ತಾವರಗೇರಾ ನಗರದಲ್ಲಿ ನಡೆದ ಬೆಳದಿಂಗಳ ಬುತ್ತಿ ಕಾರ್ಯಕ್ರಮ...

ತಾವರಗೇರಾ ನಗರದಲ್ಲಿ ವಿಶ್ವೇಶ್ವರಯ್ಯ ಪ.ಪೂ.ಕಾಲೇಜಿನ ಮೈದಾನದಲ್ಲಿ ನಾಲ್ಕನೇ ವರ್ಷದ ಬೆಳದಿಂಗಳ ಬುತ್ತಿ ಊಟದ ಕಾರ್ಯಕ್ರಮವು ಸಂಜೆ ೭.೩೦ ಗಂಟೆಗೆ ನಡೆಯಿತು.

 ಈ ಸಂಧರ್ಭದಲ್ಲಿ ವಿ.ಎಚ್.ಬಾವಿತಾಳ ಪ್ರಾಂಶುಪಾಲರು ಶ್ರೀ ಶಶಿಧರ ಪದವಿ ಪೂರ್ವ ಕಾಲೇಜು ತಾವರಗೇರಾ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಇಂದಿನ ಶಿಕ್ಷಣ ಪದ್ಧತಿ ಹಲವು ಬಗೆಯಲ್ಲಿ ಬದಲಾವಣೆ ಕಂಡಿದ್ದು, ವಿದ್ಯಾರ್ಥಿಗಳು ಕೂಡ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯಾಗಬೇಕು. ಆ ಮೂಲಕ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು.  

ಇನ್ನು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ  ಪ್ರಗತಿ ಪರ ಕೃಷಿಕರಾದ ವೀರಾಪುರ ಬಸವನಗೌಡ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ವಿದ್ಯಾರ್ಥಿಗಳು ಈ ದಿನಗಳಲ್ಲಿ ಮೊಬೈಲ್ ಗೆ ಜೊತುಬಿದ್ಧು ತಮ್ಮ ಭವಿಷ್ಯ  ಕಳಿದುಕೂಳುತಿದ್ಧು, ಮೊಬೈಲ್ ದೂರ ಇಟ್ಟರೆ ಮಾತ್ರ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಬೆಳದಿಂಗಳ ಬುತ್ತಿ ಊಟವು ವಿಶೇಷತೆಯಿಂದ ಕೂಡಿದ್ದು ವಿವಿಧ ತರಹದ ತರಕಾರಿ ಈರುಳ್ಳಿ,ಮೂಲಂಗಿ ವಿವಿಧ ಸೊಪ್ಪಿನ ದಿನಸಿ, ವಿವಿಧ ತರಹದ ಕಾಳು ಪಲ್ಯದ ದಿನಸಿಗಳು, ಚಪಾತಿ,ರೊಟ್ಟಿ,ಜಿಲಾಬಿ, ಮಿರ್ಜಿ,ಪುಡಿ,ಚಟ್ನಿ, ಉಪ್ಪಿನಕಾಯಿ, ಕಡುಬು, ಹಲವು ಬಗೆಯಿಂದ ಕೂಡಿದ್ದು ಬೆಳದಿಂಗಳ ಬುತ್ತಿ ಊಟವು ವಿಶೇಷತೆಯಿಂದ ಕೂಡಿದ್ದುಈ ಸಂದರ್ಭದಲ್ಲಿ ಚಂದ್ರಶೇಖರ ಸರನಾಡಗೌಡ, ಎಸ್.ಎಸ್.ಪೋರೆ ಪ್ರಾಂಶುಪಾಲರು, ಶಿವಕುಮಾರ್, ಬಸವರಾಜ ಓಲಿ, ಮಳಗಿ, ಸೋಮಲಿಂಗಪ್ಪ,ಕೊಟ್ರೇಶ ಮುಕಾರಿ,ಡಿ.ಆರ್.ಪಾಟೀಲ,ಸಂಗಪ್ಪ ಗುಡದೂರ, ಹಾಗೂ ಊರಿನ ಪ್ರಮುಖ ಗಣ್ಯರು, ಹಳೇಯ ವಿದ್ಯಾರ್ಥಿಗಳು ಹಾಗೂ ಸರ್ವ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ಲಕ್ಷಣಸಿಂಗ ವಿಶ್ವೇಶ್ವರಯ್ಯ ಪ.ಪೂ ಕಾಲೇಜು ಪ್ರಾಂಶುಪಾಲರು ನಡೆಸಿಕೊಟ್ಟರು.

ವರದಿ: ಶರಣಪ್ಪ ಕುಂಬಾರ ತಾವರಗೇರಾ.