ಶಿವಲಿಂಗನಹಳ್ಳಿಯ ಶ್ರೀ ಗುರು ಕೊಟ್ಟೂರೇಶ್ವರ ತೇರು ಅತ್ಯಂತ ವಿಜೃಂಭಣೆಯಿಂದ ಜರಗಿತು

 ಬಳ್ಳಾರಿ : ಹರ.....ಹರ......ಮಹಾದೇವ ..ಶಿವಲಿಂಗನಹಳ್ಳಿಯ ಶ್ರೀ ಗುರು ಕೊಟ್ಟುರೇಶ್ವರ  ಮಹಾರಾಜ ಕೀ ಜೈಎನ್ನುತ್ತಾ ಸಾವಿರಾರು ಭಕ್ತರು ಕೊಟ್ಟುರೇಶ್ವರ ಮಹಾರಥೋತ್ಸವದ ರಥ ಎಳೆದರು. ಮಾರ್ಚ.1ರಿಂದ ಆರಂಭಗೊಂಡಿದ್ದ ಜಾತ್ರಾ ಮಹೋತ್ಸವ ಭಕ್ತಿಭಾವಗಳೊಂದಿಗೆ ಇಂದು ಮುಕ್ತಾಯಗೊಡಿತು.

ಸಾವಿರಾರು ಭಕ್ತರು ರಥವನ್ನು ರಥಬೀದಿಯಿಂದ ಕೊಟ್ಟುರೇಶ್ವರ ಪದಾಗಟ್ಟಿವರೆಗೂ ಎಳೆದು ಪುನಃ ಕೊಟ್ಟುರೇಶ್ವರ ದೇವಸ್ಥಾನಕ್ಕೆ ತಂದರು. ಬಾಳೆಹಣ್ಣು,ಉತ್ತತ್ತಿ ಎಸೆಯುವ ಮೂಲಕ ತಮ್ಮ ಇಷ್ಟಾರ್ಥಸಿದ್ಧ್ದಿಗೆ   ಬೇಡಿಕೊಂಡರು. ಸಾವಿರಾರು  ಭಕ್ತರು ಪಾದಯಾತ್ಮಾಡುವ ಮೂಲಕ ಕೊಟ್ಟರೆಶ್ವೇರಗೆ ಹರಿಕೇ ತಿರಿಸಿದರು. ತಾಲೂಕಿನ ಶಾಸಕ ಪಿ ಟಿ ಪರಮೇಶ್ವರ್ ನಾಯ್ಕ್ ಹಾಗೂ ಜಿಲ್ಲಾ ಪಂಚಾಯತ್  ಸದಸ್ಯ ಪಿ ವಿಜಯಕುಮಾರ್ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಶ್ರೀ ಕ್ಷೇತ್ರ ಶಿವಲಿಂಗನಹಳ್ಳಿ ಮಹಾರಥೋತ್ಸವ  ಮಂಗಳವಾರ ಸಾವಿರಾರು ಜನರು ಜಾತ್ರೆ ನಿಮಿತ್ತ ಹಾಕಲಾದ ಅಂಗಡಿಗಳಲ್ಲಿಖರೀದಿಯಲ್ಲಿತೊಡಗಿದ್ದರು. ರಥಬೀದಿ ಉದ್ದಗಲಕ್ಕೂ ಫಲಪುಷ್ಪ,ತೆಂಗಿನಕಾಯಿಗಳ ಅಂಗಡಿಗಳು, ವಿಭೂತಿ , ಕುಂಕುಮ, ದೇವರ ಚಿತ್ರಗಳಿರುವ ಹಾರಗಳು, ಫೋಟೋಗಳು, ಮಕ್ಕಳ ಆಟಿಕೆ ಸಾಮಗ್ರಿಗಳ ಅಂಗಡಿಗಳು, ಬಟ್ಟೆಯ ಅಂಗಡಿಗಳು, ಬೆತ್ತದ ಅಲಂಕಾರಿಕ ವಸ್ತುಗಳ ಅಂಗಡಿಗಳಲ್ಲಿಜನ ಜಂಗುಳಿ ಕಂಡು ಬಂದಿತು. ಈ ಅಂಗಡಿಗಳು ರಥಬೀದಿಯ ಮೆರುಗು ಹೆಚ್ಚಿದವು