ದಾವೋಸ್ ವಿಶ್ವ ಆರ್ಥಿಕ ಶೃಂಗ ಸಭೆ ಕರ್ನಾಟಕದ ಮುಖ್ಯ ಪಾತ್ರ1
ದಾವೋಸ್ ವಿಶ್ವ ಆರ್ಥಿಕ ಶೃಂಗ ಸಭೆ:
ಸಮಗ್ರ ಮತ್ತು ಸುಸ್ಥಿರ ಜಗತ್ತಿಗಾಗಿ ಹೂಡಿಕೆದಾರರು' ಎನ್ನುವ ಧ್ಯೇಯವಾಕ್ಯದೊಂದಿಗೆ ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ ಮಂಗಳವಾರದಿಂದ (ಜ.21) ನಾಲ್ಕು ದಿನಗಳ ಕಾಲ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ ನಡೆಯಲಿದೆ.
ಕರ್ನಾಟಕದ ಪ್ರಮುಖ ಪಾತ್ರ
ಸಚಿವ ಸಂಪುಟ ವಿಸ್ತರಣೆ ಆಲೋಚನೆ ,ಕೈ ಬಿಟ್ಟು ದಾವೋಸ್ ನ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಪಾಲ್ಗೊಲ್ಲಿರುವ ಬಿಎಸ್ ಯಡಿಯೂರಪ್ಪ .ಜನವರಿ 20ರಂದು ದಾವೋಸ್ ನಲ್ಲಿ ಕರ್ನಾಟಕ ಪೆವಿಲಿಯನ್‌ನ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮಾವೇಶದ ಮುಖ್ಯ ಸಮಾರಂಭದಲ್ಲಿ ಯಡಿಯೂರಪ್ಪ ಅವರು ಭಾಷಣ ಮಾಡಲಿದ್ದಾರೆ. 38 ಜಾಗತಿಕ ಮಟ್ಟದ ಕಂಪನಿಗಳ ಜತೆಯಲ್ಲಿ ಯಡಿಯೂರಪ್ಪ ಅವರು ಸಂವಾದ ನಡೆಸಲು ಸಭೆ ನಿಗದಿಯಾಗಿದೆ.
2020ರ ನ.3ರಿಂದ 5ರವರೆಗೆ ಬೆಂಗಳೂರಿನಲ್ಲಿ ನಡೆಯುವ ಇನ್‌ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಜಾಗತಿಕ ಕಂಪನಿಗಳ ಮುಖ್ಯಸ್ಥರಿಗೆ ಯಡಿಯೂರಪ್ಪ ಇದೇ ಸಂದರ್ಭ ಆಹ್ವಾನ ನೀಡಲಿದ್ದಾರೆ.