹಾಗೆಯೇ ಮಸೀದಿಯ ಟ್ರಸ್ಟಿಗಳಾದ ಮಜಲ್ ಬದ್ವಾನ್ ಕುನಿ ಸೇರಿದಂತೆ 150 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 188 , 269 ಅನ್ವಯ ಹಾಗೂ ಮಹಾರಾಷ್ಟ್ರ ಪೊಲೀಸ್ ಕಾಯ್ದೆ ಉಲ್ಲಂಘನೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಲಾಗುತ್ತಿದ್ದು, ಯಾವುದೇ ಬಂಧನವಾಗಿಲ್ಲ ಎಂದು ಎಸಿಪಿ ಅವಿನಾಶ್ ತಿಳಿಸಿದ್ದಾರೆ.