ಬೆಂಗಳೂರು-ತುಮಕೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ .....!!!
ಬೆಂಗಳೂರು:ತುಮಕೂರು ನಡುವೆ ರೈಲಿನಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ. ಉಭಯ ನಗರಗಳ ನಡುವಿನ ರೈಲು ಸಂಚಾರದ ಅವಧಿ ಶೀಘ್ರದಲ್ಲಿಯೇ 1 ಗಂಟೆಗೆ ಇಳಿಕೆಯಾಗಲಿದೆ.
ನೈಋತ್ಯ ರೈಲ್ವೆ ಬೆಂಗಳೂರು- ತುಮಕೂರುನಡುವಿನ 70 ಕಿ. ಮೀ. ಮಾರ್ಗದಲ್ಲಿ ವಿದ್ಯುತೀಕರಣ ಕಾಮಗಾರಿಯನ್ನು ಕೈಗೊಂಡಿದೆ. ಈ ಕಾಮಗಾರಿಗಳು ಪೂರ್ಣಗೊಂಡ ಪ್ರಯಾಣದ ಅವಧಿ 1 ಗಂಟೆ 30 ನಿಮಿಷದಿಂದ 1 ಗಂಟೆಗೆ ಕಡಿಮೆಯಾಗಲಿದೆ.
ಬೆಂಗಳೂರು-ತುಮಕೂರು ನಡುವೆ ಜೋಡಿ ಹಳಿಯಲ್ಲಿ ಬೆಂಗಳೂರು-ಚಿಕ್ಕಬಣಾವರ ನಡುವಿನ ವಿದ್ಯುತೀಕರಣ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಮಾರ್ಗದ ಕಾಮಗಾರಿ 6 ರಿಂದ 8 ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ರಾಜಧಾನಿ ಬೆಂಗಳೂರು ಮತ್ತು ತುಮಕೂರು ನಡುವೆ ಸುಮಾರು 40 ರೈಲುಗಳು ಸಂಚಾರ ನಡೆಸುತ್ತವೆ. ಪ್ರತಿದಿನ 25 ಸಾವಿರಕ್ಕೂ ಅಧಿಕ ಜನರು ಸಂಚಾರ ನಡೆಸುತ್ತಾರೆ ಎಂದು ಅಂದಾಜಿಸಲಾಗಿದೆ. ಪ್ರಯಾಣದ ಅವಧಿ ಕಡಿತವಾದರೆ ಜನರಿಗೆ ಸಹಾಯಕವಾಗಲಿದೆ.